
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯಲ್ಲಿ ಯುವನಿಧಿ ಯೋಜನೆಯ ಸೌಲಭ್ಯ ಇನ್ನಷ್ಟೆ ದೊರಕಬೇಕಿದೆ. ನಿರುದ್ಯೋಗ ಯುವಕ ಯುವತಿಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು. ಈ ಯೋಜನೆ ಮೂಲಕ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ರೂ., ಡಿಪ್ಲೊಮಾ ಪಡೆದ ವಿದ್ಯಾರ್ಥಿಗಳಿಗೆ 1,500 ರೂ. ನೇರವಾಗಿ ಖಾತೆಗೆ ಜಮೆ ಮಾಡಲಿದ್ದು ಈಗಾಗಲೇ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಕೂಡ ನೀಡಲಾಗಿದೆ.
ಹಣ ಯಾವಾಗ ಜಮೆಯಾಗಲಿದೆ?
ಯುವನಿಧಿ ಯೋಜನೆಗೆ ಈಗಾಗಲೇ ಡಿಸೆಂಬರ್ 26 ರಂದು ನೋಂದಣಿ ಮಾಡಲು ಪ್ರಾರಂಭ ಮಾಡಿದ್ದು ಈ ಯೋಜನೆಯ ಹಣ ಇದೇ ತಿಂಗಳ ಸ್ವಾಮಿ ವಿವೇಕಾನಂದ ಜಯಂತಿಯಂದು ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಹಾಗಾಗಿ ನೊಂದಣಿ ಮಾಡದೇ ಇದ್ದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ದಾಖಲೆ ಕಡ್ಡಾಯ
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಕೆಲವು ದಾಖಲಾತಿ ಗಳು ಕಡ್ಡಾಯ ವಾಗಿದ್ದು ಅಂಕಪಟ್ಟಿ ಪ್ರತಿಗಳು, ಶಾಲಾ ದಾಖಲಾತಿ ಇತ್ಯಾದಿ ಕಡ್ಡಾಯವಾಗಿದೆ. ಅದೇ ರೀತಿ ಅರ್ಜಿ ಸಲ್ಲಿಸಿದ ದಿನಾಂಕದಿಂದ 6 ತಿಂಗಳ ವರೆಗೆ ಬ್ಯಾಂಕ್ ಖಾತೆಗಳ ವಹಿವಾಟು ಸ್ಟೇಟ್‌ಮೆಂಟ್ ನೀಡಬೇಕಾಗುತ್ತದೆ.
ಇವರು ಮಾತ್ರ ಅರ್ಹರು
ಯುವನಿಧಿ ಯೋಜನೆಯ ಹಣ ಪಡೆಯಲು ಪ್ರಸ್ತುತ ಪದವಿ ಅಥವಾ ಡಿಪ್ಲೋಮಾ ಮುಗಿಸಿ 6 ತಿಂಗಳಾದ್ರೂ ಉದ್ಯೋಗ ಸಿಗದವರು ಈ ಯೋಜನೆಯಡಿ ಹಣ ಪಡೆಯಲು ಮಾತ್ರ ಅರ್ಹರಾಗಿರುತ್ತಾರೆ. ನೋಂದಣಿ ಮಾಡುವ ಅಭ್ಯರ್ಥಿಗಳು 2022-23 ಶೈಕ್ಷಣಿಕ ವರ್ಷದಲ್ಲಿ ಡಿಪ್ಲೊಮಾ ಅಥವಾ ಪದವಿ ತೇರ್ಗಡೆಯಾಗಿದ್ದರೆ ಅರ್ಜಿ ಸಲ್ಲಿಸಬಹುದು.
ನೋಂದಾವಣೆ ಮಾಡಬಹುದು
ನಿರುದ್ಯೋಗ ಯುವಕ ಯುವತಿಯರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದ್ದು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ತಮ್ಮ ಹೆಸರನ್ನು ನೋಂದಾವಣೆ ಮಾಡಬಹುದಾಗಿದೆ.
