Home ಸುದ್ದಿಗಳು ರಾಷ್ಟ್ರೀಯ ದೋಣಿ ಮುಳುಗಿ 90ಕ್ಕೂ ಹೆಚ್ಚು ಮಂದಿ ಸಾವು

ದೋಣಿ ಮುಳುಗಿ 90ಕ್ಕೂ ಹೆಚ್ಚು ಮಂದಿ ಸಾವು

0
ದೋಣಿ ಮುಳುಗಿ 90ಕ್ಕೂ ಹೆಚ್ಚು ಮಂದಿ ಸಾವು

ನವದೆಹಲಿ: ಮೊಜಾಂಬಿಕ್ ಕರಾವಳಿ ತೀರದ ಬಳಿ ಮೀನುಗಾರಿಕಾ ದೋಣಿ ಮುಳುಗಿ ಮಕ್ಕಳು ಸೇರಿದಂತೆ 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಘಟನೆ ದಕ್ಷಿಣ ಆಫ್ರಿಕಾದ ದ್ವೀಪ ರಾಷ್ಟ್ರ ಮೊಜಾಂಬಿಕ್ ಕರಾವಳಿ ತೀರದ ಬಳಿ ಸಂಭವಿಸಿದೆ. 130 ಮಂದಿ ಪ್ರಯಾಣಿಸುತ್ತಿದ್ದ ಮೀನುಗಾರಿಕಾ ದೋಣಿ ಮುಳುಗಿ 90 ಮಂದಿ ಸಾವನ್ನಪ್ಪಿದ್ದಾರೆ. ನಾಪತ್ತೆಯಾದವರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಜನದಟ್ಟಣೆಯ ಕಾರಣದಿಂದ ದೋಣಿ ಮುಳುಗಿದೆ ಎನ್ನಲಾಗುತ್ತಿದೆ.

 

LEAVE A REPLY

Please enter your comment!
Please enter your name here