
ಸಾಮಾನ್ಯವಾಗಿ ಚಿನ್ನದ ಹಣ ಹೂಡಿಕೆ ಮಾಡಬೇಕು ಎಂದು ನಿರ್ಧರಿಸುವವರು ಆಭರಣ ಪ್ರೀಯರು. ಇಂದು ಚಿನ್ನದ ನಾಣ್ಯಗಳನ್ನು ಖರೀದಿ ಮಾಡುವ ಸಂಖ್ಯೆಯು ಹೆಚ್ಚಳವಾಗಿರುವುದನ್ನು ಕಾಣಬಹುದು. ಹಣ ಹೂಡಿಕೆಗೆ ಅತ್ಯಂತ ಉತ್ತಮ ಮಾರ್ಗ ಯಾವುದು ಎಂದು ಅಲೋಚನೆ ಮಾಡಿದ್ರೆ ಹೇಳುವ ಮಾತು ಚಿನ್ನ. ಇಂದು ಚಿನ್ನ ಖರೀದಿಯ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದ್ದು ಬೇಡಿಕೆಯು ಹೆಚ್ಚಳವಾಗಿದೆ. ಬೇರೆ ಎಲ್ಲ ರೀತಿಯ ಹೂಡಿಕೆಗೆ ಹೋಲಿಕೆ ಮಾಡಿದ್ರೆ ಚಿನ್ನದ ಮೇಲಿನ ಹೂಡಿಕೆಯು ಹಣದುಬ್ಬರದ ಹೊಡೆತವನ್ನು ದೃಢವಾಗಿ ಇರಿಸುವಂತೆ ಮಾಡುತ್ತದೆ.
ಹೊಸ ವರ್ಷದಲ್ಲಿ ಬೇಡಿಕೆ ಹೆಚ್ಚಳ
ಈ ಬಾರಿ ಹೊಸ ಹೊಸ ವರ್ಷಕ್ಕೆ ಚಿನ್ನ ಕೊಂಡುಕೊಳ್ಳಬೇಕು ಎಂದು ಯೋಚನೆ ಹೊಂದಿದ್ದರೆ ಇದೀಗ ಖರೀದಿ ಮಾಡಲು ಉತ್ತಮ ಅವಕಾಶ ಇದೆ. ಸದ್ಯ ಹೊಸ ವರ್ಷದಲ್ಲಿ ಚಿನ್ನದ ದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೊಸ ವರ್ಷದಲ್ಲಿ ಹೆಚ್ಚಿನ ಜನರು ಚಿನ್ನ ಖರೀದಿ ಮಾಡಿದ್ದು ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನ ಪ್ರಿಯರು ಚಿನ್ನ ಖರೀದಿ ಮಾಡಿ ಋಷಿಪಟ್ಟಿದ್ದಾರೆ.
ಎಷ್ಟಾಗಿದೆ ಬೆಲೆ?
ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 440 ಇಳಿಕೆಯಾಗಿದ್ದು ಆಭರಣ ಪ್ರೀಯರಿಗೆ ಖುಷಿ ಸುದ್ದಿ ಸಿಕ್ಕಿದಂತಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಪ್ರತಿ ಕೆಜಿಗೆ ರೂ 2000 ಕಡಿಮೆಯಾಗಿದೆ.ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ ರೂ. 58,100 ಆಗಿದ್ದು, ಮುಂಬೈ ,ಚೆನೈ ಕೊಲ್ಕತ್ತಾ, ನಗರಗಳಲ್ಲಿ ಇದರ ಬೆಲೆ ರೂ. 59,700, ರೂ. 58,100, ರೂ. 58,100 ಆಗಿದೆ.
ಬೆಳ್ಳಿ ಬೆಲೆ
ಇಂದು ರಾಜಧಾನಿಯಲ್ಲಿ ಪ್ರತಿ ಗ್ರಾಂ ಬೆಳ್ಳಿಯ ಬೆಲೆ ರೂ 76.60 ಕ್ಕೆ ನಿಗದಿಯಾಗಿದ್ದು, ರೂ 2 ರ ಬದಲಾವಣೆ ಕಂಡು ಬಂದಿದೆ. ಅಂದರೆ 1 ಕೆಜಿ ಬೆಳ್ಳಿಯ ಬೆಲೆ 76,600 ರೂ. ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 750 ರೂ. 7,500 ಹಾಗೂ ರೂ. 75,000 ಗಳು ಆಗಿದೆ.
ಹೆಚ್ಚಳ ವಾಗುವ ಸಾಧ್ಯತೆ
ವಿಶ್ವದ ಆರ್ಥಿಕ ಸ್ಥಿತಿಯು ಹದಗೆಟ್ಟರೆ ಚಿನ್ನದ ಬೆಲೆಗಳು ತ್ವರಿತ ದರದಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ. ಇನ್ನೂ ಕೆಲವೇ ದಿನಗಳಲ್ಲಿ ಈ ದರ ಹೆಚ್ಚಳ ಆಗುವ ಸಾಧ್ಯತೆ ಹೆಚ್ಚಿದೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ.
