
ಅಯೋಧ್ಯೆ: ಅಯೋಧ್ಯಾ ರಾಮ ಮಂದಿರದ ಅರ್ಚಕರಲ್ಲಿ ಓರ್ವರಾದ ಸಂತೋಷ್ ತಿವಾರಿಯವರು ಶ್ರೀ ಪೇಜಾವರ ಶ್ರೀಪಾದರನ್ನು ಸೋಮವಾರ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಪೇಜಾವರ ಶ್ರೀ ಗಳು ಅವರನ್ನು ಸಮ್ಮಾನಿಸಿದರು.
1992 ರಲ್ಲಿ ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ತಾತ್ಕಾಲಿಕ ಕುಟೀರದಲ್ಲಿ ರಾತೋರಾತ್ರಿ ರಾಮಲಲ್ಲಾನ ಪ್ರತಿಷ್ಠಾಪನೆಯಾಗಿತ್ತು. ಬಳಿಕ 42 ವರ್ಷಗಳ ಕಾಲ ರಾಮನ ನಿತ್ಯ ಪೂಜೆ ನಡೆಸಿದ್ದ ಮತ್ತು ನೂತನ ಮಂದಿರದಲ್ಲಿ ಶ್ರೀ ಬಾಲರಾಮನ ಪ್ರತಿಷ್ಠಾಪನೆಯಾದ ಬಳಿಕವೂ ಅರ್ಚಕರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದ ಮಹಾಭಾಗ್ಯಶಾಲಿ ಶ್ರೀ ತಿವಾರಿಯವರು. ಸೋಮವಾರ ಶ್ರೀಗಳ ಭೇಟಿಯ ಸಂದರ್ಭದಲ್ಲಿ ಆ ಎಲ್ಲಾ ಅವಧಿಯ ಸೇವೆಯನ್ನು ಸ್ಮರಸಿಕೊಂಡು ಭಾವುಕರಾದರು.
