Home ಸುದ್ದಿಗಳು ಹೆಚ್ಚುತ್ತಿದೆ ಮಂಗನ ಕಾಯಿಲೆ-ಇದರ ಲಕ್ಷಣಗಳೇನು? ಜಾಗೃತಿವಹಿಸಲು ಅಲ್ಲಲ್ಲಿ ಸೂಚನೆ

ಹೆಚ್ಚುತ್ತಿದೆ ಮಂಗನ ಕಾಯಿಲೆ-ಇದರ ಲಕ್ಷಣಗಳೇನು? ಜಾಗೃತಿವಹಿಸಲು ಅಲ್ಲಲ್ಲಿ ಸೂಚನೆ

0
ಹೆಚ್ಚುತ್ತಿದೆ ಮಂಗನ ಕಾಯಿಲೆ-ಇದರ ಲಕ್ಷಣಗಳೇನು? ಜಾಗೃತಿವಹಿಸಲು ಅಲ್ಲಲ್ಲಿ ಸೂಚನೆ

ಬದಲಾಗುತ್ತಿರುವ ಈ ಆಧುನಿಕ ಕಾಲಘಟ್ಟದಲ್ಲಿ ಅನೇಕ ವ್ಯವಸ್ಥೆ ರೂಪು ರೇಷೆಗಳು ಆಗಾಗ ಬದಲಾಗುತ್ತಿರುತ್ತಿದೆ. ಆರೋಗ್ಯ ಸಮಸ್ಯೆಗಳು ಬಾಧಿಸುವುದು ಈಗ ಸಾಧಾರಣ ವಿಚಾರವಾಗಿ ಹೊರಹೊಮ್ಮಿದ್ದರು ಜೀವ ಹಾನಿಯಾಗುವ ಪ್ರಮೇಯ ಬಂದರೆ ಯಾರಿಗಾದರೂ ಭಯ ಪಡದೇ ಇರಲು ಸಾಧ್ಯವಿಲ್ಲ. ಅದೇ ರೀತಿ ಇತ್ತೀಚಿನ ದಿನದಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿ ಹೆಚ್ಚಾಗುತ್ತಲಿದ್ದು, ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿದೆ.

ಪಶ್ಚಿಮ ಘಟ್ಟದಲ್ಲಿ ಹಾಗೂ ಮಲೆನಾಡಿನ ಭಾಗದಲ್ಲಿ ಮಂಗನ ಕಾಯಿಲೆ ತುಂಬಾ ಹೆಚ್ಚಾಗಿದ್ದು ತಿಳಿದು ಬಂದಿದೆ. ಈಗಾಗಲೇ ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ ಅವರು ಸಭೆ ನಡೆಸಿ ಕೆಲ ಅಗತ್ಯ ತೀರ್ಮಾನ ಕೈಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ, ಸಾಗರ, ಸಿದ್ಧಾಪುರ, ಚಿಕ್ಕಮಗಳೂರು ಇತರ ಭಾಗದಲ್ಲಿ ಮಂಗನ ಕಾಯಿಲೆ ಪ್ರಮಾಣ ಹಿಂದಿಗಿಂತ ಗಣನೀಯ ಪ್ರಮಾಣದಲ್ಲಿ ಅಧಿಕವಾಗುತ್ತಿದೆ. ಆದರೆ ಬಹುತೇಕರಿಗೆ ಮಂಗನ ಕಾಯಿಲೆ ಆರಂಭಿಕ ಹಂತದಲ್ಲಿ ತಿಳಿದು ಬರದೇ ಇದ್ದದ್ದೇ ಸಮಸ್ಯೆ ಆಗುತ್ತಿದೆ ಹಾಗಾಗಿ ಈ ಬಗ್ಗೆ ಕೆಲ ಅಗತ್ಯ ಮಾಹಿತಿ ನಾವಿಂದು ನೀಡಲಿದ್ದೇವೆ‌.

ಹಿನ್ನೆಲೆ ಏನು?
1957ರಲ್ಲಿ ಭಾರತಕ್ಕೆ ಮಂಗನ ಕಾಯಿಲೆ ಮೊದಲ ಭಾರಿಗೆ ಪತ್ತೆ ಆಗಿದೆ. ಶಿವಮೊಗ್ಗದ ಸೊರಬ ತಾಲೂಕಿನ ಕ್ಯಾಸನೂರು ಗ್ರಾಮದಲ್ಲಿ ಮೊದಲ ಬಾರಿಗೆ ಮಂಗನ ಕಾಯಿಲೆ ಪತ್ತೆ ಆಗಿದೆ. ಈ ಕಾಯಿಲೆಯ ಮೂಲ ಕಾರಣ ಕಾಡಿನಲ್ಲಿ ಮಂಗಗಳು ಮೃತಪಟ್ಟು ಅದರಿಂದ ಮನುಷ್ಯರಿಗೆ ಕಾಯಿಲೆ ಹರಡುತ್ತದೆ. ‌ಮೊದಲ ಬಾರಿಗೆ ಕ್ಯಾಸನೂರಿನಲ್ಲಿ ಕಂಡು ಬಂದ ಕಾರಣ ಈ ಕಾಯಿಲೆಗೆ ಕ್ಯಾಸನೂರು ಕಾಯಿಲೆ ಎಂಬ ಹೆಸರಿಡಲಾಗಿದೆ.

ಯಾವುದು ಆ ವೈರಸ್?
ಮೃತಪಟ್ಟ ಮಂಗನ ದೇಹದಲ್ಲಿ KFDV (kyasanuru Forest diseases virus) ಎಂದು ಕರೆಯುವ ವೈರಸ್ ಪತ್ತೆ ಆಗಿದೆ. ಈ ಒಂದು ರೋಗವು ಮೂಲತಃ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ವಿನಃ ಮಾನವನಿಂದ ಮಾನವನಿಗೆ ಹರಡಲಾರದು. ಅಂದರೆ ವೈರಸ್ ಹರಡಿ ಮಂಗನಿಗೆ ಇತರ ಕೀಟಗಳು ಕಚ್ಚಿದಾಗ ಅವುಗಳು ಮಾನವನಿಗೆ ಕಚ್ಚಿದರೆ ಅದರಿಂದ ಮಾನವನಿಗೆ ಮಂಗನ ಕಾಯಿಲೆ ಬರಲಿದೆ.

ಲಕ್ಷಣಗಳಿವು
ಸಾಮಾನ್ಯವಾಗಿ ನವೆಂಬರ್ ಜೂನ್ ತಿಂಗಳಲ್ಲಿ ಈ ಕಾಯಿಲೆ ಅಧಿಕವಾಗಿ ಕಂಡುಬರುತ್ತದೆ. ಈ ಕಾಯಿಲೆ ಹರಡುವಾಗ ಜ್ವರ, ತಲೆನೋವು, ವಾಂತಿ, ನರದೌರ್ಬಲ್ಯ, ಮಾಂಸಕಂಡಗಳ ಸೆಳೆತವಾಗಲಿದೆ. ಬಾಯಿ, ಮೂಗು, ವಸಡಿನಲ್ಲಿ ರಕ್ತಸ್ರಾವವಾಗಲಿದೆ. ಕಣ್ಣು ಮಂಜಾಗುವುದು,ರಕ್ತದೊತ್ತಡ, ಬಿಳಿ ರಕ್ತ ಕಣ ಕಡಿಮೆ ಆಗಲಿದೆ. ಸುಮಾರು 3.5% ನಷ್ಟು ಜನರು ಈ ಕಾಯಿಲೆಯಿಂದ ಮರಣ ಹೊಂದುತ್ತಾರೆ. ಈ ಮೂಲಕ ತಿಂಗಳಿಗೆ ಚಿಕಿತ್ಸಾ ಕ್ರಮ ನಿರ್ವಹಿಸುವ ಮೂಲಕ ರಕ್ತ ಪರೀಕ್ಷೆ ಮಾಡಿ ವೈರಸ್ ಪತ್ತೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ.

 

LEAVE A REPLY

Please enter your comment!
Please enter your name here