
ಉಡುಪಿ: ಉಡುಪಿ ಪುತ್ತಿಗೆ ಶ್ರೀಗಳ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರಿಗೆ ಇಂದು ಮತ್ತು ನಾಳೆ (ಜ.17,18) ಅನ್ನಪ್ರಸಾದ ವಿತರಣೆ ನಡೆಯಲಿದೆ.
ಭಕ್ತರಿಗೆ ಅನ್ನಪ್ರಸಾದ ವಿತರಣೆಗಾಗಿ ಈಗಾಗಲೇ ವಿಶಾಲವಾದ ಪ್ರತ್ಯೇಕ ಭೋಜನಶಾಲೆಗಳು ಸಿದ್ಧಗೊಂಡಿದ್ದು, ಬುಧವಾರ ರಾತ್ರಿ ಪರ್ಯಾಯಕ್ಕಾಗಿ ಆಗಮಿಸುವ ಭಕ್ತರಿಗೆ ಅನ್ನಪ್ರಸಾದ ತಯಾರಿ ಪಾಕ ತಜ್ಞರ ನೇತೃತ್ವದಲ್ಲಿ ನಡೆಯುತ್ತಿದೆ.
ಜನವರಿ 18 ರಂದು ಕೂಡ ಸಾವಿರಾರು ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯಲಿದ್ದು, ನೂರಾರು ಮಂದಿ ಪಾಕತಜ್ಞರಿಂದ ಪೂರ್ಣ ಪ್ರಮಾಣದ ಸಿದ್ದತೆ ನಡೆದಿದೆ.
