
ಮಂಗಳೂರು: ಭಾರತವು ಇಂದು ಆರ್ಥಿಕವಾಗಿ ಬಲಿಷ್ಠವಾಗಲು, ರಾಜತಾಂತ್ರಿಕ ಜಾಣ್ಮೆ, ರಾಷ್ಟ್ರೀಯವಾದ ಮತ್ತು ಹಿಂದೂ ಸಮಾಜದ ಗೌರವ, ಅಸ್ಮಿತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಇದೆಲ್ಲವೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದಿಂದ ಸಾಧ್ಯವಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.
ಲೋಕಸಭಾ ಚುನಾವಣೆಯ ಪ್ರಚಾರಾರ್ಥವಾಗಿ ಉತ್ತರ ವಿಧಾನಸಭಾ ಕ್ಷೇತ್ರದ ಕಾವೂರು ಗಾಂಧಿ ನಗರದಲ್ಲಿ ಬಿಜೆಪಿಯ ಗೋಡೆ ಬರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶವು ಕಳೆದ 10 ವರ್ಷಗಳಲ್ಲಿ ಅಮೂಲಾಗ್ರ ಬದಲಾವಣೆ ಕಂಡು ಬರುತ್ತಿದೆ. ಇದು ಮುಂದುವರಿಯಲು ಮತ್ತೆ ಬಿಜೆಪಿ ಸರಕಾರ ಚುಕ್ಕಾಣಿ ಹಿಡಿಯಬೇಕಿದೆ. ಬಿಜೆಪಿ ಕಾರ್ಯಕರ್ತರು ಲೋಕಸಸಭಾ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೇರಿಸಲು ಉತ್ಸಾಹದಲ್ಲಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ರಣತಂತ್ರ ರೂಪಿಸಲಾಗಿದೆ. ಇದರ ಒಂದು ಭಾಗವಾಗಿ ಗೋಡೆ ಬರಹಕ್ಕೆ ಚಾಲನೆ ನೀಡಲಾಗಿದೆ ಎಂದರು.
ಮಂಡಲ ಅಧ್ಯಕ್ಷರಾದ ತಿಲಕ್ ರಾಜ್ ಪ್ರ. ಕಾರ್ಯದರ್ಶಿ ಸಂದೀಪ್, ಗೋಡೆ ಬರಹ ಜಿಲ್ಲಾ ಸಂಚಾಲಕ ಮಹೇಶ್ ಜೋಗಿ, ಮಂಡಲ ಸಂಚಾಲಕ ಅಖಿಲ್ ಶೆಟ್ಟಿ, ಬಿಜೆಪಿ ಮುಖಂಡರಾದ ರಣ್‍ದೀಪ್ ಕಾಂಚನ್, ಚಂದ್ರಿಕಾ ಪ್ರಭಾಕರ್ ಮನಪಾ ಸದಸ್ಯರಾದ ಸುಮಂಗಳ ರಾವ್, ಲೋಹಿತ್ ಅಮೀನ್, ಕಿರಣ್ ಕುಮಾರ್ ಕೋಡಿಕಲ್, ಮನೋಜ್ ಕುಮಾರ್, ಶಿತೇಶ್ ಕೊಂಡೆ, ಶಾನ್ವಾಝ್ ಹುಸೈನ್, ಸಾಕ್ಷಾತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
