Home ಕರ್ನಾಟಕ ಕರಾವಳಿ ಕಾರ್ಕಳ: ನಾಳೆ (ಮಾ. 24) ಅಭಿನವ್ ಭಾರತ್ ವತಿಯಿಂದ “ನಮಗಾಗಿ ಮೋದಿ” ವಿಶೇಷ ರಾಷ್ಟ್ರ ಜಾಗೃತಿ ಸಮಾವೇಶ

ಕಾರ್ಕಳ: ನಾಳೆ (ಮಾ. 24) ಅಭಿನವ್ ಭಾರತ್ ವತಿಯಿಂದ “ನಮಗಾಗಿ ಮೋದಿ” ವಿಶೇಷ ರಾಷ್ಟ್ರ ಜಾಗೃತಿ ಸಮಾವೇಶ

0
ಕಾರ್ಕಳ: ನಾಳೆ (ಮಾ. 24) ಅಭಿನವ್ ಭಾರತ್ ವತಿಯಿಂದ “ನಮಗಾಗಿ ಮೋದಿ” ವಿಶೇಷ ರಾಷ್ಟ್ರ ಜಾಗೃತಿ ಸಮಾವೇಶ

ಉಡುಪಿ: ಅಭಿನವ ಭಾರತ ಕಾರ್ಕಳ ವತಿಯಿಂದ ನಮಗಾಗಿ ಮೋದಿ ವಿಶೇಷ ರಾಷ್ಟ್ರ ಜಾಗೃತಿ ಸಮಾವೇಶ ಮಾರ್ಚ್ 24ರಂದು ಸಂಜೆ 4 ಗಂಟೆಗೆ ಕಾರ್ಕಳದ ಬಂಡಿಮಠದಲ್ಲಿರುವ ಹೋಟೆಲ್ ಬಾಲಾಜಿ ಇನ್ ನಲ್ಲಿ ನಡೆಯಲಿದೆ.

ಸಮಾವೇಶದಲ್ಲಿ ಯುವ ರಾಜಕೀಯ ವಿಶ್ಲೇಷಕರಾದ ಸುರಭಿ ಹುದಿಗೆರೆ ಇವರು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ವಿಂಗ್ ಕಮಾಂಡರ್ ಬಿ.ಎಸ್ ಸುದರ್ಶನ್, ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್, ಪತ್ರಕರ್ತ, ಅಂಕಣಕಾರ ಸಂತೋಷ್ ತಮ್ಮಯ್ಯ ಪಾಲ್ಗೊಳ್ಳಲಿದ್ದಾರೆ. ಈ ಜಾಗೃತಿ ಸಮಾವೇಶದ ಅಧ್ಯಕ್ಷತೆಯನ್ನು ಹಿರಿಯ ಉದ್ಯಮಿಯಾದ ಬೋಳ ಪ್ರಭಾಕರ್ ಕಾಮತ್ ವಹಿಸಲಿದ್ದಾರೆ. ಸಮಾವೇಶದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣವೂ ಜರುಗಲಿದೆ ಎಂದು ಅಭಿನವ ಭಾರತ್ ನ‌ ಪ್ರಕಟನೆ ತಿಳಿಸಿದೆ.

 

LEAVE A REPLY

Please enter your comment!
Please enter your name here