Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಮೂಲಕ ಗ್ಯಾಸ್ ಸಿಲಿಂಡರ್ ಪಡೆಯಲು ಹೀಗೆ ಮಾಡಿ

ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಮೂಲಕ ಗ್ಯಾಸ್ ಸಿಲಿಂಡರ್ ಪಡೆಯಲು ಹೀಗೆ ಮಾಡಿ

0
ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಮೂಲಕ ಗ್ಯಾಸ್ ಸಿಲಿಂಡರ್ ಪಡೆಯಲು ಹೀಗೆ ಮಾಡಿ

ಇಂದು ಕೇಂದ್ರ ಸರ್ಕಾರವು ಮಹಿಳಾ ‌ಪರವಾದ ಹೆಚ್ಚು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹೌದು ಈಗಾಗಲೇ ಕೇಂದ್ರ ಸರ್ಕಾರವು ಮಹಿಳೆಯರ ಅಭಿವೃದ್ಧಿ ಗಾಗಿ ಹಲವು ರೀತಿಯ ಯೋಜನೆ ರೂಪಿಸಿದ್ದು ಅದರಲ್ಲಿ ಉಜ್ವಲ ಯೋಜನೆ ಕೂಡ ಒಂದಾಗಿದೆ. ಇದರ ಮೂಲಕ ಮಹಿಳೆಯರಿಗೆ ಅಡುಗೆ ಕೆಲಸ ಸುಲಭವಾಗುತ್ತಿದೆ. ಹಿಂದೆಲ್ಲ ಇದ್ದಿಲು, ಕಟ್ಟಿಗೆ ಬಳಸಿ ಆಹಾರ ತಯಾರು ಮಾಡುತ್ತಿದ್ದರು. ಇಂದು ಮಹಿಳೆಯರು ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಮೂಲಕ ಕೆಲಸ ಸುಲಭವಾಗುವಂತೆ ಆಗಿದೆ.‌ ಹೀಗಾಗಿ ಈ ಯೋಜನೆಗೆ ಮಹಿಳೆಯರು ಉತ್ತಮವಾಗಿ ಸ್ಪಂದಿಸಿದ್ದಾರೆ.

ಏನಿದು ಈ ಯೋಜನೆ?
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಹಾಗೂ ಸಿಲಿಂಡರ್ ನೀಡುವ ಯೋಜನೆ ಇದಾಗಿದ್ದು, ಹಲವು ಬಡವರ್ಗದ ಜನತೆ ಈ ಸೌಲಭ್ಯ ವನ್ನು ಪಡೆದುಕೊಳ್ಳುತ್ತಿದೆ. ಉಜ್ವಲ ಯೋಜನೆಯಡಿ ಮೊದಲು ಗ್ಯಾಸ್ ಸಂಪರ್ಕ ಪಡೆಯುವ ಮನೆಗೆ ಉಚಿತ ಸಂಪರ್ಕ, ಉಚಿತ ಗ್ಯಾಸ್ ಸ್ಟೌವ್ ನೀಡಲಾಗುತ್ತದೆ. ಬಳಿಕ ಪ್ರತಿ ಸಿಲಿಂಡರ್‌ಗೆ ಒಟ್ಟು 300 ರೂಪಾಯಿ ಸಬ್ಸಿಡಿಯಲ್ಲಿ ನೀಡಲಾಗುತ್ತದೆ.

ಈ ಕೆಲಸ ಕಡ್ಡಾಯ
ಇದೀಗ ಉಜ್ಬಲ ಯೋಜನೆಯ ಸೌಲಭ್ಯ ಸಿಗಬೇಕಾದರೆ ಈ ಕೆಲಸ ಕಡ್ಡಾಯ ಎಂದಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯೂ ಆಧಾರ್ ಒದಗಿಸಿದ ಫಲಾನುಭವಿಗಳಿಂದ ಬಯೋಮೆಟ್ರಿಕ್ ಪಡೆದು ಕ್ಕೊಳ್ಳುವಂತೆ ಸೂಚನೆ ನೀಡಿದೆ. ಎಲ್‌ಪಿಜಿ ಅನಿಲ ಸಂಪರ್ಕ ಪಡೆಯಲು ಕೆವೈಸಿ ಮಾಡುವುದು ಕಡ್ಡಾಯ ವಾಗಿದ್ದು ಇಕೆವೈಸಿ ಮಾಡದ ಗ್ರಾಹಕರ ಅನಿಲ ಸಂಪರ್ಕವನ್ನು ರದ್ದುಗೊಳಿಸಲಾಗುತ್ತದೆ. ಅಷ್ಟೆ ಅಲ್ಲದೇ ಒಂದು ವೇಳೆ ಗ್ರಾಹಕರು ಇ‌ಕೆವೈಸಿ ಮಾಡದೇ ಇದ್ದಲ್ಲಿ ಸಬ್ಸಿಡಿ ಹಣವೂ ಖಾತೆಗೆ ಜಮೆ ಆಗುವುದಿಲ್ಲ. ಇಕೆವೈಸಿಯನ್ನು ಮಾಡಿಸಲು ನೀವು ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗಳ ಬಳಿಗೆ ಭೇಟಿ ನೀಡಬಹುದು.

ಇನ್ನೂ ಅರ್ಜಿ ಹಾಕಬಹುದು
ಈ ಯೋಜನೆಗೆ ಇನ್ನೂ ಅರ್ಜಿ ಹಾಕಲು ಅವಕಾಶ ಇರಲಿದ್ದು, ಅರ್ಜಿದಾರರು ಮಹಿಳೆಯೇ ಆಗಿರಬೇಕು, ಮಹಿಳೆಯ ವಯಸ್ಸು 18ಕ್ಕಿಂತ ಹೆಚ್ಚಿದ್ದರೆ ಅರ್ಜಿ ಹಾಕಬಹುದು .ಬಿಪಿಎಲ್ ಬಡತನ ರೇಖೆಗಿಂತ ಕೆಳಗೆ ಇದ್ದ ಕುಟುಂಬದವರು ಅರ್ಜಿ ಹಾಕಬಹುದು.

ಈ ದಾಖಲೆ ಕಡ್ಡಾಯ
ಅರ್ಜಿಹಾಕಲು ಮಹಿಳೆಯ ಆಧಾರ್ ಕಾರ್ಡ್, ಗುರುತಿನ ಚೀಟಿ , ಪಡಿತರ ಚೀಟಿ ಬಿಪಿಎಲ್‌ ಕಾರ್ಡ್ ಹೊಂದಿರಬೇಕು. ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕಾಗುತ್ತದೆ. ಒಟ್ಟಿನಲ್ಲಿ ಈ ಯೋಜನೆಯ ಸೌಲಭ್ಯ ಸಿಗಬೇಕಾದರೆ ಇಕೆವೈಸಿ ಕಡ್ಡಾಯ ಮಾಡಬೇಕಾಗುತ್ತದೆ.

 

LEAVE A REPLY

Please enter your comment!
Please enter your name here