
ಗದಗ: ಇಷ್ಟವಿಲ್ಲದಿದ್ದರೂ ಬೇರೊಬ್ಬ ಯುವಕನೊಂದಿಗೆ ಮದುವೆ ಮಾಡಿದ್ದಕ್ಕೆ ನವವಿವಾಹಿತೆ ಮನನೊಂದು ಪ್ರಿಯಕರನೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಮಾಡಿಕೊಂಡ ದುರ್ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನೆರೆಗಲ್ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ.
ಮೃತರನ್ನು ಲಲಿತಾ ಹಲಗೇರಿ(26), ಅಪ್ಪಣ್ಣ ಗೊರಗಿ(28) ಎಂದು ಗುರುತಿಸಲಾಗಿದೆ. ಇವಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆಯಾಗುವುದಕ್ಕೆ ಯುವತಿ ಕುಟುಂಬದವರು ಒಪ್ಪಿಲ್ಲವೆಂದು ಹೇಳಲಾಗಿದೆ.
ಸ್ಥಳಕ್ಕೆ ನೆರೆಗಲ್ ಪೊಲೀಸರು ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ.
