ಈಗಂತೂ ಡಿಜಿಟಲ್ ವ್ಯವಹಾರ , ಎಲ್ಲಿ ನೋಡಿದ್ರೂ ಗೂಗಲ್ ಪೇ, ಪೋನ್ ಪೇ ಇತ್ಯಾದಿಯನ್ನೆ ಬಳಸಿಕೊಂಡು ವ್ಯವಹಾರ ಮಾಡುತ್ತಾರೆ. ಯುಪಿಐ ಪೇಮೆಂಟ್ ಆರಂಭವಾದ ಬಳಿಕ ಜನರಿಗೆ ಕೆಲಸ ಬಹಳ ಸುಲಭವಾಗಿ ಬಿಟ್ಟಿದೆ. ಹಣಕ್ಕಾಗಿ ಬ್ಯಾಂಕ್ ಮುಂದೆ, ಎಟಿಎಮ್ ಮುಂದೆ ಕಾದು ಕುಳಿತುಕೊಳ್ಳಬೇಕು ಎಂಬುದಿಲ್ಲ. ಹೌದು ಸಣ್ಣ ಪುಟ್ಟ ಅಂಗಡಿಯಿಂದ ಹಿಡಿದು ದೊಡ್ಡ ಮಟ್ಟದ ವ್ಯವಹಾರ ಗಳಲ್ಲಿಯು ಈಗ ಡಿಜಿಟಲ್ ಪೇ ಬಳಸಲಾಗುತ್ತಿದೆ. ಇದೀಗ ಸರಕಾರಿ ಬಸ್ ನಲ್ಲೂ ಪ್ರಯಾಣಿಕರು ಡಿಜಿಟಲ್ ಪೇಮೆಂಟ್ ಸಿಸ್ಟಂ ಬಳಸುವಂತೆ ಆದೇಶ ಹೊರಡಿಸಿದೆ.
ಸುಲಭ ಪ್ರಯಾಣ
ಈಗಾಗಲೇ ಬೆಂಗಳೂರಿನ ಬಿಎಂಟಿಸಿ ಕೆಲ ಬಸ್‌ಗಳಲ್ಲಿ ಮಾತ್ರ ಈ ಆನ್‌ಲೈನ್ ಪೇಮೆಂಟ್ ವ್ಯವಸ್ಥೆ ಜಾರಿಯಲ್ಲಿತ್ತು. ಈ ಹಿಂದೆ ಕೊರೋನ ಸಂದರ್ಭದಲ್ಲಿ ಈ ಯೋಜನೆ ಜಾರಿಯಾದರೂ ಅಷ್ಟೊಂದು ಪ್ರತಿಕ್ರಿಯೆ ಇರಲಿಲ್ಲ. ಇದೀಗ ಮುಂದುವರೆದು ರಾಜ್ಯಾದ್ಯಂತ ವಿಸ್ತರಣೆ ಮಾಡಲು ಸಾರಿಗೆ ಸಂಸ್ಥೆಗಳು ಮುಂದಾಗಿದ್ದು ನಗದು ರಹಿತ ಪಾವತಿ, ಮೊಬೈಲ್ ನಲ್ಲಿ UPI ಆ್ಯಪ್ ಇದ್ರೆ ಸಾಕು ಬಸ್ ನಲ್ಲಿ ಸಂಚಾರ ಮಾಡಬಹುದು.
ಸಾರಿಗೆ ಸಚಿವರಿಂದ ಮಾಹಿತಿ
ಈ ಬಗ್ಗೆ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರು ಮಾತನಾಡಿ NWKRTC ಯಲ್ಲಿ ನಗದು ರಹಿತ ವಹಿವಾಟನ್ನು UPI ಪೇಮೆಂಟ್ ಆ್ಯಪ್ ಕೂಡ ಜಾರಿಗೆ ತರುತ್ತಿದ್ದು ಪ್ರಯಾಣಿಕರು ಯುಪಿಐ ಪೇಮೆಂಟ್ ಬಳಸಬಹುದಾಗಿದೆ. ಇನ್ನು ಮುಂದೆ ಎಲ್ಲ ಸಾರಿಗೆ ಬಸ್ ಗಳಲ್ಲೂ ಈ ವ್ಯವಸ್ಥೆ ಇದೆ ಎಂದಿದ್ದಾರೆ. ಅದೇ ರೀತಿ ಡಿಜಿಟಲ್ ವ್ಯವಹಾರವನ್ನು ಬೆಂಬಲಿಸುವ ಸಲುವಾಗಿ ಸಾರಿಗೆ ಸಂಸ್ಥೆಯು UPI ಪೇಮೆಂಟ್ ಪಾವತಿ ಜಾಗೃತಿ ಪಾಕ್ಷಿಕ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದ್ರು.
ಕ್ಯೂ ಆರ್ ಕೋಡ್ ಮೂಲಕ ಪಾವತಿ
ಸಾರಿಗೆ ಇಲಾಖೆಯ ಕಂಡಕ್ಟರ್‌ಗೆ ಪ್ರತ್ಯೇಕ ಸ್ಟ್ಯಾಟಿಕ್ ಕ್ಯೂಆರ್ ಕೋಡ್ ನೀಡಲಾಗಿದ್ದು ಈ ಮೂಲಕ ಸ್ಕ್ಯಾನ್ ಮಾಡಬಹುದಾಗಿದೆ. ಟಿಕೆಟಿಂಗ್ ಯಂತ್ರಗಳನ್ನು ಯುಪಿಐ ಗೆ ಅನುಗುಣವಾಗಿ ನವೀಕರಣ ಮಾಡಿದ್ದು ಈ ಬಗ್ಗೆ ಕಂಡಕ್ಟರ್ ಗಳಿಗೆ ಅಗತ್ಯ ತರಬೇತಿ ಕೂಡ ನೀಡಲಾಗಿದೆ. ಪ್ರಯಾಣಿಕರು ಹಣ ಇಲ್ಲದ ಸಂದರ್ಭ ದಲ್ಲಿ ಫೋನ್‌ಪೇ, ಗೂಗಲ್ ಪೇ ಮೂಲಕ ಹಣ ಪಾವತಿಸಿ ಪ್ರಯಾಣ ಮಾಡಬಹುದಾಗಿದ್ದು ಇದರಿಂದ ಚಿಲ್ಲರೆ ಸಮಸ್ಯೆ ಯು ನಿವಾರಣೆ ಯಾಗುತ್ತದೆ.
