Home ಕರ್ನಾಟಕ ಕರಾವಳಿ ಪುತ್ತಿಗೆ ಪರ್ಯಾಯೋತ್ಸವ: ಎಂಟನೇ ದಿನದ ಹೊರೆಕಾಣಿಕೆ ಸಮರ್ಪಣೆ

ಪುತ್ತಿಗೆ ಪರ್ಯಾಯೋತ್ಸವ: ಎಂಟನೇ ದಿನದ ಹೊರೆಕಾಣಿಕೆ ಸಮರ್ಪಣೆ

0
ಪುತ್ತಿಗೆ ಪರ್ಯಾಯೋತ್ಸವ: ಎಂಟನೇ ದಿನದ ಹೊರೆಕಾಣಿಕೆ ಸಮರ್ಪಣೆ

ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಎಂಟನೇ ದಿನದ ಹೊರಕಾಣಿಕೆ ಸಮರ್ಪಣೆ ಮಂಗಳವಾರ ಅದ್ದೂರಿಯಾಗಿ ನಡೆಯಿತು.

ಮೂಡನಿಡಂಬೂರು ಮಾಗಣೆ, ಕನ್ನರ್ಪಾಡಿ ಜಯದುರ್ಗಾಪರಮೇಶ್ವರಿ ದೇವಸ್ಥಾನ, ಬೈಲೂರು ಮಹಿಷಮರ್ಧಿನಿ ದೇವಸ್ಥಾನ ಮಾಗಣೆ, ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಭಕ್ತರು ಹಾಗೂ ಗ್ರಾಮಸ್ಥರು, ಬೊಬ್ಬರ್ಯ ಸೇವಾ ಸಮಿತಿ ಉಡುಪಿ ಇವರಿಂದ ಹೊರೆಕಾಣಿಕೆ‌ ಸಮರ್ಪಣೆ ನಡೆಯಿತು. ಹೊರೆಕಾಣಿಕೆ ಮೆರವಣಿಗೆಯು ಜೋಡುಕಟ್ಟೆಯಿಂದ ಹಳೆ ಡಯಾನ, ಕೆಎಂ ಮಾರ್ಗ, ತ್ರಿವೇಣಿ ಸರ್ಕಲ್, ಸಂಸ್ಕೃತ ಕಾಲೇಜು ಮೂಲಕ ಮುಖ್ಯ ರಸ್ತೆಯಲ್ಲಿ ಆಗಮಿಸಿ ರಥಬೀದಿಯ ಮೂಲಕ‌ ಪುತ್ತಿಗೆ ಮಠದತ್ತ ಸಾಗಿ ಬಂತು. ಮೆರವಣಿಗೆಯಲ್ಲಿ ಹಲವು ಕಲಾ ಪ್ರಕಾರಗಳು ಮತ್ತಷ್ಟು ಮೆರುಗು‌ ನೀಡಿತು. ತಟ್ಟಿರಾಯ, ಚೆಂಡೆ ಬಳಗ, ಹಲವು ನೃತ್ಯಗಳು, ಹಲವು ಭಜನಾ ತಂಡಗಳು ಮೆರವಣಿಗೆಯಲ್ಲಿತ್ತು.

ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ಹೊರಕಾಣಿಕೆ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಕೆ. ಉದಯ ಕುಮಾರ್ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ರಂಜನ್ ಕಲ್ಕೂರ್, ರಮೇಶ್ ಭಟ್, ಮಟ್ಟು ಲಕ್ಷ್ಮೀ ನಾರಾಯಣ ರಾವ್, ಮಂಜುನಾಥ್ ಉಪಾಧ್ಯ ಮತ್ತಿತರರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here