ಮಂಗಳೂರು: ನೀಟ್ ಫರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಕಿಶೋರ್ ಔಟ್ ಆಫ್ ಔಟ್ ಅಂಕ ಗಳಿಸುವುದರ ಮೂಲಕ ದೇಶಕ್ಕೆ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ.
ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಇವರು ಮೂಲತಃ ಮೈಸೂರು ಮೂಲದವರು. ಕಠೀಣ ಪರಿಶ್ರಮದ ಮೂಲಕ 720ಕ್ಕೆ 720 ಅಂಕಗಳನ್ನು ಪಡೆಯುವ ಮೂಲಕ ದೇಶಕ್ಕೆ ಮೊದಲ ರ್ಯಾಂಕ್ ಬಂದಿದ್ದು. ಇವರ ಈ ಸಾಧನೆ ರಾಜ್ಯಕ್ಕೆ, ಹೆತ್ತವರಿಗೆ ಹಾಗೂ ಶಿಕ್ಷಕ ವೃಂದದವರಿಗೂ ಹೆಮ್ಮೆಯನ್ನುಂಟು ಮಾಡಿದೆ. ಅರ್ಜುನ್ ತಂದೆ – ತಾಯಿ ಕೂಡ ವೃತ್ತಿಯಲ್ಲಿ ವೈದ್ಯರಾಗಿದ್ದು, ಮುಂದೆ ಸರ್ಜನ್ ಆಗುವ ಬಯಕೆ ಇದೆ ಎಂದು ಅರ್ಜುನ್ ಹೇಳಿಕೊಂಡಿದ್ದಾರೆ.
ಇನ್ನು, ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪೈಕಿ 67 ಮಂದಿಗೆ ಫಸ್ಟ್ ರ್ಯಾಂಕ್ ದೊರಕಿದ್ದು, ರಾಜ್ಯದ ಮೂವರು ದೇಶಕ್ಕೆ ಅಗ್ರ ರ್ಯಾಂಕ್ ಪಡೆದಿರುವುದು ಹೆಮ್ಮೆಯ ವಿಚಾರ.
