Home ಕರ್ನಾಟಕ ಕರಾವಳಿ ಪುತ್ತಿಗೆ ಸುಗುಣೇಂದ್ರ ಶ್ರೀಗಳ ಪರ್ಯಾಯೋತ್ಸವ: ಮೆರವಣಿಗೆಯಲ್ಲಿ ಮೇಳೈಸಿದ ಕಲಾ-ಸಾಂಸ್ಕೃತಿಕ ವೈಭವ

ಪುತ್ತಿಗೆ ಸುಗುಣೇಂದ್ರ ಶ್ರೀಗಳ ಪರ್ಯಾಯೋತ್ಸವ: ಮೆರವಣಿಗೆಯಲ್ಲಿ ಮೇಳೈಸಿದ ಕಲಾ-ಸಾಂಸ್ಕೃತಿಕ ವೈಭವ

0
ಪುತ್ತಿಗೆ ಸುಗುಣೇಂದ್ರ ಶ್ರೀಗಳ ಪರ್ಯಾಯೋತ್ಸವ: ಮೆರವಣಿಗೆಯಲ್ಲಿ ಮೇಳೈಸಿದ ಕಲಾ-ಸಾಂಸ್ಕೃತಿಕ ವೈಭವ

ಉಡುಪಿ: ಹರೇರಾಮ ದಶಾವತಾರ, ಮರಗಾಲು, ಪುಣೆ-ಮಹಾರಾಷ್ಟ್ರದ ತಾಲೀಮು, ತುಳುನಾಡ ಧ್ವಜ, ಶ್ರೀಗಳ ಗುರುಗಳ ಭಾವಚಿತ್ರ, ಮಹಿಳಾ ಹುಲಿವೇಷಧಾರಿಗಳು, ಆಂಜನಗಿರಿ ಬೆಟ್ಟ, ಕನಕದಾಸರ ಪ್ರತಿಮೆ, ಕಡೆಗೋಲು ಕೃಷ್ಣ, ಶ್ರೀರಾಮ, ಕಾಮಧೇನು, ಭೀಷ್ಮಾಚಾರ್ಯರು, ಆನೆ-ಮೊಸಳೆ, ವಾಲ್ಮಿಕಿ ಮಹರ್ಷಿ, ಜಿ.ಪಂ.ನ ಜಲಜೀವನ್ ಮಿಷನ್ ಅಭಿಯಾನದ ಪ್ರಾತ್ಯಕ್ಷಿಕೆ, ಅರಣ್ಯ ಇಲಾಖೆಯಿಂದ ಅರಣ್ಯ ಸಂರಕ್ಷಣೆಯ ಸಂದೇಶ ನೀಡುವ ಸ್ತಬ್ಧಚಿತ್ರ, ದ್ರೌಪದಿ ವಸ್ತ್ರಾಪಹರಣ ಹೋಲುವ ಟ್ಯಾಬ್ಲೋ, ಗೋವರ್ಧನ ಗಿರಿ, ಕೃಷಿ ಬದುಕಿನ ಅನಾವರಣಗೊಳಿಸುವ ಪಡಿ ಮಂಚ ಭತ್ತದ ಕಣದ-ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕೃಷಿ ಪದ್ಧತಿ ಸೊಗಡು….ಹೀಗೆ ನೂರಾರು‌ ಕಲಾ ಸಾಂಸ್ಕೃತಿಕ ಪ್ರಕಾರಗಳು ನೆರದಿದ್ದ ಸಾವಿರಾರು ಭಕ್ತರನ್ನು ರಂಜಿಸಿ,‌ ಮೂಕವಿಸ್ಮಿತರಾಗಿಸಿದ್ದು, ಪುತ್ತಿಗೆ ಪರ್ಯಾಯೋತ್ಸವದ ಮೆರವಣಿಗೆಯಲ್ಲಿ….

ಉಡುಪಿ ಕಿನ್ನಿ ಮುಲ್ಕಿಯ ಸ್ವಾಗತಗೋಪುರದಿಂದ ಆರಂಭಗೊಂಡ ಮೆರವಣಿಗೆ ಶ್ರೀಕೃಷ್ಣಮಠದವರೆಗೂ ಸಾಗಿಬಂತು. ಮೆರವಣಿಗೆ ಮೂಲಕ ಆಗಮಿಸಿದ ಪರ್ಯಾಯ ಶ್ರೀ ಪುತ್ತಿಗೆ ಶ್ರೀಗಳು ಜೋಡುಕಟ್ಟೆೆ ಮಂಟಪದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು. ಕೆ.ಎಂ. ಮಾರ್ಗ, ತಾ. ಕಚೇರಿ ರಸ್ತೆೆಯ ಮೂಲಕ ರಥಬೀದಿಗೆ ಸಾಗಿತು. ವಿವಿಧ ಸ್ತಬ್ಧಚಿತ್ರಗಳು, ಕಲಾತಂಡಗಳು ಮೆರವಣಿಗೆಯಲ್ಲಿ ಒಳಗೊಂಡಿದ್ದು ಸಾಂಪ್ರದಾಯಿಕತೆಗೆ ಆದ್ಯತೆ ನೀಡಲಾಗಿತ್ತು.

ಮೆರವಣಿಗೆ ಕಣ್ತುಂಬಿಕೊಂಡ ಭಕ್ತರು
ಪರ್ಯಾಯೋತ್ಸವವನ್ನು ಕಣ್ತಂಬಿಕೊಳ್ಳಲು ಬುಧವಾರ ಸಂಜೆಯಿಂದಲೇ ರಸ್ತೆೆಯ ಇಕ್ಕೆೆಲಗಳಲ್ಲಿ ಕಾದುಕುಳಿತ ಸಾರ್ವಜನಿಕರಿಗೆ ವಿವಿಧೆಡೆ ಆಯೋಜಿಸಲಾಗಿದ್ದ ಸಂಗೀತ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತಷ್ಟು ಮೆರುಗು ನೀಡಿತು. ರಥಬೀದಿ, ಹೊರೆಕಾಣಿಕೆ ಸ್ಥಳದ ಗದ್ದೆೆ, ಪೇಜಾವರ ಮಠದ ಮುಂಭಾಗ, ಶ್ರೀಕೃಷ್ಣ ಮಠದ ಎದುರು, ಕಿನ್ನಿಿಮೂಲ್ಕಿಿ, ಸರ್ವಿಸ್ ಬಸ್ ತಂಗುದಾಣ, ಹಳೆ ಕೆಎಸ್ಸಾಾರ್ಟಿಸಿ ಬಸ್ ತಂಗುದಾಣ, ತ್ರಿವೇಣಿ ಸರ್ಕಲ್, ತ್ರಿಿಶಾ ಸರ್ಜಿಕಲ್ ಬಳಿ, ಗಿರಿಜಾ ಸರ್ಜಿಕಲ್ ಬಳಿ, ಪುರಭವನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಎಲ್ಲ ಕಾರ್ಯಕ್ರಮದ ವೀಕ್ಷಣೆಗೂ ಭಾರೀ ಸಂಖ್ಯೆಯಲ್ಲಿ ಜನ‌ ಸೇರಿದ್ದರು.

ಸಾಂಸ್ಕೃತಿಕ ವೈಭವ

ಮೆರವಣಿಗೆಯ ಮತ್ತಷ್ಟು ಕಲಾ- ಸಾಂಸ್ಕೃತಿಕ ಪ್ರಕಾರಗಳಾದ ಕೊರಗರ ಡೋಲು, ತಾಲೀಮು ಪ್ರದರ್ಶನ, ಚಿಲಿಪಿಲಿ ಗೊಂಬೆ, ತಟ್ಟಿರಾಯ, ಕಂಬಳದ ಕೋಣ, ಶ್ರೀರಾಮ ಮಂದಿರದ ದೃಶ್ಯಾಾವಳಿ, ಜೈಶ್ರೀರಾಮ್ ಘೋಷಣೆ, ವೀರಗಾಸೆ, ಸ್ಕೌಟ್‌ಸ್‌-ಗೈಡ್‌ಸ್‌ ವಿದ್ಯಾರ್ಥಿಗಳು, ಪರಶುರಾಮ, ಹುಲಿ, ಕಂಸಾಳೆ, ಮಹಾರಾಷ್ಟ್ರದ ಡೋಲು ವಾದನ, ಭಗವತ್ಗೀತೆಯ ಸಾರ, ಶಿವನ ಬೃಹತ್ ವಿಗ್ರಹ, ಪತಂಜಲಿ ಯೋಗದ ಬಗೆಗಿನ ಮಾಹಿತಿ, ಮಲ್ಪೆೆ-ತೀರ್ಥಹಳ್ಳಿ ಚತುಷ್ಪಥ ರಸ್ತೆೆ ಅಭಿವೃದ್ಧಿ ಕುರಿತ ಟ್ಯಾಬ್ಲೋ, ದೋಣಿ, ನಗರಸಭೆಯ ಒಣತ್ಯಾಾಜ್ಯ ನಿರ್ವಹಣೆ ಘಟಕದ ಟ್ಯಾಾಬ್ಲೋ, ಭ್ರೂಣ ಲಿಂಗ ಪತ್ತೆೆ ಜಾಗೃತಿಯ ಟ್ಯಾಬ್ಲೋ, ಉಗ್ರ ನರಸಿಂಹ, ಕೊಂಬು, ಕಹಳೆ, ಪಟ್ಟದ ದೇವರ ಟ್ಯಾಬ್ಲೋಗಳು ಗಮನಸೆಳೆದವು.

 

LEAVE A REPLY

Please enter your comment!
Please enter your name here