Home ಸರಕಾರಿ ಯೋಜನೆಗಳು ರಾಜ್ಯ ಸರಕಾರ ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾಗಿದೆಯೇ? ಹಣ ಬಾರದೇ ಇದ್ದಲ್ಲಿ ಈ ಕೆಲಸ ಮೊದಲು ಮಾಡಿ

ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾಗಿದೆಯೇ? ಹಣ ಬಾರದೇ ಇದ್ದಲ್ಲಿ ಈ ಕೆಲಸ ಮೊದಲು ಮಾಡಿ

0
ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾಗಿದೆಯೇ? ಹಣ ಬಾರದೇ ಇದ್ದಲ್ಲಿ ಈ ಕೆಲಸ ಮೊದಲು ಮಾಡಿ

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಮೂಲಕ ಬಹಳಷ್ಟು ಜನರು ನೆರವು ಪಡೆಯುತ್ತಿದ್ದಾರೆ. ಅದರಲ್ಲಿ ಮುಖ್ಯವಾದ ಸ್ತ್ರೀ ಪರ ಯೋಜನೆಗಳು ಹೆಚ್ಚು ಸುದ್ದಿಯಲ್ಲಿದ್ದು ಅದರಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದಾಗಿದೆ. ಈಗಾಗಗಲೇ‌ ನೊಂದಣಿ ಮಾಡಿದ ಹೆಚ್ಚಿನ ಮಹೀಳೆಯರಿಗೆ ಈ ಹಣ ಜಮೆ ಯಾಗಿದೆ. ಇಲ್ಲಿಯವರೆಗೆ ಸುಮಾರು ಆರು ಕಂತಿನ ಹಣ ಬಿಡುಗಡೆಯಾಗಿದ್ದು, ಏಳನೇ ಕಂತಿನ ಹಣವೂ ಇನ್ನಷ್ಟೆ ಖಾತೆಗೆ ಜಮೆ ಯಾಗಬೇಕಿದೆ. ಈ ಬಗ್ಗೆ ಮಹೀಳೆಯರು ಹೆಚ್ಚು ಕಾತುರರಾಗಿದ್ದು, ಹಣ ಬಿಡುಗಡೆ ಯಾಗಿರುವ ಬಗ್ಗೆ ಸರಕಾರ ಗುಡ್ ನ್ಯೂಸ್ ಕೂಡ ನೀಡಿದೆ.

ಮಾರ್ಚ್ ತಿಂಗಳ ಹಣ ಯಾವಾಗ ಜಮೆ?

ಮಾರ್ಚ್ ತಿಂಗಳ ಹಣ ನೊಂದಣಿ ಮಾಡಿದ ಕೆಲವಷ್ಟೆ ಮಹೀಳೆಯರಿಗೆ ಜಮೆಯಾಗಿದ್ದು ಕೆಲವು ಮಹೀಳೆಯರಿಗೆ ಈ ಹಣ ಇನ್ನೂ ಕೂಡ ಬಿಡುಗಡೆ ಗೊಂಡಿಲ್ಲ. ಎಲ್ಲ ಜಿಲ್ಲೆಯ ಮಹೀಳೆಯರಿಗೂ ಈ ಹಣ ಸರಕಾರ ಬಿಡುಗಡೆ ಮಾಡಿದ್ದು, ಈ ತಿಂಗಳ 20 ರ ಒಳಗೆ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ ಯಾಗಲಿದೆ ಎನ್ನಲಾಗಿದೆ.

ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ

ಯಾರಿಗೆ ಈ ಗೃಹ ಲಕ್ಷ್ಮಿ ಹಣ ಬಿಡುಗಡೆ ಯಾಗಿಲ್ಲವೋ ಮತ್ತೆ ಈ ಯೋಜನೆಗೆ ಅರ್ಜಿ ಹಾಕಬಹುದು ನಿಮ್ಮ ಹತ್ತಿರದ ಗ್ರಾಮ ಓನ್, ಬಾಪೂಜಿ ಸೇವಾ ಕೇಂದ್ರಗಳಿಗೆ ತೆರಳಿ ಅರ್ಜಿ ಹಾಕಬಹುದು.

ಹಣ ಬಾರದೇ ಇದ್ದ ಮಹೀಳೆಯರ ಪಟ್ಟಿ ಬಿಡುಗಡೆ

ಈಗಾಗಲೇ ಹಣ ಬಂದಿರುವ ಮತ್ತು ಬಾರದೇ ಇರುವ ಮಹೀಳೆಯರ ಹೆಸರುಗಳನ್ನು ಪಟ್ಟಿ ಮಾಡಿದ್ದು ಯಾರಿಗೆಲ್ಲ ಹಣ ಬಂದಿಲ್ಲವೋ ಅಂತವರ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ‌. ಬ್ಯಾಂಕ್ ಖಾತೆ ಸಮಸ್ಯೆ ಇದ್ದಲ್ಲಿ ಹೊಸ ಖಾತೆ ತೆರೆದು ಲಿಂಕ್ ಮಾಡಿಸಲು ಕೂಡ ಅವಕಾಶ ನೀಡಲಾಗಿದೆ‌

ಶಿಬಿರ ಆಯೋಜನೆ

ಹಣ ಬಾರದೇ ಇದ್ದ ಮಹೀಳೆಯರಿಗೆ ದಾಖಲೆ ಸರಿಪಡಿಸುವಂತೆ ಅಂಗನವಾಡಿ ಕಾರ್ಯಕರ್ತರನ್ನು ಈ ಯೋಜನೆಗೆ ಪ್ರೇರೇಪಿಸುತ್ತಿದೆ.‌ ಅದೇ ರೀತಿ ಈಗ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ವಿಶೇಷ ಶಿಬಿರ ಆಯೋಜನೆ ಮಾಡಿದ್ದು, ತಾಂತ್ರಿಕ ಸಮಸ್ಯೆ ಇದ್ದಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳು ಈ ಶಿಬಿರದ ಪ್ರಯೋಜನ ಪಡೆಯ ಬಹುದಾಗಿದೆ.

ಈ ದಾಖಲೆ ಬೇಕು

ಗೃಹಲಕ್ಷ್ಮಿ ಸೌಲಭ್ಯ ಸಮಸ್ಯೆ ಎದುರಿಸುತ್ತಿರುವ ಮಹೀಳೆಯರು ತಮ್ಮ ಹಾಗೂ ಪತಿಯ ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಖಾತೆ ದಾಖಲೆಗಳೊಂದಿಗೆ ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ದಾಖಲೆ ಸರಿಪಡಿಸಿ ಕೊಳ್ಳಿ.

 

LEAVE A REPLY

Please enter your comment!
Please enter your name here