ರೈತರನ್ನು ನಮ್ಮ ದೇಶದಲ್ಲಿ ಅನ್ನದಾತರೆಂದು ಹೇಳುತ್ತಾರೆ. ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕೆ ಮಿಗಿಲಾದದ್ದು, ಎಂಬಂತೆ ದಿನದಿತ್ಯ ಅನ್ನವಿತ್ತು ಸಲಹುವ ರೈತರು ನಮ್ಮೆಲ್ಲರ ಪಾಲಿನ ಜೀವದಾತ ಎನ್ನಬಹುದು. ನಿತ್ಯ ಮೈಯೆಲ್ಲ ಬೆವರು ಸುರಿಸಿ ದೇಶಕ್ಕೆ ಆಹಾರ ನೀಡುವ ರೈತರ ಕ್ಷೇಮಾಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಸಹಕಾರ ನೀಡುತ್ತಿದೆ ಹಾಗಿದ್ದರೂ ರೈತರ ಪರಿಸ್ಥಿತಿ ಸುಧಾರಣೆ ಆಗಲು ಇನ್ನು ಬಾಕಿ ಇದೆ ಎನ್ನಬಹುದು. ಈ ನಡುವೆ ಬೆಂಗಳೂರಿನ ರೈತರೊಬ್ಬರಿಗೆ ಮೆಟ್ರೋ ದಲ್ಲಿ ಅವಮಾನ ಮಾಡಿದ್ದಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ.
ಆಗಿದ್ದೇನು?
ರೈತ ವೃದ್ಧರೊಬ್ಬರು ಬೆಂಗಳೂರಿನ ರಾಜಾಜಿ ನಗರದಲ್ಲಿ ಪ್ರಯಾಣ ಮಾಡಲು ಬಂದಿದ್ದು ಆತನನ್ನು ಮೆಟ್ರೋ ಸಿಬಂದಿ ತಡೆ ಹಿಡಿದಿದ್ದಾರೆ. ಬಳಿಕ ರೈತ ಧರಿಸಿದ್ದ ಬಟ್ಟೆ ಪ್ರಯಾಣಕ್ಕೆ ಯೋಗ್ಯವಲ್ಲ ಎಂಬ ಕಾರಣ ನೀಡಿ ಮೆಟ್ರೋ ಪ್ರಯಾಣ ಮಾಡದಂತೆ ತಡೆ ಹಿಡಿದಿದ್ದಾರೆ. ಇದನ್ನು ಕಂಡ ಸಹ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡು ರೈತರ ಪರ ನಿಂತು ಮೆಟ್ರೋ ಸಿಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಹ ಪ್ರಯಾಣಿಕರಿಂದ ಮಾತಿನ ಚಡಿಏಟು?
ಇದೇ ವೇಳೆಯಲ್ಲಿ ಪ್ರಯಾಣ ಮಾಡುತ್ತಿದ್ದ ಸಹ ಪ್ರಯಾಣಿಕರು ವೃದ್ಧ ರೈತನ ಪರ ಧ್ವನಿಯಾಗಿದ್ದಾರೆ. ಕೇವಲ ಬಟ್ಟೆಯಿಂದ ಮನುಷ್ಯನ ಅಳೆಯ ಬೇಡಿ ಅವರು ರೈತರು ನಮ್ಮ ಪಾಲಿನ ಅನ್ನದಾತರು, ಅವರು ಇರೋದಕ್ಕೆ ನಾವು ಇರೋದು ಅವರು ಟಿಕೇಟ್ ಕೊಟ್ಟಿದ್ದಾರಲ್ವಾ ಮತ್ಯಾಕೆ ಬಿಟ್ಟಿಲ್ಲ, ಬಟ್ಟೆ ಸರಿ ಇಲ್ಲ ಗಲೀಜ್ ಇದೆ ಅಂತ ಬಿಡ್ತಾ ಇಲ್ಲ ಇದು ಮನುಷ್ಯತ್ವ ಅಲ್ಲ. ಮೆಟ್ರೋ ಇರೊದು ಜನರ ಸೇವೆಗಾಗಿ ಬೇರೆ ಅವರಿಗೆ ಅಸಹ್ಯ ಆಗುತ್ತೆ ಅಂತ ಹೇಗೆ ಅಂದುಕೊಂಡ್ರಿ, ಇದೇನು VIP ಟ್ರಾನ್ಸ್ ಫೋರ್ಟಾ?, ಅಲ್ವಲ್ಲ ಟಿಕೆಟ್ ಇದೆ ಮತ್ಯಾಕೆ ಬಿಟ್ಟಿಲ್ಲ, ಎಂದು ಸಿಬಂದಿ ವಿರುದ್ಧ ಕಿಡಿಕಾರಿದ್ದಾರೆ. ಬಳಿಕ ಮಾತನಾಡಿ ನಿಮ್ಮಲ್ಲಿ ನಾನು ಮನವಿ ಮಾಡ್ತೇನೆ ಅವರು ತಪ್ಪು ಮಾಡ್ತಿದ್ದಾರೆ ಅಥವಾ ಅವರ ಬಳಿ ಅಕ್ರಮ ವಸ್ತು ಇದ್ದರೆ ಆಗ ನೀವು ಕಾನೂನಾತ್ಮವಾಗಿ ಮುನ್ನಡೆಯಿರಿ ಅದನ್ನು ಬಿಟ್ಟು ಬಟ್ಟೆ ಗಲೀಜಿದೆ ಎಂದು ಪ್ರಯಾಣ ನಿರಾಕರಿಸಬೇಡಿ ಎಂದಿದ್ದಾರೆ.
ವೈರಲ್ ಆಯ್ತು ವಿಡಿಯೋ
ಮೆಟ್ರೋ ಸಿಬಂದಿಯ ಈ ನಿರ್ಣಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು. ಟ್ವಿಟ್ಟರ್ ನಲ್ಲಿ ಮೆಟ್ರೋ ಟ್ಯಾಗ್ ಮಾಡಿ ಅವರು ರೈತರು ಅವರಿಲ್ಲದಿದ್ದರೆ ನೀವೆನು ತಿಂತೀರಿ ಬಟ್ಟೆ ಹಾಕಲು ಕೂಡ ಅವರೇ ಬೇಕು ಅನ್ನೋಅರಿವು ನಿಮಗೆ ಇಲ್ಲವೇ ಎಂದು ಅನೇಕ ಕಮೆಂಟ್ ಬರುತ್ತಿದೆ. ಈ ನಡುವೆ ಕೆಲ ಖಾಸಗಿ ವಾಹಿನಿ ಸಹ ಇದನ್ನು ಟೆಲಿ ಕಾಸ್ಟ್ ಮಾಡಿದ್ದು, ವೃದ್ಧ ರೈತನಿಗೆ ಮಾತನಾಡಲು ಬಾರದು ಹಾಗೂ ಕಿವಿ ಸಹ ಕೇಳದು ಎಂಬ ಮಾಹಿತಿ ಹಂಚಿಕೊಂಡಿದ್ದು, ಇಡೀ ರಾಜ್ಯ, ರಾಷ್ಟ್ರವೇ ರೈತರಿಗೆ ಬೆಂಬಲವಾಗಿ ನಿಂತಿದ್ದಾರೆ.
ಅಮಾನತ್ತು..?
ಮೆಟ್ರೋದಲ್ಲಿ ಈ ರೀತಿ ಸಿಬಂದಿ ವರ್ತನೆ ಸರಿ ಅಲ್ಲ ಎಂಬ ಧೋರಣೆ ಎಲ್ಲೆಡೆ ವ್ಯಕ್ತವಾಗುತ್ತಿದ್ದು, ಘಟನೆ ನಡೆದ ಬೆನ್ನಲ್ಲೆ ಸಿಬಂದಿ ವಿರೋಧ ಕೂಡ ಲೆಕ್ಕಿಸದೆ ಅಂತ ಪ್ರಯಾಣಿಕರು ರೈತರನ್ನು ಮೆಟ್ರೋದಲ್ಲಿ ಕರೆದುಕೊಂಡು ಹೋಗಿದ್ದಾರೆ. ಹಾಗಿದ್ದರೂ ಸಿಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ. ಹಾಗಾಗಿ BMRCL ರೈತರಿಗೆ ಕ್ಷಮೆ ಯಾಚಿಸಿದೆ ಮಾತ್ರವಲ್ಲದೆ ಭದ್ರತಾ ಮೇಲ್ವಿಚಾರಕರನ್ನು ಅಮಾನತ್ತು ಮಾಡಿದೆ.
