ಬೆಂಗಳೂರು: ಅಶ್ಲೀಲ ಪೆನ್‌ಡ್ರೈವ್ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅವರು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಮುಂದಿಟ್ಟುಕೊಂಡು ಕಿಡಿಗೇಡಿಗಳು ಹಣ ಮಾಡುವ ದಂಧೆಗಿಳಿದಿದ್ದಾರೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಬೇಕಾ..? ಬೇಕಾದರೆ ಡಿಎಮ್ ಮಾಡಿ..ಪೋಸ್ಟ್ ಅಪ್ಲೋಡ್ ಮಾಡಿ ಇದಕ್ಕೆ ಲೈಕ್ ಮಾಡುವಂತೆ ಹೇಳುವುದಲ್ಲದೇ.. ವಿಡಿಯೋಗಾಗಿ ಹಣವನ್ನು ನೀಡುವಂತೆ ಹೇಳುತ್ತಿದ್ದಾರೆ. ಕಿಡಿಗೇಡಿಗಳ ಈ ಕತ್ಯದಿಂದ ಸಂತ್ರಸ್ತೆಯರಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ. ಈಗಾಗಲೇ ಎಸ್‌ಐಟಿ ವಿಡಿಯೋಗಳನ್ನು ಎಲ್ಲಿಯೂ ಕೂಡ ಶೇರ್ ಮಾಡದಂತೆ ಸುತ್ತೋಲೆಯನ್ನು ಹೊರಡಿಸಿದೆ, ಆದರೂ ಕೂಡ ಕಿಡಿಗೇಡಿಗಳು ಈ ರೀತಿಯ ಕೃತ್ಯ ಎಸಗುತ್ತಿರುವುದು ವಿಷಾಧನೀಯ.
ಕೆಲವು ಕಿಡಿಗೇಡಿಗಳು ವಿಡಿಯೋದಲ್ಲಿದ್ದ ಮಹಿಳೆಯರ ಮುಖವನ್ನೂ ಕೂಡ ಬ್ಲರ್ ಮಾಡದೇ ಹಾಸನದ ಬಸ್ ನಿಲ್ದಾಣ ಸೇರಿದಂತೆ ಎಲ್ಲಾ ಕಡೆ ಪೆನ್‌ಡ್ರೈವ್ ಇಟ್ಟು, ಸಾಮಾಜಿಕ ಜಾಲತಾಣದಲ್ಲೂ ವಿಡಿಯೋವನ್ನು ಹರಿಬಿಟ್ಟಿದ್ದರು. ಇದರಿಂದಾಗಿ ವಿಡಿಯೋದಲ್ಲಿದ್ದ ಅದೆಷ್ಟೋ ಮಂದಿ ಮಹಿಳೆಯರು ಸಾಯಲು ಮುಂದಾಗಿದ್ದು, ಇನ್ನೂ ಕೆಲವರು ಕುಟುಂಬಸ್ಥರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಪೊಲೀಸರು ವಿಡಿಯೋ ವೈರಲ್ ಆಗುತ್ತಿರುವುದನ್ನು ತಡೆದು ಕಿಡಿಗೇಡಿಳನ್ನು ಬಂಧಿಸಿ ಶಿಕ್ಷಿಸುವಲ್ಲಿ ಆದಷ್ಟು ಬೇಗ ಕಾರ್ಯನಿರ್ವಹಿಸಬೇಕಿದೆ.
