
ಈಗಾಗಲೇ ರಾಜ್ಯ ಸರಕಾರ ಗೃಹಜ್ಯೋತಿ ಮೂಲಕ ಉಚಿತ ವಿದ್ಯುತ್ ನೀಡ್ತಾ ಇದ್ದು, ಇದೀಗ ಸೌರ ವಿದ್ಯುತ್ ಶಕ್ತಿ ಬೆಂಬಲಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಮಹತ್ವದ ಯೋಜನೆ ಜಾರಿಗೆ ತಂದಿದೆ. ಜನರು ಮನೆ ಮೇಲೆಯೇ ಸೌರ ಘಟಕಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದಿಸಲು ಈ ಯೋಜನೆ ರೂಪಿಸಲಾಗಿದೆ. ಸೌರ ಫಲಕ ಹಾಕಲು ಬೇಕಾದ ಆರ್ಥಿಕ ಬೆಂಬಲ ನೀಡಲು ಕೇಂದ್ರ ಸರಕಾರ ಮುಂದಾಗಿದ್ದು ಸಬ್ಸಿಡಿ ಮೊತ್ತವು ಇದರ ಮೂಲಕ ಸಿಗಲಿದೆ.
ಎಷ್ಟು ವಿದ್ಯುತ್ ನೀಡಲಿದೆ?
ಸುಮಾರು 75,000 ಕೋಟಿ ಬಂಡವಾಳದಲ್ಲಿ ಮೇಲ್ಛಾವಣಿ ಸೋಲಾರ್ ವ್ಯವಸ್ಥೆ ಮೂಲಕ ಒಂದು ಕೋಟಿ ಮನೆಗಳಿಗೆ ವಿದ್ಯುತ್ ನೀಡುವ ಮೂಲಕ ಕೇಂದ್ರ ಸರಕಾರ ಗುಡ್ ನ್ಯೂಸ್ ನೀಡಿದೆ. ಈ ಮೂಲಕ ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಗ್ರಾಹಕರಿಗೆ ದೊರೆಯಲಿದೆ.
ಸಬ್ಸಿಡಿ ಸಿಗಲಿದೆ.
ಪಿಎಂ ಸೂರ್ಯ ಘರ್ ಯೋಜನೆ ಮೂಲಕ ಸಬ್ಸಿಡಿ ಯು ನಿಮಗೆ ಸಿಗಲಿದ್ದು, 1 kW ಕಿಲೋ ವ್ಯಾಟ್ ಗೆ 30,000 ರೂಪಾಯಿ, 2KW ಗೆ 60,000 ಹಾಗೂ 3KW ಗೆ 78,000 ದಂತೆ ಸಬ್ಸಿಡಿ ಬರಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಈಗಾಗಲೇ ಅವಕಾಶ ನೀಡಿದ್ದು ಅಂಚೆ ಕಚೇರಿ ಇಲಾಖೆಯ ಮೂಲಕ ನೋಂದಣಿ ಮಾಡಿಕೊಂಡು ಅರ್ಜಿ ಹಾಕಬಹುದಾಗಿದೆ. ಆಸಕ್ತ ಗ್ರಾಹಕರು ರಾಷ್ಟ್ರೀಯ ಪೋರ್ಟಲ್ www. pmsuryagarh.gov.in ನಲ್ಲಿ ತಮ್ಮ ಹೆಸರನ್ನು ನೋಂದಾಯಿ ಸಬಹುದು.
ಇವರು ಮಾತ್ರ ಅರ್ಹರು
*ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅರ್ಜಿದಾರರು ಭಾರತೀಯ ಪ್ರಜೆಯಾಗಿದ್ದರೆ ಮಾತ್ರ ಅರ್ಜಿ ಹಾಕಬಹುದಾಗಿದೆ.
*ಈಗಾಗಲೇ ವಿದ್ಯುತ್ ಸಂಪರ್ಕವನ್ನು ಹೊಂದಿದ್ದರೆ ಅರ್ಜಿ ಹಾಕಬಹುದು.
*ಕುಟುಂಬವು ಸೌರ ಫಲಕಗಳಿಗೆ ಯಾವುದೇ ಇತರ ಸಬ್ಸಿಡಿಯನ್ನು ಹೊಂದಿರಬಾರದು.
*ಫೆಬ್ರವರಿ 13, 2024 ರ ಮೊದಲು ಸಲ್ಲಿಸಿದ ವಸತಿ ಮೇಲ್ಛಾವಣಿ ಸೌರ ಅರ್ಜಿಗಳು ಹೊಸ ಯೋಜನೆಯಡಿಯಲ್ಲಿ ಕೇಂದ್ರ ಹಣಕಾಸು ಸಹಾಯಕ್ಕೆ ಅರ್ಹವಾಗಿರುವುದಿಲ್ಲ.
