Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ಕೇಂದ್ರ ಸರ್ಕಾರ ಜಾರಿಮಾಡಿದ ಈ ಯೋಜನೆಗಳ ಬಗ್ಗೆ ನೀವು ತಿಳಿಯಲೇಬೇಕು

ಕೇಂದ್ರ ಸರ್ಕಾರ ಜಾರಿಮಾಡಿದ ಈ ಯೋಜನೆಗಳ ಬಗ್ಗೆ ನೀವು ತಿಳಿಯಲೇಬೇಕು

0
ಕೇಂದ್ರ ಸರ್ಕಾರ ಜಾರಿಮಾಡಿದ ಈ ಯೋಜನೆಗಳ ಬಗ್ಗೆ ನೀವು ತಿಳಿಯಲೇಬೇಕು

ಇಂದು ಕೇಂದ್ರ ಸರಕಾರ ಜನಪರ ಯೋಜನೆಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುತ್ತಿದೆ. ಅದರಲ್ಲೂ ರೈತರನ್ನು, ಮಹೀಳೆಯರನ್ನು, ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಹೆಚ್ಚು ಸವಲತ್ತುಗಳನ್ನು ಸಹ ಒದಗಿಸುತ್ತಿದೆ.ಅದೇ ರೀತಿ ಆರ್ಥಿಕ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯ ವಿಚಾರದಲ್ಲೂ ಎಲ್ಲಾ ವರ್ಗಗಳಿಗೂ ನ ಹಲವಾರು ಯೋಜನೆಗಳನ್ನು ತರುವ ಮೂಲಕ ಜನರನ್ನು ಪ್ರೇರೇಪಣೆ ಮಾಡುತ್ತಿದೆ.

ಈ ಯೋಜನೆಗಳ ಪ್ರಯೋಜನ ಪಡೆಯಿರಿ

ಕಿಸಾನ್ ಸಮ್ಮಾನ್ ನಿಧಿ ಯೋಜನೆ
ರೈತರ ಏಳಿಗೆಗಾಗಿ ಈ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು ಅರ್ಹ ರೈತ ಕುಟುಂಬಗಳಿಗೆ ಆರ್ಥಿಕ ಸಹಾಯಧನ ನೀಡಲಾಗುತ್ತದೆ. ವರ್ಷಕ್ಕೆ 6,000 ರೂಪಾಯಿಗಳ ಆರ್ಥಿಕ ಸೌಲಭ್ಯ ನೀಡುವ ಮೂಲಕ 2,000 ರೂಪಾಯಿ ಮೂರು ಸಮಾನ ಕಂತುಗಳಲ್ಲಿ ಅನುದಾನ ಪಾವತಿ ಮಾಡುತ್ತದೆ.ಕೃಷಿ ಚಟುವಟಿಕೆ ಪೂರೈಕೆ ಗಾಗಿ ಈ ಹಣವನ್ನು‌ ನೇರವಾಗಿ ರೈತರ ಖಾತೆಗೆ ಡಿಬಿಟಿ ಮೂಲಕ ವರ್ಗಾವಣೆ ಮಾಡುತ್ತದೆ.

ಮುದ್ರಾ ಯೋಜನೆ
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಇಂದು ಹೆಚ್ಚಿನ ಜನರು ಸದುಪಯೋಗ ಮಾಡಿಕೊಳ್ತಾ ಇದ್ದು ಈ ಯೋಜನೆಯಿಂದ ಸಣ್ಣ ಉದ್ಯಮಿಗಳಿಗೆ ಬಹಳಷ್ಟು ನೇರವಾಗುತ್ತಿದೆ. ಸ್ವ ಉದ್ಯೋಗ ನಡೆಸುವಲ್ಲಿ ಯುವಕರನ್ನು ಪ್ರೇರಿಪಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಮಾಡಲಾಗಿದೆ. ಸ್ವ ಉದ್ಯಮ ಆರಂಭಿಸಲು ರೂ. 10 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸುವ ಪ್ರಮುಖ ಯೋಜನೆಯಾಗಿದ್ದು , ಬ್ಯಾಂಕ್‌ಗಳು, ಸಣ್ಣ ಹಣಕಾಸು ಬ್ಯಾಂಕ್‌ಗಳು, ಮತ್ತು ಮೈಕ್ರೋಫೈನಾನ್ಸ್ ಸಂಸ್ಥೆಗಳಿಂದ ಸಾಲವನ್ನು ನೀಡಲಾಗುತ್ತದೆ.

ಪ್ರಧಾನಮಂತ್ರಿ ಅವಾಸ್ ಯೋಜನೆ
ದೇಶದ ಪ್ರತಿಯೊಬ್ಬರಿಗೂ ಸ್ವಂತ ಮನೆ ದೊರಕಿಸಿಕೊಡಬೇಕು ಎನ್ನುವ ಉದ್ದೇಶದಿಂದ ನಗರ ಪ್ರದೇಶಗಳಲ್ಲಿ 2 ಕೋಟಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 3 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು ಈ ಯೋಜನೆ ಅಡಿಯಲ್ಲಿ ಬಡ ವರ್ಗದ ಜನತೆಗೆ ಮನೆ ನಿರ್ಮಿಸಲು ಪ್ರತಿ ಮನೆಗೆ ರೂ.1 ಲಕ್ಷ ಸಹಾಯಧನವನ್ನು ನೀಡುತ್ತದೆ. ಅದೇ ರೀತಿ ಗೃಹ ಸಾಲವನ್ನೂ ಪಡೆಯಲು ಕೂಡ ಅವಕಾಶ ಇದ್ದು ಇದರ ಮೇಲೆ 6.5% ವರೆಗೆ ಬಡ್ಡಿ ಸಹಾಯಧನವನ್ನು ಪಡೆಯಬಹುದು.

ಪ್ರಧಾನಮಂತ್ರಿ ಸುರಕ್ಷಾ ವಿಮೆ ಯೋಜನೆ
ಈ ಯೋಜನೆಯಿಂದಲೂ ಜನರಿಗೆ ಬಹಳಷ್ಟು ನೇರವಾಗಿದ್ದು ಅಪಘಾತ ವಿಮೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ.ಈ ಯೋಜನೆಯ ಮೂಲಕ ಅಪಘಾತ ವಿಮಾ ಸೌಲಭ್ಯ ಸಿಗಲಿದ್ದು , ಅಪಘಾತದಿಂದ ಸಾವು ಅಥವಾ ಅಂಗವೈಕಲ್ಯಕ್ಕೆ ತುತ್ತಾದರೆ 2 ಲಕ್ಷ ರು. ವಿಮೆ ದೊರೆಯಲಿದೆ.

 

LEAVE A REPLY

Please enter your comment!
Please enter your name here