
ಬಳ್ಳಾರಿ: ಯಡಿಯೂರಪ್ಪ ಅವರ ಮೇಲಿಟ್ಟ ವಿಶ್ವಾಸದಂತೆ ನನ್ನ ಮೇಲೆ ವಿಶ್ವಾಸ ಇಟ್ಟುಕೊಳ್ಳಿ. ನಿಮ್ಮ ಮನೆಯ ಮಗ ಸಹೋದರನಾಗಿ ನಿಮ್ಮ ಜತೆಗೆ ಇರುತ್ತೇನೆ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ಅವರು ಇಂದು ಬಳ್ಳಾರಿಯ ವೀರಶೈವ ಸಮಾಜ ಸಮಾವೇಶದಲ್ಲಿ ಮಾತನಾಡಿ, ಇದು ಎರಡು ಜಾತಿ ಮತ್ತು ಎರಡು ಪಕ್ಷದ ನಡುವಿನ ಚುನಾವಣೆ ಅಲ್ಲ, ದೇಶದ ಭವಿಷ್ಯದ ಚುನಾವಣೆ. ರಾಜ್ಯದ ಕಾಂಗ್ರೆಸ್ ಸರಕಾರ ಜನರಿಗೆ ಕಿವಿಗೆ ಹೂ ಮುಡಿಸಿದೆ. ಮೋದಿ ಅಕ್ಕಿಯನ್ನು ತಮ್ಮ ಫೋಟೋ ಹಾಕಿದ ಸಿದ್ದರಾಮಯ್ಯ, ಇದು ತಮ್ಮ ಅಕ್ಕಿ ಎಂದು ಬಿಂಬಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ಹಗಲು ದರೋಡೆ ಮಾಡ್ತಿದೆ. ರಾಜ್ಯದ ಜನರು ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್ಸಿಗರು ಸಮಾಜದ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡ್ತಾರೆ ಎಂದರು.
