Home ಆರೋಗ್ಯ ಮೆಂತೆ ಕಾಳಿನಲ್ಲಿದೆ ಹಲವಾರು ಔಷಧೀಯ ಗುಣ

ಮೆಂತೆ ಕಾಳಿನಲ್ಲಿದೆ ಹಲವಾರು ಔಷಧೀಯ ಗುಣ

0
ಮೆಂತೆ ಕಾಳಿನಲ್ಲಿದೆ ಹಲವಾರು ಔಷಧೀಯ ಗುಣ

ಮೆಂತೆ ಕಾಳು ತಿಂದರೆ ಅದು ತುಂಬಾ ಕಹಿ ಎನ್ನುವ ಕಾರಣಕ್ಕಾಗಿ ಹೆಚ್ಚಿನವರು ಇದನ್ನು ದೂರ ಇಡುತ್ತಾರೆ. ಆದರೆ ಇದರಲ್ಲಿ ಹಲವಾರು ರೀತಿಯ ಆರೋಗ್ಯ ಪ್ರಯೋಜನ ಇದೆ. ಕಬ್ಬಿಣಾಂಶ, ವಿಟಮಿನ್ ಎ, ವಿಟಮಿನ್ ಡಿ ಕೂಡ ಇದರಲ್ಲಿ ಇದ್ದು ಸರಿಯಾದ ಕ್ರಮದಲ್ಲಿ ಮೆಂತೆ ಬಳಸಿಕೊಂಡರೆ, ದೇಹದ ಆರೋಗ್ಯ ಕಾಪಾಡಿಕೊಳ್ಳಲು ಬಹಳ ಒಳ್ಳೆಯದು. ಇನ್ನು ಮೆಂತೆ ಕಾಳುಗಳು ಆಯುರ್ವೇದದಲ್ಲಿ ಬಹಳ ಹಿಂದಿನಿಂದಲೂ ಆರೋಗ್ಯಕಾರಿ ಪ್ರಯೋಜನಗಳ ಪಟ್ಟಿಯಲ್ಲಿ ಸೇರಿದ್ದು ಪ್ರತಿ ಆಹಾರದಲ್ಲೂ ಇದರ ಪ್ರಮಾಣ ಮುಖ್ಯ ವಾಗಿರುತ್ತದೆ.

ಆರೋಗ್ಯಕರ ಪ್ರಯೋಜನ

*ಮೆಂತೆ ಕಾಳಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಹಲವು ರೋಗ ರುಜಿನಗಳಿಗೆ ರಾಮ ಬಾಣ. ಇದು ಉರಿಯೂತ ಶಮನಕಾರಿ ಗುಣಗಳನ್ನು ಹೋಗಲಾಡಿಸಲು ನೇರವಾಗುತ್ತದೆ. ಚರ್ಮದ ಆರೋಗ್ಯಕ್ಕೆ ಅತೀ ಅಗತ್ಯ. ಸುಟ್ಟ, ಬಿಸಿ ನೀರು ಬಿದ್ದ, ಗಾಯ, ಮೊಡವೆ, ಕೆಲವು ಇತರ ಚರ್ಮದ ಉರಿಯೂತ ನಿವಾರಣೆ ಮಾಡುತ್ತದೆ.

*ಕೂದಲಿನ ಆರೋಗ್ಯಕ್ಕೂ ಮೆಂತೆ ಕಾಳುಗಳು ಬಹಳ ಪ್ರಯೋಜನಕಾರಿ. ಇದರ ಪೇಸ್ಟ್ ಮಾಡಿಕೊಂಡು ನೀವು ಕೂದಲಿಗೆ ಹಚ್ಚಿದರೆ ಜಿಡ್ಡು, ಹೊಟ್ಟು ಇತ್ಯಾದಿ ನಿವಾರಣೆ ಆಗುತ್ತದೆ. ತೆಂಗಿನೆಣ್ಣೆಯಲ್ಲಿ ರಾತ್ರಿ ವೇಳೆ ನೆನೆಸಿಟ್ಟ ಮೆಂತ್ಯೆ ಕಾಳುಗಳನ್ನು ಬೇಯಿಸಿ ತಲೆಗೆ ಸವರಿದರೆ ಒಳ್ಳೆಯದು.

*ಮೆಂತೆ ಕಾಳಿನ ನೀರಿನ ಸೇವನೆಯು ದೇಹದಲ್ಲಿ ಶಾಖವನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಇದು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

*ಮೆಂತೆ ನೀರಿನ ನಿಯಮಿತ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

*ಮಂತೆ ಯನ್ನು ಪುಡಿಮಾಡಿ ಅದಕ್ಕೆ ಅಲೋವೆರಾ ಸೇರಿಸಿ. ನಂತರ ಅದನ್ನು ನಿಮ್ಮ ಕೂದಲಿಗೆ ಸವರಿದರೆ ಇದು ನಿಮ್ಮ ಕೂದಲನ್ನು ಒಳಗಿನಿಂದ ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ.

*ಮೆಂತೆ ಕಾಳಿನ ಪೇಸ್ಟ್ ಬಳಸಿಕೊಂಡು ಸುಟ್ಟ ಗಾಯ ನಿವಾರಣೆ ಮಾಡಬಹುದು. ಮೆಂತೆ ಪೇಸ್ಟ್ ಮಾಡಿ ಮತ್ತು ಅದಕ್ಕೆ ಜೇನುತುಪ್ಪ ಹಾಕಿಕೊಂಡು ಮಿಶ್ರಣ ಮಾಡಿ. ಮೊಡವೆ ಇರುವ ಜಾಗಕ್ಕೆ ಹಚ್ಚಿಕೊಂಡರೆ ನಿವಾರಣೆ ಯಾಗುತ್ತದೆ. ಮೆಂತೆಯು ಹೆಚ್ಚಿರುವ ಕೊಲೆಸ್ಟ್ರಾಲ್ ಅಂಶವನ್ನು ತೆಗೆದುಹಾಕಿ ತೂಕ ಹೆಚ್ಚಿದ್ದರೆ ಕಡಿಮೆ ಮಾಡುತ್ತದೆ.

*ಖಾಲಿ ಹೊಟ್ಟೆಯಲ್ಲಿ ಮೆಂತೆ ನೆನೆಸಿದ ನೀರನ್ನು ಕುಡಿದರೆ ಇದು ಕಿಡ್ನಿಯಲ್ಲಿ ಕಲ್ಲನ್ನು ಹೊರಹಾಕಲು ನೆರವಾಗುತ್ತದೆ.

 

LEAVE A REPLY

Please enter your comment!
Please enter your name here