
ಹುಬ್ಬಳ್ಳಿ: ನೇಹ ಕೊಲೆ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ನೀಡಿದ್ದ ಪ್ರತಿಕ್ರಿಯೆಗೆ ನೇಹಾ ಹಿರೇಮಠ್ ತಂದೆ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ವೈಯಕ್ತಿಯ ಕಾರಣ ಏನಿರುತ್ತೆ ಎಂದು ನೇಹ ತಂದೆ ಪ್ರಶ್ನೆ ಮಾಡಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡಿ ಇಡೀ ರಾಜ್ಯದ ಮುಂದೆ ನಮ್ಮ ಮನೆತನದ ಮರ್ಯಾದೆ ತೆಗೆಯಬೇಡಿ. ವೈಯಕ್ತಿಕ ವ್ಯವಹಾರ ಎಂದರೇನು? ನಾನೇನಾದ್ರೂ ಆತನ ಜೊತೆ ವ್ಯವಹಾರ ನಡೆಸಿದ್ದೇನಾ ಅಥವಾ ನನ್ನ ಮಗಳು ವ್ಯವಹಾರ ನಡೆಸಿದ್ದಳಾ ಎಂದು ನೇರವಾಗಿಯೇ ಮುಖ್ಯಮಂತ್ರಿಗಳನ್ನೇ ನಿರಂಜನ್ ಹಿರೇಮಠ್ ಪ್ರಶ್ನೆ ಮಾಡಿದರು. ಸಂಪೂರ್ಣವಾಗಿ ಮಾಹಿತಿ ತೆಗೆದುಕೊಂಡು ಮತನಾಡಿ. ನಮ್ಮ ಮನೆತನದ ಗೌರವ ಕಡಿಮೆ ಆದ್ರೆ ಏನು ಗತಿ? ರಾಜಕೀಯವಾಗಿ ಹೇಳಿಕೆ ನೀಡಬೇಡಿ ಎಂದಿದ್ದಾರೆ.
ಈ ಕೊಲೆಯ ಹಿಂದೆ ಇನ್ನೂ ನಾಲ್ಕು ಜನರಿದ್ದು, ಅವರನ್ನು ಬಂಧಿಸುವ ಕೆಲಸ ಆಗಬೇಕು. ಬಂಧಿತನಾಗಿರುವ ಯುವಕನನ್ನು ಎನ್ಕೌಂಟರ್ ಮಾಡಬೇಕು ಎಂದು ನಿರಂಜನ್ ಹಿರೇಮಠ್ ಮನವಿ ಮಾಡಿದ್ದಾರೆ.
