
ಈ ಭಾರಿಯ ಬಿಸಿಲ ಬೇಗೆಗೆ ಜನ ಬೇಸೆತ್ತುಹೋಗಿದ್ದಾರೆ. ಅಷ್ಟರ ಮಟ್ಟಿಗೆ ಬಿಸಿಲಿನ ಧಗೆ ಈ ಬಾರಿ ಹೆಚ್ಚಳ ವಾಗಿದೆ.ಬೇಸಿಗೆ ಕಾಲದಲ್ಲಿ ಹೊರಗೆ ಕಾಲಿಟ್ಟರೆ ಸಾಕು ಡಿಹೈಡ್ರೇಷನ್ ಅಥವಾ ನಿರ್ಜಲೀಕರಣ ಜನರನ್ನು ಹೆಚ್ಚಾಗಿ ಕಾಡುತ್ತಿದೆ. ಆರೋಗ್ಯಕರ ಸಮಸ್ಯೆ ಗಳಂತು ಈ ಬೇಸಿಗೆ ಕಾಲದಲ್ಲಿ ಹೆಚ್ಚಾಗಿದೆ.ಅದಕ್ಕಾಗಿಯೇ ಈ ಸಂದರ್ಭದಲ್ಲಿ ತಜ್ಞರು ಹೆಚ್ಚಿನ ಸಲಹೆ ಗಳನ್ನು ನೀಡುತ್ತಿರುತ್ತಾರೆ
ಈ ನಿಯಮ ಅನುಸರಿಸಿ
*ಈ ಬೇಸಿಗೆಯಲ್ಲಿ ಕಾರ್ಬೋನೇಟೆಡ್ ಪಾನೀಯಗಳನ್ನು ತ್ಯಜಿಸಿ ನೀರು, ಮಜ್ಜಿಗೆ, ಹಣ್ಣಿನ ಜ್ಯೂಸ್, ಎಳನೀರು ಹೆಚ್ಚಾಗಿ ಕುಡಿಯಿರಿ.
*ಬೇಸಿಗೆಯಲ್ಲಿ ಪ್ರವಾಸ ಕೈಗೊಳ್ಳುವುದು, ಶುಭಸಮಾರಂಭ,ಮದುವೆ ಇತರೆ ಕಾರ್ಯಕ್ರಮಗಳ ಪ್ರಯಾಣಕ್ಕೆ ತೆರಳುವಾಗ ಅಗತ್ಯವಾಗಿ ಕುಡಿಯುವ ನೀರನ್ನು ಕೊಂಡೊಯ್ಯುವುದನ್ನು ಮರೆಯಬಾರದು
*ಮಕ್ಕಳು ಹಾಗೂ ವೃದ್ಧರು ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ ಮಧ್ಯಾಹ್ನ ದ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು.
*ನೀವು ಈ ಬೇಸಿಗೆಯಲ್ಲಿ ಅತಿಯಾದ ಖಾರ, ಹುಳಿ ಸೇವನೆ ಮಾಡಬಾರದು
*ಈ ಬೇಸಿಗೆಯಲ್ಲಿ ನಾನ್ ವೆಜ್ ಆಹಾರ ಕಡಿಮೆ ಮಾಡಿ ತರಕಾರಿ, ಹಣ್ಣು ಸೇವನೆ ಇತ್ಯಾದಿಗಳಿಗೆ ಹೆಚ್ಚಿನ ಆದ್ಯತೆ ನೀಡಿ.
*ಬೇಸಿಗೆಯಲ್ಲಿ ನಿಮ್ಮ ಮುಖ ತಣ್ಣೀರಿನಲ್ಲಿ ತೊಳೆಯುತ್ತ ಇರಿ, ಈ ಅಭ್ಯಾಸವು ಮಾಡುವುದರಿಂದ ರಿಫ್ರೆಶ್ ಆಗುವುದಲ್ಲದೆ, ಕಣ್ಣುಗಳಲ್ಲಿರುವ ಧೂಳಿನ ಕಣಗಳು ಹೊರ ಬರುತ್ತದೆ.
ಈ ಹಣ್ಣು, ತರಕಾರಿಗಳನ್ನು ಸೇವಿಸಿ
*ಟೊಮೇಟೊದಲ್ಲಿ ವಿಟಮಿನ್ ಸಿ ಹೆಚ್ಚಾಗಿ ಇರುವುದರಿಂದ ಬೇಸಿಗೆಯಲ್ಲಿ ಈ ತರಕಾರಿ ಬೆಸ್ಟ್. ಇದು ಆರೋಗ್ಯಕ್ಕೆ ಮತ್ತು ಚರ್ಮಕ್ಕೆ ಸಹಕಾರಿಯಾಗಿದೆ.
*ಕಿತ್ತಳೆ ಹಣ್ಣು ತಿನ್ನುವುದು ಉತ್ತಮ ಇದು ವಿಟಮಿನ್ ಸಿ ಹೊಂದಿರುವುದರಿಂದ ಆರೋಗ್ಯಕ್ಕೆ ಒಳಿತಾಗಲಿದೆ.
*ಕಲ್ಲಂಗಡಿ ಹಣ್ಣು ಕೂಡ ದೇಹವನ್ನು ತಂಪಾಗಿ ಇರಿಸುತ್ತದೆ. ಈ ಕಲ್ಲಂಗಡಿ ಹಣ್ಣಿನಲ್ಲಿ ನೀರು ಸಮೃದ್ಧವಾಗಿದ್ದು, ಹೈಡ್ರೇಶನ್ ಹೆಚ್ಚು ಮಾಡಲು ಸಹಾಯ ಮಾಡುತ್ತದೆ.
*ಅದೇ ರೀತಿ ಈ ಬೇಸಿಗೆಯಲ್ಲಿ ಹರಿವೆ, ಮೆಂತೆ, ಬಸಳೆ ಸೊಪ್ಪು ಗಳಿಗೂ ಹೆಚ್ಚಿನ ಆದ್ಯತೆಯನ್ನು ನೀಡಿದ್ರೆ ಈ ಬೇಸಿಗೆಯಲ್ಲಿ ನಿಮ್ಮ ಆರೋಗ್ಯ ಸುಧಾರಣೆ ಯಾಗಿರುತ್ತದೆ.
