Home ಕರ್ನಾಟಕ ಕರಾವಳಿ ಪುತ್ತಿಗೆ ಪರ್ಯಾಯೋತ್ಸವ: ಹೊರಕಾಣಿಕೆ ಮೆರವಣಿಗೆಗೆ ಅದ್ಧೂರಿ ಚಾಲನೆ

ಪುತ್ತಿಗೆ ಪರ್ಯಾಯೋತ್ಸವ: ಹೊರಕಾಣಿಕೆ ಮೆರವಣಿಗೆಗೆ ಅದ್ಧೂರಿ ಚಾಲನೆ

0
ಪುತ್ತಿಗೆ ಪರ್ಯಾಯೋತ್ಸವ: ಹೊರಕಾಣಿಕೆ ಮೆರವಣಿಗೆಗೆ ಅದ್ಧೂರಿ ಚಾಲನೆ

ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ನಡೆಯುವ ಹೊರಕಾಣಿಕೆ ಸಮರ್ಪಣೆಗೆ ಇಂದು ಚಾಲನೆ ನೀಡಲಾಯಿತು. ಉಡುಪಿ ನಗರದ ಸಂಸ್ಕೃತ ಕಾಲೇಜಿನ ಬಳಿ ಇಂದು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮಠದ ದಿವಾನ ನಾಗರಾಜ್ ಆಚಾರ್ಯ, ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಹಾಗೂ ಪುತ್ತಿಗೆ ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಅವರು ಸಾಂಪ್ರದಾಯಿಕ ಹೊರಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ಸಂಸ್ಕೃತಿ ಕಾಲೇಜಿನ ಬಳಿಯಿಂದ ಆರಂಭಗೊಂಡ ಮೆರವಣಿಗೆ ರಥಬೀದಿಯ ಮೂಲಕ ಪುತ್ತಿಗೆ ಮಠಕ್ಕೆ ಸಾಗಿಬಂತು. ತಟ್ಟಿರಾಯ, ನಾಸಿಕ್ ಬ್ಯಾಂಡ್, ವಾದ್ಯ, ಸಿಡಿಮದ್ದು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು.

ಇಂದು ಸಾಂಪ್ರದಾಯಿಕ ಹೊರಕಾಣಿಕೆ ಜರುಗಿತು.

ನಾಳೆಯಿಂದ ಅದ್ದೂರಿ ಮೆರವಣಿಗೆ

ಮಂಗಳವಾರ ಸಾಂಪ್ರದಾಯಿಕ ಮೆರವಣಿಗೆಗೆ ಚಾಲನೆ ದೊರೆತಿದ್ದು, ಬುಧವಾರದಿಂದ ನಗರದ ಜೋಡುಕಟ್ಟೆಯಿಂದ ಅದ್ಧೂರಿ ಹೊರಕಾಣಿಕೆ ಮೆರವಣಿಗೆ ನಡೆಯಲಿದೆ.

ಮೆರವಣಿಗೆಯಲ್ಲಿ ಹೊರಕಾಣಿಕೆ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಮುಖರಾದ ರಮೇಶ್ ಭಟ್, ರಮೇಶ್ ಶೆಟ್ಟಿ, ಮಂಜುನಾಥ್ ಉಪಾಧ್ಯ, ರವೀಂದ್ರ ಆಚಾರ್ಯ, ವಿಜಯ ರಾಘವ ರಾವ್, ರಾಮಚಂದ್ರ ಉಪಾಧ್ಯಾಯ, ಶ್ರೀನಿವಾಸ ಉಪಾಧ್ಯಾಯ, ರಘುಪತಿ ರಾವ್, ಹಯವದನ ಭಟ್, ಸತೀಶ್ ಕುಮಾರ್, ಗೌತಮ್ ಹೆಗಡೆ, ದೀಪಕ್ ಶೇಟ್, ಕಿರಣ್ ಶೇಟ್, ರುದ್ರಯ್ಯ ಆಚಾರ್ಯ, ನಳಿನ್ ಪ್ರದೀಪ್ ರಾವ್, ಸಂದೀಪ್ ಮಂಜ, ನಾಗರಾಜ ಉಪಾಧ್ಯ, ಶೋಭಾ ಉಪಾಧ್ಯಾಯ, ಜಗದೀಶ್ ಶೇಟ್ ಮೊದಲಾದವರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here