
ಇಂದು ಪ್ರತಿಯೊಬ್ಬರು ಶಿಕ್ಷಣ ಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಆದರೆ ಶಿಕ್ಷಣ ಪಡೆದರೂ ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿ ಬಿಟ್ಟಿದೆ. ಹೀಗಾಗಿ ನಿರುದ್ಯೋಗ ಯುವಕ, ಯುವತಿಯರಿಗೆ ಆರ್ಥಿಕ ಸೌಲಭ್ಯ ನೀಡಲು ರಾಜ್ಯ ಸರಕಾರ ಮುಂದಾಗಿದೆ. ಇದಕ್ಕಾಗಿ ಹುಟ್ಟಿಕೊಂಡ ಯೋಜನೆಯೆ ಯುವ ನಿಧಿ ಯೋಜನೆ. ಇದೀಗ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಕೂಡ ನೀಡಲಾಗಿದ್ದು 2022-23ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೊಮಾ ಪೂರೈಸಿದ್ದ ನಿರುದ್ಯೋಗಿಗಳಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡಲು ಸರಕಾರ ಮುಂದಾಗಿದೆ.
ಅರ್ಜಿ ಪರಿಶೀಲನೆಗೆ ಕ್ರಮ
ಈಗಾಗಲೇ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದ್ದು ಮೊನ್ನೆಯಷ್ಟೆ ಈ ಯೋಜನೆಗೆ ಚಾಲನೆ ನೀಡಲಾಗಿತ್ತು.ಇದೀಗ ಈ ಯೋಜನೆಯ ಆನ್ಲೈನ್ ನಲ್ಲೇ ಅರ್ಜಿ ಪರಿಶೀಲನೆ ಮಾಡಲಾಗುತ್ತಿದ್ದು ಅರ್ಹರಿಗೆ ಶೀಘ್ರವೇ ಹಣ ಖಾತೆಗೆ ಬಂದು ಸೇರಲಿದೆ. ಆದ್ರೆ ಈ ಯೋಜನೆ ಪಡೆಯಲು ಯಾರು ಅರ್ಹರೋ ಅಂತವರಿಗೆ ಮಾತ್ರ ಹಣ ಜಮೆ ಮಾಡಲಾಗುತ್ತದೆ.
ಮಾನದಂಡಗಳ ಅರ್ಹತೆ
ಯುವನಿಧಿ ಯೋಜನೆ ಬಗ್ಗೆ ಇರುವ ಅರ್ಹತೆ ಇತರ ಮಾನದಂಡಗಳ ಬಗ್ಗೆ ಅರ್ಜಿ ಸಲ್ಲಿಕೆ ಮಾಡುವಾಗ ತಿಳಿದುಕೊಂಡಿರಬೇಕು. ಯಾರು ಕೂಡ ಸುಳ್ಳು ಮಾಹಿತಿ ದಾಖಲೆ ನೀಡುವಂತಿಲ್ಲ.ಈಗಾಗಲೇ ಅರ್ಜಿ ಅಕ್ರಮಗಳು ಹೆಚ್ಚಾಗಿ ನಡೆದಿದ್ದು ಈ ಬಗ್ಗೆ ಸರಕಾರದಿಂದಲೇ ಕೆಲ ಅಗತ್ಯ ಮುನ್ನೆಚ್ಚರಿಕೆ ಕೂಡ ನೀಡಲಾಗುತ್ತಿದೆ.
ಈ ನಿಯಮ ಕಡ್ಡಾಯ
ಪ್ರಸ್ತಕ ವರ್ಷದಲ್ಲಿ ಪದವಿ ಹಾಗೂ ಡಿಪ್ಲೊಮಾ ಪಡೆದು ಉದ್ಯೋಗ ಇಲ್ಲದೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು ಸ್ವ ಉದ್ಯೋಗ ಮಾಡುವವರು, ಉನ್ನತ ವ್ಯಾಸಾಂಗ ಮಾಡುವವರು, ಸರಕಾರಿ ಸಂಸ್ಥೆಯಲ್ಲಿ ಅಪ್ರೆಂಟಿಸ್ ಕೆಲಸ ಮಾಡುವವರು ಈ ಯೋಜನೆಗೆ ಅರ್ಹರಾಗುವುದಿಲ್ಲ.
ಕಟ್ಟು ನಿಟ್ಟಿನ ಕಾನೂನು ಕ್ರಮ ಜಾರಿ
ಫೇಕ್ ಮಾಹಿತಿ ನೀಡಿ ಸೌಲಭ್ಯ ಪಡೆದರೆ ಸರಕಾರ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲಿದೆ. ಅಂಥವರ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಪಡೆದ ಹಣವನ್ನು ಬಡ್ಡಿ ಸಮೇತ ಹಿಂಪಡೆಯಲಾಗುತ್ತದೆ.
