Home ಕರ್ನಾಟಕ ಕರಾವಳಿ ಪುತ್ತಿಗೆ ಪರ್ಯಾಯೋತ್ಸವ; 5ನೇ ದಿನದ ಹೊರಕಾಣಿಕೆ ಸಮರ್ಪಣೆ

ಪುತ್ತಿಗೆ ಪರ್ಯಾಯೋತ್ಸವ; 5ನೇ ದಿನದ ಹೊರಕಾಣಿಕೆ ಸಮರ್ಪಣೆ

0
ಪುತ್ತಿಗೆ ಪರ್ಯಾಯೋತ್ಸವ; 5ನೇ ದಿನದ ಹೊರಕಾಣಿಕೆ ಸಮರ್ಪಣೆ

ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಐದನೇ ದಿನದ ಹೊರಕಾಣಿಕೆ ಸಮರ್ಪಣೆ ಶನಿವಾರ ನಡೆಯಿತು.

ಉಡುಪಿಯ ಪಣಿಯಾಡಿ ಊರವರಿಂದ ಹೊರೆಕಾಣಿಕೆಯು ಪಣಿಯಾಡಿ ಶ್ರೀ ಅನಂತಾಸನ ಶ್ರೀಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಕಡಿಯಾಳಿ, ಕಲ್ಸಂಕ ಮಾರ್ಗವಾಗಿ ಬಡಗುಪೇಟೆಯ ಮೂಲಕ ರಥಬೀದಿಗೆ ಬಂದು ಹೊರೆಕಾಣಿಕೆ ಉಗ್ರಾಣ ತಲುಪಿತು.

ಕಾಪು ತಾಲೂಕು, ಪಡುಬಿದ್ರೆ ವಲಯ, ಹೆಜಮಾಡಿ ವಲಯ, ಬೆಳ್ಮಣ್ಣು ವಲಯ, ಶಿರ್ವ ವಲಯ, ಕಟಪಾಡಿ ವಲಯ, ಅಲೆವೂರು ವಲಯ, ಉದ್ಯಾವರ ವಲಯದ ಹೊರೆಕಾಣಿಕೆಯು ಜೋಡುಕಟ್ಟೆಯಿಂದ ಕನಕದಾಸ ರಸ್ತೆ ಮೂಲಕ ಸಾಗಿ ಬಂತು.

ಮೆರವಣಿಗೆಯಲ್ಲಿ ಹೊರಕಾಣಿಕೆ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಗೀತಾಂಜಲಿ ಸುವರ್ಣ, ಕಾಪು ದಿವಾಕರ ಶೆಟ್ಟಿ, ಯೋಗೀಶ್ ಶೆಟ್ಟಿ, ಅಲೆವೂರು ಶ್ರೀಕಾಂತ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here