Home ಸುದ್ದಿಗಳು ವಿಶ್ವದ ಅತೀ ದುಬಾರಿ ಚಿನ್ನದ ಶರ್ಟ್ ಹೊಂದಿರುವ ಈ ವ್ಯಕ್ತಿ ಯಾರು? ಇದರ ಬೆಲೆಯೆಷ್ಟು ಗೊತ್ತೆ?

ವಿಶ್ವದ ಅತೀ ದುಬಾರಿ ಚಿನ್ನದ ಶರ್ಟ್ ಹೊಂದಿರುವ ಈ ವ್ಯಕ್ತಿ ಯಾರು? ಇದರ ಬೆಲೆಯೆಷ್ಟು ಗೊತ್ತೆ?

0
ವಿಶ್ವದ ಅತೀ ದುಬಾರಿ ಚಿನ್ನದ ಶರ್ಟ್ ಹೊಂದಿರುವ ಈ ವ್ಯಕ್ತಿ ಯಾರು? ಇದರ ಬೆಲೆಯೆಷ್ಟು ಗೊತ್ತೆ?

ದುಬಾರಿ ವೆಚ್ಚದ ಮನೆ, ಕಾರು, ಇತ್ಯಾದಿ ಗಳನ್ನು ನೀವು ಕೇಳಿರುತ್ತೀರಿ, ಆದ್ರೆ ದುಬಾರಿ ಮೌಲ್ಯದ ಚಿನ್ನದ ಶರ್ಟ್ ಕೇಳಿದ್ದೀರಾ? ಅಬ್ಬಬ್ಬಾ ಅಂದ್ರೆ ಪುರುಷರ ಶರ್ಟ್ ಬೆಲೆ ಸಾಮಾನ್ಯವಾಗಿ 400 ರೂ. ನಿಂದ 2000 ರೂ.ವರೆಗೂ ಇರುತ್ತದೆ. ಬ್ರ್ಯಾಡೆಂಡ್‌ ಬಟ್ಟೆ ಅಂದರೆ ಆರು ಸಾವಿರದ ವರೆಗೂ ಇರುತ್ತದೆ. ಆದರೆ ಈ ವ್ಯಕ್ತಿ ಧರಿಸಿರುವ ಬಟ್ಟೆ ಯ ಮೌಲ್ಯ ಕೇಳಿ ಬಾಯಿಗೆ ಬೇರಳಿಡುವಂತಾಗಿದೆ. ಗೋಲ್ಡನ್ ಶರ್ಟ್ ಹೊಂದಿರುವ ವ್ಯಕ್ತಿ ಎಂದೇ ಇವರು ಪ್ರಸಿದ್ದಿ ಪಡೆದಿದ್ದು, ಗೋಲ್ಡನ್ ಡ್ರೆಸ್ ಧರಿಸುವ ವ್ಯಕ್ತಿಯ ಪೋಟೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಯಾರು ಈ ವ್ಯಕ್ತಿ?

ಮಹಾರಾಷ್ಟ್ರ ಮೂಲದ ಪ್ರಸಿದ್ಧ ಉದ್ಯಮಿ ಮತ್ತು ರಾಜಕಾರಣಿ ಇವರಾಗಿದ್ದು 4.1 ಕೆಜಿ ಚಿನ್ನದಿಂದ ರಚನೆ ಮಾಡಲಾದ ವಿಶ್ವದ ಅತ್ಯಂತ ದುಬಾರಿ ಶರ್ಟ್ ಧರಿಸಿರುವ ವ್ಯಕ್ತಿ ಇವರಾಗಿದ್ದಾರೆ.‌ ಇವರ ಈ ದುಬಾರಿ ಶರ್ಟ್​​​ನಿಂದಲೇ 2016 ರಲ್ಲಿ ಗಿನ್ನೆಸ್ ವಿಶ್ವ ದಾಖಲೆ ರೆಕಾರ್ಡ್ ಮಾಡಿದ್ದಾರೆ.

ಬೆಲೆ ಎಷ್ಟು?

ಸುಮಾರು 4.10 ಕೆಜಿ ತೂಕದ ಗೋಲ್ಡನ್ ಶರ್ಟ್ ನ ಬೆಲೆ 1,78,00,000 ಕೋಟಿ ರೂ. ಆಗಿದ್ದು 2014 ರಲ್ಲಿ ಪಂಕಜ್ ಪರಾಖ್ 45 ನೇ ಹುಟ್ಟುಹಬ್ಬಕ್ಕೆ ಈ ದುಬಾರಿ ಶರ್ಟ್ ಅನ್ನು ಸಿದ್ದತೆ ಮಾಡಿಸಿದ್ದಾರೆ. ನಾಸಿಕ್‌ನ ಬಫ್ನಾ ಜ್ಯುವೆಲ್ಲರ್ಸ್‌ನಿಂದ ಈ ಶರ್ಟ್ ಅನ್ನು ವಿನ್ಯಾಸ ಮಾಡಲಾಗಿದೆ.

ಶ್ರೀಮಂತ ವಸ್ತುಗಳ ಸಂಗ್ರಹ

ಈ ಶರ್ಟ್ ನ ಒಳಭಾಗದಲ್ಲಿ ಬಟ್ಟೆಯನ್ನು ಹೊಂದಿದ್ದು, ಹೊರಭಾಗದಲ್ಲಿ ಚಿನ್ನದಿಂದ ವಿನ್ಯಾಸ ಮಾಡಲಾಗಿದೆ. ಇದರ ಹೊರತಾಗಿ ಈ ಶರ್ಟ್ ಅನ್ನು ವಾಶ್​​​ ಕೂಡ ಮಾಡಬಹುದಾಗಿದೆ. ಅಷ್ಟೆ ಅಲ್ಲದೇ ಶ್ರೀಮಂತ ವಸ್ತುಗಳ ಸಂಗ್ರಹ ಕೂಡ ಇರಲಿದ್ದು, ಇವರ ಬಳಿ ಚಿನ್ನದ ಗಡಿಯಾರ, ಚಿನ್ನದ ಸರಗಳು, ದೊಡ್ಡ ಚಿನ್ನದ ಉಂಗುರಗಳು, ಚಿನ್ನದ ಮೊಬೈಲ್ ಕವರ್ ಮತ್ತು ಚಿನ್ನದ ಚೌಕಟ್ಟಿನ ಕನ್ನಡಕಗಳು ಇವೆ. ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಈ ಶರ್ಟ್ ಧರಿಸಿರುವ ವ್ಯಕ್ತಿಯಂತು ಸಖತ್ ವೈರಲ್ ಆಗುತ್ತಿದ್ದಾರೆ.

 

LEAVE A REPLY

Please enter your comment!
Please enter your name here