Home ಸರಕಾರಿ ಯೋಜನೆಗಳು ರಾಜ್ಯ ಸರಕಾರ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದೀರಾ?ನಿಮಗಿದೆ ಈ ಸುದ್ದಿ

ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದೀರಾ?ನಿಮಗಿದೆ ಈ ಸುದ್ದಿ

0
ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದೀರಾ?ನಿಮಗಿದೆ ಈ ಸುದ್ದಿ

ಇಂದು ಆಹಾರ ಇಲಾಖೆಯಿಂದ ನೀಡಲಾಗುವ ರೇಷನ್ ಕಾರ್ಡ್ ಎಷ್ಟು ಮುಖ್ಯವಾಗಿರುವುದು ಎಂಬುದು ನಿಮಗೆಲ್ಲಾ ತಿಳಿದೆ ಇದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಅರ್ಥಿಕವಾಗಿ ಹಿಂದುಳಿದ, ಬಡತನ ವರ್ಗ ದಲ್ಲಿ‌ ಇರುವ ನಾಗರಿಕರಿಗೆ ಆಹಾರ ಧಾನ್ಯ ವಿತರಣೆ ಮಾಡಲು ಪಡಿತರ ಚೀಟಿಯನ್ನು ನೀಡಲಾಗುತ್ತದೆ.ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಇಂದಾಗಿ ರೇಷನ್ ಕಾರ್ಡ್​ಗಳಿಗೆ ಇಂದು ಬೇಡಿಕೆ ಹೆಚ್ಚಾಗಿದೆ ಎಂದು ಹೇಳಬಹುದು. ಆಹಾರ ಇಲಾಖೆಯ ಈ ರೇಷನ್ ಕಾರ್ಡ್ ಹೊಂದಿದ್ದರೆ ಮಾತ್ರ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸಾಧ್ಯ.

ಹೊಸ ಕಾರ್ಡ್ ಶೀಘ್ರವಾಗಿ ವಿತರಣೆ

ಆಹಾರ ಇಲಾಖೆ ಇಲ್ಲಿಯ ತನಕ ಸುಮಾರು ಮೂರು ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ಅರ್ಜಿಯನ್ನು ಹಂತ ಹಂತವಾಗಿ ಪರಿಶೀಲನೆ ಮಾಡಿದ್ದು ಈ ಬಗ್ಗೆ ಪಡಿತರದಾರರಿಗೆ ಗುಡ್ ನ್ಯೂಸ್ ನೀಡಿದೆ. ಸುಮಾರು 20 ಸಾವಿರಕ್ಕೂ ಹೆಚ್ಚಿನ ಪಡಿತರ ಚೀಟಿ ಪರಿಶೀಲನೆ ಮಾಡಲಾಗಿದ್ದು ಜನವರಿ 15ರ ಒಳಗೆ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎನ್ನಲಾಗಿದೆ.

ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿತ್ತು

ಹೊಸ ಆದ್ಯತಾ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ ನಲ್ಲಿ ಒಂದು ದಿನ ಮಾತ್ರ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.ಕಳೆದ ಒಂದು ವರ್ಷದಿಂದ ಹೊಸ ಕಾರ್ಡ್​ಗಳನ್ನು ವಿತರಣೆ ಮಾಡಿಲ್ಲ. ಇದೀಗ ಹೊಸದಾಗಿ ಕಾರ್ಡ್​ಗಳನ್ನು ಪರಿಶೀಲನೆ ಮಾಡಿ ರೇಷನ್ ಕಾರ್ಡ್ ನೀಡಲು ತೀರ್ಮಾನಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ಬಿಪಿಎಲ್​ ಕಾರ್ಡ್​ಗಳಾಗಿದ್ದು ಸರಿಯಾದ ಪರಿಶೀಲನೆಯೊಂದಿಗೆ, ಕಾರ್ಡ್‌ಗಳ ವಿತರಣೆ ಮಾಡಲಾಗುತ್ತದೆ.

ಇಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು

ಆಹಾರ ಇಲಾಖೆಯ ಅಧಿಕೃತ ತಾಣ https://ahara.kar.nic.in/ ಗೆ ಲಾಗ್ ಇನ್ ಆಗುವ ಮೂಲಕ ಇಲ್ಲಿ ಇ-ಸೇವೆಗಳ ಮೇಲೆ ಕ್ಲಿಕ್‌ ಮಾಡಿದ ನಂತರ https://ahara.kar.nic.in/lpg/ ಪುಟ ತೆರೆದು ಕೊಳ್ಳಾಗುತ್ತದೆ.ಇಲ್ಲಿ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದೆ. ಇನ್ನು ಕೆಲವೇ ದಿನದಲ್ಲಿ ಹೊಸ ಅರ್ಜಿ ನೊಂದಣಿ ಗೆ ಅವಕಾಶವೂ ಸಿಗಬಹುದು.

 

LEAVE A REPLY

Please enter your comment!
Please enter your name here