
ಉಡುಪಿ: ಬಿಜೆಪಿ ಯುವಮೋರ್ಚಾ ಕಾಪು ಮಂಡಲದ ನೇತೃತ್ವದಲ್ಲಿ ಕಾಪುವಿನಲ್ಲಿ ಬೃಹತ್ ರೋಡ್ ಶೋ ಎಪ್ರಿಲ್ 21 ರಂದು ಸಂಜೆ 4 ಗಂಟೆಯಿಂದ ನಡೆಯಲಿದ್ದು, ಮೈಸೂರು ಸಂಸದ ಪ್ರತಾಪ್ ಸಿಂಹ, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಲಿದ್ದಾರೆ.
ಕಾಪು ಜನಾರ್ದನ ಸ್ವಾಮಿ ದೇವಸ್ಥಾನದ ಮೈದಾನದಿಂದ ಕಾಪು ಪೇಟೆಯವರೆಗೆ ನಡೆಯಲಿದೆ ಎಂದು ಕಾಪು ಯುವಮೋರ್ಚಾ ಪ್ರಕಟನೆ ತಿಳಿಸಿದೆ.
