Home ಸುದ್ದಿಗಳು ಯುನಿಕ್ ಕ್ರಿಯೇಟಿವ್ ಆರ್ಟ್ ಸೆಂಟರ್, ಮೂಡಬಿದಿರೆ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ

ಯುನಿಕ್ ಕ್ರಿಯೇಟಿವ್ ಆರ್ಟ್ ಸೆಂಟರ್, ಮೂಡಬಿದಿರೆ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ

0
ಯುನಿಕ್ ಕ್ರಿಯೇಟಿವ್ ಆರ್ಟ್ ಸೆಂಟರ್, ಮೂಡಬಿದಿರೆ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ

ಶಾಲೆ, ಹೋಮ್‌ವರ್ಕ್‌, ಪುಸ್ತಕ ಟ್ಯೂಷನ್‌ಗಳಿಗೆ ಒಂದು ಅಲ್ಪವಿರಾಮ ಇಡುವ ಸಮಯವಿದು. ಹೌದು ಶಾಲೆಗಳಲ್ಲಿ ಯಾಂತ್ರಿಕವಾಗಿ ಕಲಿಯುವ ಮಕ್ಕಳನ್ನು ಸೃಜನಾತ್ಮಕವಾಗಿ ಯೋಚಿಸಿ ಕಾರ್ಯತತ್ಪರರಾಗುವಂತೆ ಮಾಡ್ತಾ ಇದೆ, ‌ಯುನಿಕ್ ಕ್ರಿಯೇಟಿವ್ ಆರ್ಟ್ ಸೆಂಟರ್, ನಶಿಸಿ ಹೋಗುತ್ತಿರುವ ಕಲೆಗಳ ಬಗ್ಗೆ ‌ ವಿಶೇಷ ಮಹತ್ವ ನೀಡುವ “ಹಸಿರ ಮಡಿಲಲ್ಲಿ ಹಳೆಯ ನೆನಪು” ಎಂಬ ಪರಿಕಲ್ಪನೆಯೊಂದಿಗೆ ಮನೋರಂಜನಾತ್ಮಕ, ಕ್ರಿಯಾತ್ಮಕ, ಸೃಜನಶೀಲ, ವೈಚಾರಿಕ ವಿಚಾರಗಳೊಂದಿಗೆ ಮಕ್ಕಳ ಬೇಸಿಗೆ ಶಿಬಿರವು ಮೂಡಬಿದಿರೆಯ ಕಡಲ ಕೆರೆಯ ಸಾಲು ಮರದ ತಿಮ್ಮಕ್ಕ ನಿಸರ್ಗಧಾಮದಲ್ಲಿ ಅರಣ್ಯ ಇಲಾಖೆ ಮೂಡುಬಿದಿರೆ ವಲಯ, ಕುಂದಾಪುರ ವಿಭಾಗ ಇವರ ಸಹಯೋಗದೊಂದಿಗೆ ನಡೆಯಲಿದೆ.

ಹಸಿರ ಮಡಿಲಲ್ಲಿ ವಿಶೇಷ ಬೇಸಿಗೆ ಶಿಬಿರ
ಪರಿಸರ, ಹಕ್ಕಿ, ಕೀಟ ಇವುಗಳ ಬಗ್ಗೆ ಸವಿವರವಾಗಿ ನೋಡುತ್ತ ಆಹ್ಲಾದಕರ ಪರಿಸರದ ಅನುಭವ ಪಡೆಯುವ ಜೊತೆಗೆ ಈ ಬೇಸಿಗೆ ಶಿಬಿರವು ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೇ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ‌ಮಣ್ಣಿನ ಮಡಕೆ – ಬಣ್ಣದ ಮಡಕೆ, ನಾ ಗೀಚಿದ ಚಿತ್ರ, ಚಿಣ್ಣರ ಬಣ್ಣ ಮತ್ತು ಕೈಕುಸಿರಿನ ಕಲೆ, ಬನ್ನಿ ಕಟ್ಟೋಣ ಹೂವ, ಕಲರವದಲ್ಲೊಂದು ಅಜ್ಜಿಯ ಮನೆ, ಚಿಣ್ಣರ ಬಂಡಿಯಾನ, ಚಿಣ್ಣರಿಗೊಂದು ಸಂಪ್ರದಾಯಿಕ ಅಡುಗೆಯ ‘ಕಿಣಿ’ಯ ರುಚಿ, ಕಲರವದಲ್ಲಿ ಹಕ್ಕಿಗೂಡು, ಜೇನಿನ ರಸಸವಿ, ಚಿಣ್ಣರ ಹಾಡು, ಚಿಣ್ಣರ ನೃತ್ಯ, ಭಾಗ್ಯದ ಬಳೆಗಾರ, ಚಿಣ್ಣರ ನಾಟಕ, ಜಾನಪದ ರಂಗಿನಾಟ ಹಾಗೂ ಸಾಂಪ್ರದಾಯಿಕ ವಿವಿಧ ಆಟೋಟಗಳು, ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಂಡು ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ.

ಶಿಬಿರ ಆಯೋಜನೆ
ಬೇಸಿಗೆ ಶಿಬಿರವು ದಿನಾಂಕ 13-04-24 ರಿಂದ 20-04-24 ರ ವರೆಗೆ 5 ವರ್ಷದಿಂದ 17 ವರ್ಷದ ವರೆಗಿನ ಮಕ್ಕಳಿಗೆ ಆಯೋಜನೆ ಮಾಡಲಾಗಿದ್ದು, ಶಿಬಿರದಲ್ಲಿ ರಾಜ್ಯದ ವಿಶೇಷ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಆಸಕ್ತ ಮಕ್ಕಳು ಸಂಪರ್ಕಿಸಬಹುದು

ಸಂತೋಷ್ ಮಾಳ- 9972084156,
ಪ್ರಣಮ್ಯ ಜೈನ್
8317424275
ರೇಷ್ಮಾ ಲೋಬೋ
9483459623
ಮೇಘನಾ ಜೈನ್
9032829301

 

LEAVE A REPLY

Please enter your comment!
Please enter your name here