Home ಅಂಕಣ ಈ ವಸ್ತುಗಳು ಮನೆಯಲ್ಲಿದ್ದರೆ ನಿಮಗೆ ಆರ್ಥಿಕ ಪ್ರಗತಿ ಗ್ಯಾರಂಟಿ

ಈ ವಸ್ತುಗಳು ಮನೆಯಲ್ಲಿದ್ದರೆ ನಿಮಗೆ ಆರ್ಥಿಕ ಪ್ರಗತಿ ಗ್ಯಾರಂಟಿ

0
ಈ ವಸ್ತುಗಳು ಮನೆಯಲ್ಲಿದ್ದರೆ ನಿಮಗೆ ಆರ್ಥಿಕ ಪ್ರಗತಿ ಗ್ಯಾರಂಟಿ

ಮನೆ ಅಂತ ಬಂದಾಗ ಅಲ್ಲಿನ ಅಭಿವೃದ್ಧಿ ಸಹ ಅಷ್ಟೆ ಮುಖ್ಯವಾಗುತ್ತದೆ.‌ ಮನೆಯಲ್ಲಿ ಶಾಂತಿ, ಸಮೃದ್ಧಿ ಇದ್ದರೆ ಮಾತ್ರ ಮನೆಗೂ ಒಂದು ಕಳೆ ಇದ್ದಂತೆ. ಕೆಲವೊಮ್ಮೆ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟರೆ ಆರ್ಥಿಕ ಅಭಿವೃದ್ಧಿ ಯೊಂದಿಗೆ ನೆಮ್ಮದಿಯು ತರುತ್ತದೆ. ಹಾಗಿದ್ರೆ ಮನೆಯ ಸುತ್ತಮುತ್ತ, ಮನೆಯ ಒಳಗೆ ಏನೆಲ್ಲಾ ವಸ್ತುಗಳಿದ್ದರೆ ಒಳಿತು ಎಂಬ ಮಾಹಿತಿ ಇಲ್ಲಿದೆ.

ಈ ಗಿಡಗಳು ಇರಬೇಕು
ತುಳಸಿಗಿಡ
ಎಲ್ಲರ ಮನೆಯ ಮುಂದೆ ತುಳಸಿ ಕಟ್ಟೆ ಇದ್ದೇ ಇರುತ್ತದೆ. ಮನೆಯ ಮುಂದೆ ಬೆಳೆಸಿದ ತುಳಸಿ ಗಿಡ ಬೆಳೆದರೆ ಮನೆಯು ಅಭಿವೃದ್ಧಿ ಹೊಂದಿದಂತೆ. ಇದೇ ತುಳಸಿ ಮನೆಯ ಆರ್ಥಿಕ ಸಬಲತೆಗೆ ಬಹಳ ಮುಖ್ಯ. ಹೌದು ಮನೆಯ ಮುಂದೆ ತುಳಸಿ ಗಿಡಗಳನ್ನು ನೆಟ್ಟರೆ ಬಹಳ ಪ್ರಯೋಜನ. ಈ ಗಿಡವನ್ನು ದೇವರಾದ ವಿಷ್ಣು ಮತ್ತು ದೇವತೆಯಾದ ಲಕ್ಷ್ಮೀಗೆ ಹೋಲಿಸಲಾಗುತ್ತದೆ.

ಮನಿ ಪ್ಲಾಂಟ್
ಇದು ಮನೆಯಲ್ಲಿ ಸಂಪತ್ತು ವೃದ್ದಿ ಮಾಡುತ್ತದೆ ಎಂಬ ನಂಬಿಕೆ ಹಲವಾರು ಜನರಲ್ಲಿ ಇದೆ. ಇದು ಮನೆಯಲ್ಲಿ ಸಂತೋಷವನ್ನು ಹೆಚ್ಚು ಮಾಡಲು ಸಹಕಾರಿಯಾಗುತ್ತದೆ. ಅದರಲ್ಲೂ ಮನೆಯ ಮುಖ್ಯ ದ್ವಾರದಲ್ಲಿ ಬೆಳೆಸಿದ್ರೆ ಬಹಳ ಉತ್ತಮ ಎನ್ನಲಾಗುತ್ತದೆ.

ನಿಂಬೆ ಗಿಡ
ಅದೇ ರೀತಿ ನಿಂಬೆ ಗಿಡವನ್ನು ಮಂಗಳಕರ ಎಂದು ಹಿಂದಿನ ಕಾಲದಿಂದಲೂ ಕೇಳಿಬಂದಿರುವ ಮಾತು. ನಿಂಬೆ ಗಿಡವನ್ನು ಮನೆಯ ಮುಂದೆ ನೆಟ್ಟರೆ ಆದಾಯ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯು ಸಹ ಇದೆ.

ಈ ವಸ್ತು ಇರಬೇಕು

ಕುಬೇರನ ವಿಗ್ರಹ
ಅದೇ ರೀತಿ ಮನೆಯಲ್ಲಿ ಕುಬೇರನ ವಿಗ್ರಹ ಇದ್ದರೆ ಬಹಳ ಒಳಿತು. ಇದು ಆರ್ಥಿಕ ಸಮೃದ್ಧಿಯ ಪ್ರತೀಕ ಎನ್ನಲಾಗುತ್ತದೆ.‌ ಯಾರ ಮನೆಯಲ್ಲಿ ಹಣ ನಿಲ್ಲುತ್ತಿಲ್ಲವೋ, ಆರ್ಥಿಕ ನಷ್ಟ ಉಂಟಾದರೆ ಮನೆಯಲ್ಲಿ ಕುಬೇರನ ಮೂರ್ತಿಯನ್ನು ಇರಿಸಿದರೆ ಸಂಪತ್ತು ಸಮೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಅಡಿಕೆ
ಅಡಿಕೆಯು ಯಾವುದೇ ಶುಭ ಸಮಾರಂಭಗಳಲ್ಲಿ ಮುಖ್ಯವಾಗಿದ್ದು ಶುಭಕರ ವಸ್ತು ಇದಾಗಿದೆ. ಇದಕ್ಕೆ ಉತ್ತಮ ಪ್ರಾಶಸ್ತ್ಯದ ಸ್ಥಾನವಿದೆ. ಇದರಿಂದ ಮನೆಯಲ್ಲಿ ಹಣದ ಕೊರತೆ ಹಾಗೂ ಧಾನ್ಯಗಳ ಕೊರತೆ ಎದುರಾಗುವುದಿಲ್ಲ ಎನ್ನುವ ನಂಬಿಕೆಯು ಸಹ ಇದೆ

ಲಾಫಿಂಗ್ ಬುದ್ದ
ಮನೆಯಲ್ಲಿ ಲಾಫಿಂಗ್ ಬುದ್ದನ ವಿಗ್ರಹ ಇದ್ದರೆ ಒಳಿತು. ಇದರಿಂದ ಕೂಡ ಸಂಪತ್ತು ವೃದ್ದಿಯಾಗುತ್ತದೆ ಎನ್ನುವ ನಂಬಿಕೆ ಕೂಡ ಇರಲಿದೆ. ಹಾಗಾಗಿ ಕಚೇರಿ, ಮನೆಗಳಲ್ಲಿ ಈ ವಿಗ್ರಹ ಇಟ್ಟರೆ ಉತ್ತಮ.

 

LEAVE A REPLY

Please enter your comment!
Please enter your name here