
ಉಡುಪಿ: ಪುತ್ತಿಗೆ ಶ್ರೀ ಸುಗುಣೇಂದ್ರ ಶ್ರೀಗಳ ವಿಶ್ವ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಜ.18ರಂದು (ಗುರುವಾರ) ನಡೆಯುವ ಅನ್ನ ಪ್ರಸಾದ ವಿತರಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ.
ನೂರಾರು ಮಂದಿ ಬಾಣಸಿಗರು ವಿವಿಧ ಭಕ್ಷ್ಯಗಳ ತಯಾರಿಯಲ್ಲಿ ತೊಡಗಿಸಿಕೊಂಡಿದ್ದು, ಇಲ್ಲಿನಮಧ್ವಾಂಗಣದಲ್ಲಿ ಭಕ್ಷ್ಯ ತಯಾರಿ ಕಾರ್ಯ ಭರದಿಂದ ಸಾಗುತ್ತಿದೆ.
…ಏನೇನಿದೆ..
ಮೈಸೂರುಪಾಕ್, ಸಾಟ್, ಜಿಲೇಬಿ, ಕಡಿ, ಮೋಹನ ಲಾಡು, ಹಯಗ್ರೀವ ಮಡ್ಡಿ ತಯಾರಿ ಮಾಡಲಾಗುತ್ತಿದೆ. ಅನ್ನ ಪ್ರಸಾದದ ಜತೆಗೆ ಜಿಲೇಬಿ, ಹಯಗ್ರೀವ ಮಡ್ಡಿ ವಿತರಣೆ ಮಾಡಲಾಗುತ್ತದೆ. ಊಟದ ಅನಂತರ ಪ್ರತ್ಯೇಕ ಪ್ಯಾಕೆಟ್‌ನಲ್ಲಿ ಸಾಟ್, ಮೋಹನಲಾಡು, ಕಡಿ ವಿತರಿಸಲಾಗುತ್ತದೆ.
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಶಯದಂತೆ ಐದು ಬಗೆಯ ಸಿಹಿ ಭಕ್ಷ್ಯವನ್ನು ವಿತರಿಸಲು ನಿರ್ಧರಿಸಲಾಗಿದೆ.
