Home ಸರಕಾರಿ ಯೋಜನೆಗಳು ರಾಜ್ಯ ಸರಕಾರ ಈ ಮಹಿಳೆಯರಿಗೆ ಅರ್ಜಿ ಹಾಕಿದರೂ ಗೃಹಲಕ್ಷ್ಮಿ ಹಣ ಖಂಡಿತಾ ಬರಲ್ಲ, ಕಾರಣ ಏನು?

ಈ ಮಹಿಳೆಯರಿಗೆ ಅರ್ಜಿ ಹಾಕಿದರೂ ಗೃಹಲಕ್ಷ್ಮಿ ಹಣ ಖಂಡಿತಾ ಬರಲ್ಲ, ಕಾರಣ ಏನು?

0
ಈ ಮಹಿಳೆಯರಿಗೆ ಅರ್ಜಿ ಹಾಕಿದರೂ ಗೃಹಲಕ್ಷ್ಮಿ ಹಣ ಖಂಡಿತಾ ಬರಲ್ಲ, ಕಾರಣ ಏನು?

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಯ ಪ್ರಣಾಳಿಕೆಯನ್ನು ನೀಡುವ ಮೂಲಕ ಜನರಲ್ಲಿ ಭರವಸೆ ಹೆಚ್ಚಿಸಿತ್ತು. ಅದರಂತೆ ಚುನಾವಣೆ ಗೆದ್ದ ಬಳಿಕ ಗ್ಯಾರಂಟಿ ಯೋಜನೆಯನ್ನು ಕೂಡ ಜಾರಿ ಮಾಡಿದೆ.‌ ಅದರಲ್ಲಿ ಮಹಿಳಾ ಪರವಾದ ಎರಡು ಯೋಜನೆಯನ್ನು ಜಾರಿಗೆ ತಂದಿದ್ದು ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಯ ಪ್ರಯೋಜನವನ್ನೂ ಕೂಡ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ.‌ ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರಿಗೆ ಆರ್ಥಿಕ ಸಹಾಯಧನ ಸಿಕ್ಕಂತಾಗಿದೆ. ಮನೆಯ ‌ಹಿರಿಯ ಮಹಿಳೆಗೆ ಎರಡು ಸಾವಿರ ರೂ ವನ್ನು ಆಕೆಯ ಖಾತೆಗೆ ಜಮೆ ಮಾಡುತ್ತಿದ್ದು, ಈಗಾಗಲೇ ಮಹಿಳೆಯರು ಮನೆಗೆ ಬೇಕಾದ ವಸ್ತು, ಟಿವಿ, ಫ್ರಿಡ್ಜ್ ಇತ್ಯಾದಿಗಳನ್ನು ಖರೀದಿ ಮಾಡಿದ್ದಾರೆ. ಆದರೆ ಕೆಲವು ಮಹಿಳೆಯರಿಗೆ ಈ ಹಣ ಜಮೆಯಾಗಿಲ್ಲ.‌ಅದಕ್ಕೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ.

 

ಹತ್ತು ಕಂತಿನವರೆಗೆ ಹಣ ಜಮೆ
ಒಂದು ಕಡೆಯಲ್ಲಿ ಮಹಿಳೆಯರು ಗೃಹಲಕ್ಷ್ಮಿ ಹಣ ಬಂದ ಖುಷಿಯಲ್ಲಿ ಇದ್ದರೆ, ಇನ್ನೊಂದೆಡೆ ಹಣ ಇನ್ನೂ ಬಂದಿಲ್ಲ ಎಂದು ಬೇಸರ ಪಟ್ಟವರು ಕೂಡ ಇದ್ದಾರೆ. ಇಲ್ಲಿಯವರೆಗೆ ಹತ್ತು ಕಂತಿನವರೆಗೆ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿದ್ದು, ಹನ್ನೊಂದನೆಯ ಕಂತಿನ ಹಣ ಇನ್ನಷ್ಟೆ ಬಿಡುಗಡೆಯಾಗಬೇಕಿದೆ. ಈ ತಿಂಗಳಿನ 15 ರ ಒಳಗೆ ಹಣ ಬಿಡುಗಡೆಯಾಗಬಹುದು‌ ಎಂದು ಹೇಳಲಾಗಿದೆ.

ಹಣ ಬಂದಿಲ್ಲ?
ಗೃಹಲಕ್ಷ್ಮಿ ಹಣ ಕೆಲವು ಮಹಿಳೆಯರಿಗೆ ಬಂದಿಲ್ಲ. ಇದಕ್ಕಾಗಿ ಏನು ಮಾಡಬೇಕು ತಮ್ಮಿಂದ ಏನೆಲ್ಲ ತಪ್ಪು ಆಗಿದೆ. ಅವೆಲ್ಲವನ್ನು ಕೂಡ ಸರಿಪಡಿಸಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಈ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಬಗ್ಗೆ ಮರುಪರಿಶೀಲನೆ ಕೂಡ ಮಾಡಿದ್ದು, ತಮ್ಮ ದಾಖಲೆ ಸರಿ ಪಡಿಸುಕೊಳ್ಳುವಂತೆ ಸೂಚನೆ ಕೂಡ ನೀಡಿದೆ.

ಅನರ್ಹರಿಗೆ ಹಣ ಇಲ್ಲ
ಮಹಿಳೆಯರ ಖಾತೆಗೆ ತಿಂಗಳಿಗೆ 2,000 ರೂ ಹಣ ಜಮೆಯಾಗುತ್ತಿದ್ದು, ಅನರ್ಹರಿಗೆ ಈ ಹಣ ಬರಲಾರದು. ನಿಮ್ಮ ಬ್ಯಾಂಕ್ ಖಾತೆ ಸಮಸ್ಯೆ, EKYC ಮಾಡಿಸದೆ ಇದ್ದರೆ ಹಣ ಬರುವುದಿಲ್ಲ. ಅದರ ಜೊತೆ ನಿಮ್ಮ ಆಧಾರ್ ಅಪ್ಡೇಟ್ ಮಾಡಿ, ಬ್ಯಾಂಕ್ ಖಾತೆ ನಿಷ್ಕ್ರಿಯ ಆದಲ್ಲಿ ಹೊಸ ಖಾತೆಯನ್ನು ತೆರೆಯಿರಿ. ಈ ಬಗ್ಗೆ ಸಲಹೆ ನೀಡಲು‌ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ನೆರವಾಗುತ್ತಿದ್ದು ಅವರ ಸಹಾಯವನ್ನು ನೀವು ಪಡೆಯಬಹುದು.

ಇಂತವರ ಅರ್ಜಿ ತಿರಸ್ಕಾರ
ಗೃಹಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದ ಕೆಲವು ಮಹಿಳೆಯರ ಅರ್ಜಿ ತಿರಸ್ಕಾರ ಆಗಿದೆ. ಸರ್ಕಾರಿ ಉದ್ಯೋಗದಲ್ಲಿ ಇರುವುದು ಮತ್ತು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ಅಂತವರ ಅರ್ಜಿ ತಿರಸ್ಕಾರ ಮಾಡಲಾಗಿದೆ. ಆದಾಯ ತೆರಿಗೆ ನಿಯಮ ಕಟ್ಟುತ್ತಿದ್ದರೆ ಅಂತವರಿಗೆ ಗೃಹಲಕ್ಷ್ಮಿ ಸೌಲಭ್ಯ ಇಲ್ಲ.

 

LEAVE A REPLY

Please enter your comment!
Please enter your name here