Home ಸರಕಾರಿ ಯೋಜನೆಗಳು ರಾಜ್ಯ ಸರಕಾರ ನೇಕಾರರಿಗೆ ರಾಜ್ಯ ಸರಕಾರದಿಂದ ಉಚಿತ ವಿದ್ಯುತ್ ಪೂರೈಕೆ

ನೇಕಾರರಿಗೆ ರಾಜ್ಯ ಸರಕಾರದಿಂದ ಉಚಿತ ವಿದ್ಯುತ್ ಪೂರೈಕೆ

0
ನೇಕಾರರಿಗೆ ರಾಜ್ಯ ಸರಕಾರದಿಂದ ಉಚಿತ ವಿದ್ಯುತ್ ಪೂರೈಕೆ

ಈಗಾಗಲೇ ಬಹಳಷ್ಟು ಜನರು‌ ಗೃಹಜ್ಯೋತಿ ಯೋಜನೆಯ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಸರಕಾರಿ ಶಾಲೆ, ಕೆಲವೊಂದು ಧಾರ್ಮಿಕ ಕೇಂದ್ರಗಳಿಗೂ ಉಚಿತ ವಿದ್ಯುತ್ ಅನ್ನು ರಾಜ್ಯ ಸರಕಾರ ಘೋಷಣೆ ಮಾಡಿದೆ. ಗೃಹಜ್ಯೊತಿ ಯೋಜನೆ‌ ಇಂದಾಗಿ ಸಾಕಷ್ಟು ಮಧ್ಯಮ ವರ್ಗದ ಕುಟುಂಬಕ್ಕೆ ಸಹಾಯಕವಾಗಿದ್ದು ಜಿರೋ ಬಿಲ್ ವಿದ್ಯುತ್ ಪಡೆಯುತ್ತಿದ್ದಾರೆ. ಇದೀಗ ನೇಕಾರರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುವ ವಿಚಾರ ಮತ್ತಷ್ಟು ಖುಷಿ ಸಿಕ್ಕಿದಂತಾಗಿದೆ.

ನೇಕಾರಿಕೆಗೆ ಉತ್ತೇಜನ
ಇಂದು ಆಧುನಿಕರಣ ಬೆಳೆದಂತೆ ಕೆಲ ವೊಂದು ವೃತ್ತಿ ಶೈಲಿಗಳು ಬದಲಾಗಿವೆ. ಅದರಲ್ಲೂ ರಾಜ್ಯದಲ್ಲಿ ನೇಕಾರ ವೃತ್ತಿ ಕಡಿಮೆ ಆಗುತ್ತಿದ್ದು ಅವರನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಉಚಿತ ವಿದ್ಯುತ್ ಪೂರೈಕೆ ಮಾಡಲು ತಿರ್ಮಾನಿಸಿದೆ. ಹೌದು ನೇಕಾರರಿಗೆ 1ರಿಂದ 10HP ವಿದ್ಯುತ್ ಪೂರೈಸಲು ರಾಜ್ಯ ಸರಕಾರ ಆದೇಶ ನೀಡಿದ್ದು 10ರಿಂದ 20HP ವರೆಗಿನ ವಿದ್ಯುತ್ ಅನ್ನು ಕೈ ಮಗ್ಗಕ್ಕೆ ಬಳಸುವುದಕ್ಕೆ ರಿಯಾಯಿತಿ ನೀಡಲಾಗಿದೆ.

ಸಾಲ ಸೌಲಭ್ಯ
ಪ್ರಧಾನಮಂತ್ರಿ ಮುದ್ರಾ ಯೋಜನೆ ಮೂಲಕ ಕೈಮಗ್ಗ ನೇಕಾರರಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಸೌಲಭ್ಯ ನೀಡಲಾಗುತ್ತಿದೆ.ಅಗತ್ಯ ರಾಷ್ಟ್ರೀಕೃತ ಬ್ಯಾಂಕುಗಳಿಂದ ಬೇಕಾದ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತದೆ. ಅದೇ ರೀತಿ ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ಬಿಡುಗಡೆ ಮಾಡಿದೆ.

ನೇಕಾರ ಸಮ್ಮಾನ್ ಯೋಜನೆಯಡಿ ಸಹಾಯಧನ

ರಾಜ್ಯದಲ್ಲಿ ನೇಕಾರರ ಅಭಿವೃದ್ಧಿ ಗಾಗಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದ್ದು ಅವರಿಗೆ ಸಹಾಯಧನ ಕೂಡ ಒದಗಿಸಲಾಗುತ್ತದೆ. ಇದಕ್ಕಾಗಿ 3,000 ರೂ. ಗಳಿಂದ 5,000 ರೂ. ಗಳ ವರೆಗೆ ಸಹಾಯಧನವನ್ನು ಹೆಚ್ಚಿಸಲಾಗಿದೆ. ಅದೇ ರೀತಿ ಜವಳಿ ಮತ್ತು ಉಡುಪು ಘಟಕಗಳಿಗೆ ಶೇ.50 ರಷ್ಟು ಅಂದರೆ ಗರಿಷ್ಠ 50 ಲಕ್ಷ ರೂ. ಗಳ ಬಂಡವಾಳ ಸಹಾಯಧನ ನೀಡಲಾಗುತ್ತದೆ.

 

LEAVE A REPLY

Please enter your comment!
Please enter your name here