
ಡಾ. ಬ್ರೋ ಇಂದು ಪ್ರತಿಯೊಬ್ಬರಿಗೂ ಚಿರಪರಿಚಿತ. ತಮ್ಮದೇ ಯೂಟ್ಯೂಬ್ ಮೂಲಕ ಫೇಮ್ ಕ್ರಿಯೇಟ್ ಮಾಡಿಕೊಂಡು ತಮ್ಮ ವೀಕ್ಷಕರ ಅಭಿರುಚಿಗೆ ತಕ್ಕಂತೆ ವಿಭಿನ್ನ ರೀತಿಯಲ್ಲಿ ದೇಶ, ವಿದೇಶ ಪ್ರವಾಸ ಮಾಡುತ್ತಾ , ಇದ್ದ ಕಂಟೆಂಟ್ ಅನ್ನು ನೈಜ ರೀತಿಯಲ್ಲಿ ತೋರ್ಪಡಿಸುವ ಮೂಲಕ ತನ್ನ ಪ್ರವಾಸ ವಿಡಿಯೋವನ್ನು ಹಂಚಿಕೊಳ್ಳುತ್ತಾರೆ. ಆದ್ರೆ ಇವರು ಇತ್ತೀಚಿನ ದಿನದಲ್ಲಿ ಯೂಟ್ಯೂಬ್‌ನಲ್ಲಿ ಯಾವುದೇ ಕಂಟೆಂಟ್ ಅಪ್ಲೋಡ್ ಮಾಡದೇ ಸೈಲೆಂಟ್ ಆಗಿದ್ದರು. ಅಭಿಮಾನಿಗಳು ಇವರ ವಿಡಿಯೋಗಾಗಿ ಬಹಳಷ್ಟು ವೈಟಿಂಗ್ ನಲ್ಲಿ ಇದ್ದರು. ಕೊನೆಯದಾಗಿ ನವೆಂಬರ್ 29ರಂದು ವಿಡಿಯೋ ಅಪ್ಲೋಡ್ ಮಾಡಿದ್ದ ಇವರು ಬಳಿಕ ಯಾವುದೇ ವಿಡಿಯೋ ಅಪ್ಲೋಡ್ ಮಾಡಿರಲಿಲ್ಲ.
ಇದೇ ವಿಚಾರದಲ್ಲಿ ಕಂಟೆಂಟ್ ಅಪ್ಲೋಡ್ ಮಾಡಿಲ್ವಾ?
ಎರಡು ತಿಂಗಳ ಹಿಂದೆ ಅವರು, ಚೀನಾ ದೇಶದ ವಿಡಿಯೋವನ್ನು ಮಾಡಿ, ಅಲ್ಲಿನ ಶೈಕ್ಷಣಿಕ ವ್ಯವಸ್ಥೆ ಹಾಗೂ ಭಾರತದ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದರು ಈ ಮಾತಿಗೆ ಹಲವು ರೀತಿಯ ಆಕ್ಷೇಪಣೆ ಕೇಳಿಬಂದಿದ್ದವು. ಚೀನಾ ದೇಶದ ಸರ್ಕಾರ ಅವರನ್ನು ಅರೆಸ್ಟ್ ಮಾಡಿದ್ರು ಅಂತೆ, ಹೀಗೆ ಹೊಲಿಕೆ ಮಾಡುವುದು ತಪ್ಪು ಅವರನ್ನು ದೇಶ ದ್ರೋಹಿ ಅಂತ ಹೇಳಿದ್ದಕ್ಕೆ ವಿಡಿಯೋ ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರಂತೆ ಇಂತಹ ಊಹಾಪೋಹಗಳು ಕೇಳಿಬಂದಿದ್ದವು. ಅದರೆ ಇದಕ್ಕೆಲ್ಲಾ ಡಾ. ಬ್ರೋ ಹೊಸ ಪೋಟೋ ಲುಕ್ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ.
ಹೊಸ ಉಡುಗೆಯಲ್ಲಿ ಮಿಂಚ್ಹಿಂಗ್
ಹೊಸ ಸಾಂಪ್ರದಾಯಿಕ ಉಡುಗೆಯಲ್ಲಿ ಡಾ ಬ್ರೋ ಕಾಣಿಸಿಕೊಂಡಿದ್ದಾರೆ. ಹೌದು ಸೈಕಲ್ ಮೇಲೆ ಕುಳಿತಿರುವ ಡಾ. ಬ್ರೋ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಸೈಕಲ್ ಸವಾರಿ ಮತ್ತು ಗಂಗಾರತಿ ಫೋಟೋದ ಜತೆ ಗೆ ಹೊಷ ವರ್ಷದಲ್ಲಿ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ.
ಅಯೋಧ್ಯೆ ದರ್ಶನ
ಹೊಸ ವರ್ಷದಂದು ಡಾ. ಬ್ರೋ ಅಯೋಧ್ಯೆ ದರ್ಶನ ಮಾಡಿಸಿದ್ದಾರೆ. ಶ್ರೀರಾಮನ ಜನ್ಮಭೂಮಿಯ ಸ್ಥಳದಲ್ಲಿ ಡಾಕ್ಟರ್ ಬ್ರೋ ದೇಶಿ ಶೈಲಿಯ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಬ್ರೋ ಗೆ ಫ್ಯಾನ್ಸ್ ಕಾಮೆಂಟ್ ಗಳ ಸುರಿಮಳೆ
ಡಾ, ಬ್ರೋ ಅವರು ಹೊಸ ಟ್ರಾವೆಲ್ ವಿಡಿಯೋ ಅಪ್ಲೋಡ್ ಮಾಡುವ ಸೂಚನೆ ಸಹ ನೀಡಿದ್ದಾರೆ. ಸೈಕಲ್ ಮೇಲೆ ಸಂಪ್ರಾದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಸೈಕಲ್ ಮೇಲೆ ಬಂದ್ರು ಸುನಾಮಿ ತರಾ ಬರ್ತೀರಿ ಬ್ರೋ, ಎಂಟ್ರಿ ಸೂಪರ್ ದೇವ್ರು, ಹೀಗೆ ನಾನಾ ರೀತಿಯ ಕಾಮೆಂಟ್ ನ್ನು ಅಭಿಮಾನಿಗಳು ನೀಡಿದ್ದಾರೆ. ಇದೀಗ ಹೊಸ ವರ್ಷದಲ್ಲಿ ಡಾ ಬ್ರೋ ಎಂಟ್ರಿ ಜೋರಾಗಿಯೇ ಇರಲಿದ್ದು ಇವರ ಅಭಿಮಾನಿಗಳಂತು ಮೋಸ್ಟ್ ವೈಟಿಂಗ್ ನಲ್ಲಿ ಇದ್ದಾರೆ.
