
ಚಿನ್ನ ಪ್ರತಿಯೊಬ್ಬ ವ್ಯಕ್ತಿಯು ಇಷ್ಟ ಪಡುತ್ತಾನೆ. ಅದರಲ್ಲೂ ಮನೆಯ ಹೆಂಗಳೆಯರಂತು ಚಿನ್ನ ಖರೀದಿ ಮಾಡುವ ಬಗ್ಗೆ ಯೋಚಿಸುತ್ತಾ ಇರುತ್ತಾರೆ. ಇಂದು ಮಾರುಕಟ್ಟೆಗೂ ವಿವಿಧ ವಿನ್ಯಾಸದ ಆಭರಣ ಬಂದಿದ್ದು ಬೇಡಿಕೆ ಕೂಡ ಹೆಚ್ಚಾಗಿದೆ. ಇಂದು ಹೂಡಿಕೆ ಅಂತ ಬಂದಾಗ ಮೊದಲೇ ಆಯ್ಕೆಯೇ ಚಿನ್ನವಾಗಿರುತ್ತದೆ. ಯಾಕಂದ್ರೆ ಕಷ್ಟ ಕಾಲದ ಸಂದರ್ಭದಲ್ಲಿ ನೆರವಿಗೆ ಬರುವಂತದ್ದು ಚಿನ್ನವೇ ಆಗಿದೆ.
ಇದರ ಮೇಲೆ ಚಿನ್ನದ ಮೇಲೆ ಹೂಡಿಕೆ ಮಾಡಬಹುದು
ಡಿಜಿಟಲ್ ಚಿನ್ನ
ಡೆರಿವೆಟಿವ್ ಒಪ್ಪಂದಗಳು
ಕಾಗದದ ರೂಪದಲ್ಲಿನ ಚಿನ್ನ
ಚಿನ್ನದ ವಸ್ತು
ಮೂಲ ದಾಖಲೆ ಅಗತ್ಯ
ನೀವು ಲೆಕ್ಕಕ್ಕಿಂತ ಹೆಚ್ಚು ಚಿನ್ನವನ್ನು ಸಂಗ್ರಹ ಮಾಡಿಟ್ಟರೆ ನಿಮ್ಮಲ್ಲಿ ಹಣದ ಮೂಲ ದಾಖಲೆಗಳು ಯಾವುದು ಎಂಬುದನ್ನು ಖಚಿತ ಪಡಿಸಬೇಕಿದೆ. ಅಂದರೆ ಮದುವೆ ಮಹೀಳೆ 500ಗ್ರಾಂ ಚಿನ್ನ ಮನೆಯಲ್ಲಿ ಸಂಗ್ರಹ ಮಾಡಬಹುದಾಗಿದ್ದು ಮದುವೆ ಯಾಗದ ಮಹೀಳೆ 250ಗ್ರಾಂ, ಪುರುಷರು 100ಗ್ರಾಂ ವರೆಗೆ ಚಿನ್ನ ಹೂಡಿಕೆ ಮಾಡಲು ಅವಕಾಶ ಇದೆ.
ತೆರಿಗೆ ನೀಡಬೇಕು
ನೀವು ಮಿತಿಗಿಂತ ಹೆಚ್ಚು ಚಿನ್ನ ಖರೀದಿ ಮಾಡಿದ್ದರೆ ಆದಾಯ ತೆರಿಗೆ ಇಲಾಖೆ ನಿಯಮದ ಪ್ರಕಾರ ತೆರಿಗೆ ಕಟ್ಟಬೇಕಾಗಿರುವುದು ಕಡ್ಡಾಯ.ಅದೇ ರೀತಿ ನಿಮ್ಮಲಿರುವ ಚಿನ್ನವನ್ನು ಮೂರು ವರ್ಷಕ್ಕಿಂತ ಹೆಚ್ಚು ಸಮಯ ಇಟ್ಟುಕೊಂಡು ನಂತರ ಅದನ್ನು ಮಾರಾಟ ಮಾಡಿದರೆ ಲಾಂಗ್ ಟರ್ಮ್ ಕ್ಯಾಪಿಟಲ್ ಟ್ಯಾಕ್ಸ್ ಅನ್ನು ಸಹ ನೀವು ಪಾವತಿ ಮಾಡಬೇಕು. ಈ ತೆರಿಗೆ ಪ್ರಮಾಣವು ಹೂಡಿಕೆ ಮೊತ್ತಕ್ಕೆ ಅನ್ವಯಿಸಿ ನೀವು ಪಡೆಯುವ ಪ್ರಯೋಜನದ ಶೇಕಡಾ 20ರಷ್ಟು ಪ್ರಮಾಣ ಆಗಿರುತ್ತದೆ.
ಆದಾಯ ತೆರಿಗೆ ಕಾಯ್ದೆ
ತಜ್ಞರ ಪ್ರಕಾರ, ತಮ್ಮ ಲೆಕ್ಕಾಚಾರದ ಮೂಲಕ ದಾಖಲೆಯನ್ನು ಇಡಬೇಕು. ಹಾಗಿದ್ದಲ್ಲಿ ಮಾತ್ರ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 44AD ಅಡಿಯಲ್ಲಿ ಅನುಕೂಲ ಸಿಗುತ್ತದೆ. ಚಿನ್ನದ ಹೂಡಿಕೆಯ ಮೇಲಿನ ತೆರಿಗೆಯು ತೆರಿಗೆದಾರರ ಹಿಡುವಳಿ ಅವಧಿಯನ್ನು ಅವಲಂಬಿಸಿರುತ್ತದೆ. ಅದೇ ರೀತಿ ನೀವು ಚಿನ್ನವನ್ನು ಉಡುಗೊರೆಯಾಗಿ ಅಥವಾ ಪಿತ್ರಾರ್ಜಿತವಾಗಿ ಕೂಡ ಪಡೆದಿದ್ದರೆ ಅದನ್ನು ದಾಖಲೆ ಮೂಲಕ ನೀಡಬೇಕಾಗುತ್ತದೆ.
