Home ಸುದ್ದಿಗಳು ಮದುವೆಯಾಗುವುದಾಗಿ ನಂಬಿಸಿ 250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ

ಮದುವೆಯಾಗುವುದಾಗಿ ನಂಬಿಸಿ 250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ

0
ಮದುವೆಯಾಗುವುದಾಗಿ ನಂಬಿಸಿ 250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ

ಸಾಮಾಜಿಕ ಜಾಲತಾಣಗಳ ಬಳಕೆ ಎಷ್ಟು ಹೆಚ್ಚಾಗಿದೆಯೋ ಅಷ್ಟೇ ಅಕ್ರಮಗಳೂ, ಮೋಸದ ಜಾಲಗಳು ಹೆಚ್ಚುತ್ತಿವೆ. ಹಣ ವಂಚನೆ, ಖಾತೆ ಹ್ಯಾಕಿಂಗ್, ದಿನದಿಂದ ದಿನಕ್ಕೆ ಈ ಪ್ರಕರಣ ವರದಿಯಾಗುತ್ತಲೆ ಇದೆ. ವಂಚಕರು ತಮ್ಮ ಜಾಲ ವಿಸ್ತರಣೆ ಮಾಡಿದ್ದು, ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ, ಸರಕಾರಿ ಉದ್ಯೋಗಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆಯುವ ಮೂಲಕ ಆನ್ ಲೈನ್ ವಂಚನೆ ಮಾಡುತ್ತಿದ್ದಾರೆ. ಅದ್ರೆ ಇಲ್ಲೊಬ್ಬ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ನಕಲಿ ಖಾತೆ ಸೃಷ್ಟಿಸಿ, ತಾನು ಏರ್ ಪೋರ್ಟ್ ಕಸ್ಟಮ್ಸ್ ಅಧಿಕಾರಿ, ಮದುವೆಯಾಗಲು ವಧು ಬೇಕು ಎಂದು ನಂಬಿಸಿ ಸುಮಾರು 250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ ಮೂಲಕ ನಕಲಿ ಖಾತೆಗಳನ್ನು ರಚಿಸಿ, ಪತಿಯಿಲ್ಲದ ಹಾಗೂ ವಿಚ್ಛೇದಿತ ಮಹಿಳೆಯರನ್ನು ಟಾರ್ಗೆಟ್ ಮಾಡಿ, ಮದುವೆ ಆಗುವುದಾಗಿ ನಂಬಿಸಿ ಸಾವಿರಾರು ರೂಪಾಯಿ ಪಡೆದು ವಂಚನೆ ಮಾಡ್ತಾ ಇದ್ದ. ಆರೋಪಿ ನರೇಶ್‌ಪುರಿ ಗೋಸ್ವಾಮಿ(47) ಕಾಟನ್‌ಪೇಟೆ ನಿವಾಸಿಯಾಗಿದ್ದಾನೆ.

ವಿವಿಧ ಭಾಗದ ಮಹಿಳೆಯರಿಗೆ ವಂಚನೆ

20 ವರ್ಷಗಳಿಂದ ಕಾಟನ್‌ಪೇಟೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಸಾಫ್ಟ್‌ವೇರ್‌ ಎಂಜಿನಿಯರ್‌ ಎಂದು ಕೂಡ ಹೇಳಿಕೊಂಡು ರಾಜ್ಯದ ನನಾ ಭಾಗದ ಮಹೀಳೆಯರಿಗೆ ವಂಚನೆ ಮಾಡಿದ್ದಾನೆ. ವೆಬ್‌ಸೈಟ್‌ ಮೂಲಕ ಅವಿವಾಹಿತ ಎಂದು ನಕಲಿ ಖಾತೆ ಸೃಷ್ಟಿಸಿಕೊಂಡಿದ್ದ. ಹಿಂದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವಧು, ವರರು ಬೇಕಾಗಿದ್ದಾರೆ ಎಂಬ ಜಾಹೀರಾತುಗಳನ್ನು ಗಮನಿಸಿ, ಅಲ್ಲಿನ ಮಹಿಳೆಯರ ಮೊಬೈಲ್ ನಂಬರ್‌ಗೆ ಕರೆ ಮಾಡಿ ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ.

ತನಿಖೆಯಲ್ಲಿ ಬಯಲು

ರಾಜಸ್ಥಾನದ 56, ಉತ್ತರಪ್ರದೇಶದ 32, ದೆಹಲಿಯ 32, ಮಧ್ಯಪ್ರದೇಶದ 16, ಮಹಾರಾಷ್ಟ್ರದ 13, ಗುಜರಾತ್‌ನ 11, ತಮಿಳುನಾಡಿನ 6, ಬಿಹಾರ ಮತ್ತು ಜಾರ್ಖಂಡ್‌ನ 5, ಆಂಧ್ರಪ್ರದೇಶದ ಇಬ್ಬರು ಮಹಿಳೆಯರನ್ನು ಮದುವೆ ಆಗುವುದಾಗಿ ಹೇಳಿ ಈಗಾಗಲೇ ವಂಚಿಸಿದ್ದಾನೆ. ಕೊಯಮತ್ತೂರಿನ ಮಹಿಳೆಯೊಬ್ಬರಿಗೆ ಸುಳ್ಳು ಹೇಳಿ ದುಡ್ಡು ಪಡೆದು ವಂಚನೆ ಮಾಡಿದ್ದು, ಅವರು ನೀಡಿದ ದೂರಿನ ಅಧಾರವಾಗಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

 

LEAVE A REPLY

Please enter your comment!
Please enter your name here