Home ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಹೊಸ ನಿಯಮ ಜಾರಿಗೆ ತಂದ ರೈಲ್ವೆ ಇಲಾಖೆ, ಏನಿದು ಹೊಸ ಆದೇಶ?

ರೈಲ್ವೆ ಪ್ರಯಾಣಿಕರಿಗೆ ಹೊಸ ನಿಯಮ ಜಾರಿಗೆ ತಂದ ರೈಲ್ವೆ ಇಲಾಖೆ, ಏನಿದು ಹೊಸ ಆದೇಶ?

0
ರೈಲ್ವೆ ಪ್ರಯಾಣಿಕರಿಗೆ ಹೊಸ ನಿಯಮ ಜಾರಿಗೆ ತಂದ ರೈಲ್ವೆ ಇಲಾಖೆ, ಏನಿದು ಹೊಸ ಆದೇಶ?

ಇಂದು ಬಸ್ ಪ್ರಯಾಣಕ್ಕಿಂತ ರೈಲು ಪ್ರಯಾಣ ಹಿತಕರವಾಗಿದೆ.‌ ಟಿಕೆಟ್ ದರವೂ ಕಡಿಮೆ ಇರಲಿದ್ದು, ಸುರಕ್ಷಿತ ರೀತಿಯಲ್ಲಿ ಪ್ರಯಾಣ ಮಾಡಬಹುದು.‌ ಇಂದು ರೈಲ್ವೆ ಇಲಾಖೆ ಪ್ರಯಾಣಿಕರ ಹಿತ ದೃಷ್ಟಿಯಿಂದ ಹಲವು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆ.‌ ಅದರ ಜೊತೆ ಪ್ರಯಾಣಿಕರಿಗೆ ತೊಂದರೆಯಾಗಬಾರದೆಂದು ಹಲವು ಕಟ್ಟುನಿಟ್ಟಿನ ನಿಯಮ ಕೂಡ ಜಾರಿ ಮಾಡಿದೆ.‌ ಇದೀಗ ಹೊಸ ನಿಯಮ‌ ಜಾರಿ ಮಾಡಿದ್ದು, ಯಾವುದು ಈ ನಿಯಮ‌ ತಿಳಿಯಲು ಈ ಮಾಹಿತಿ ಪೂರ್ಣವಾಗಿ ಓದಿ.

ತಿಂದಂತಹ ಪ್ಲಾಸ್ಟಿಕ್ ಎಲ್ಲೆಡೆ ಎಸೆಯುವಂತಿಲ್ಲ

ರೈಲ್ವೆಯಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಇಂದು ಹೆಚ್ಚಾಗಿದೆ. ಅದರಂತೆ ಕೆಲವು ಪ್ರಯಾಣಿಕರೂ ಕೂಡ ನಿಯಮ ಪಾಲನೆ ಮಾಡುತ್ತಿಲ್ಲ. ತಿಂದಂತಹ ಊಟ,ತಿಂಡಿ, ಇತ್ಯಾದಿ ಪ್ಲಾಸ್ಟಿಕ್ ಪ್ಯಾಕೆಟ್ ಗಳು, ಚಹಾ ಕಪ್ ಗಳು, ಸಿಹಿತಿಂಡಿಗಳ ಬಾಕ್ಸ್ ಅನ್ನು ಕುಳಿತುಕೊಳ್ಳುವ ಆಸನದ ಕೆಳಗೆ ಎಸೆದು ಹೋಗುತ್ತಾರೆ.‌ ರೈಲಿನಲ್ಲಿ ಶುಚಿತ್ವ ಕಾಪಾಡದೇ ಇತರ ಪ್ರಯಾಣಿಕರಿಗೂ ಇದು ತೊಂದರೆ ಉಂಟು ಮಾಡಲಿದೆ. ಇದಕ್ಕಾಗಿ ರೈಲ್ವೆ ಇಲಾಖೆ ‌ಹೊಸ ನಿಯಮ ಜಾರಿ ಮಾಡಿದೆ. ಹೌದು, ರೈಲಿನಲ್ಲಿ ಪ್ಲಾಸ್ಟಿಕ್ ತಿಂದ ಕವರ್ ಹಾಕಿದ್ದಕ್ಕಾಗಿ ಸುಮಾರು 304 ಪ್ರಯಾಣಿಕರಿಂದ 1,23,075 ರೂ.ಗಳ ದಂಡವನ್ನು ಸಂಗ್ರಹಣೆ ಮಾಡಿದ್ದು, 243 ಪ್ರಯಾಣಿಕರಿಂದ ಸುಮಾರು 1,02,945 ರೂ.ಗಳನ್ನು ಒಟ್ಟು 2,43,750 ರೂ.ಗಳ ದಂಡವನ್ನು ಸಂಗ್ರಹಿಸಿದೆ. ಹಾಗಾಗಿ ಇನ್ಮುಂದೆ ರೈಲು ಪ್ರಯಾಣಿಕರು ಈ ಬಗ್ಗೆ ಜಾಗೃತರಾಗಿರಿ. ಇಲ್ಲದಿದ್ದಲ್ಲಿ ನಿಮಗೂ ಬೀಳಲಿದೆ ದಂಡ

ಈ ನಿಯಮವು ಇರಲಿದೆ
*ಅದೇ ರೀತಿ 10 ಗಂಟೆಯ ನಂತರ ವಿದ್ಯುತ್ ದೀಪಗಳನ್ನು ಆಫ್ ಮಾಡಲಾಗುತ್ತದೆ. ರಾತ್ರಿಯಲ್ಲಿ ಇತರ ಪ್ರಯಾಣಿಕರಿಗೆ ಡಿಸ್ಟರ್ಬ್ ಮಾಡುವಂತಿಲ್ಲ. ಜೋರಾಗಿ ಹಾಡುಗಳನ್ನು ಕೇಳುವುದು, ಮಾತನಾಡುವುದು ಇತ್ಯಾದಿ ಮಾಡುವಂತಿಲ್ಲ.

*ಇನ್ನು ತಿಂಡಿಗಳು, ಆಹಾರ ಮತ್ತು ಇತರ ಆಹಾರ ಉತ್ಪನ್ನಗಳ ಮೇಲೆ ಕೂಡ ರೈಲ್ವೆ ನಿಯಮಗಳನ್ನು ಜಾರಿ ಮಾಡಿದ್ದು, ಯಾವುದೇ ಮಾರಾಟಗಾರರು ಹೆಚ್ಚಿನ ಶುಲ್ಕ ವಿಧಿಸಲು ಸಾಧ್ಯವಿಲ್ಲ.

*ಇನ್ನು ಎಸಿ ಬೋಗಿಯಲ್ಲಿ 70 ಕೆಜಿ ವರೆಗೆ ಮಾತ್ರ ಲಗೇಜ್‌ ಇಟ್ಟುಕೊಳ್ಳಬಹುದು, ಸ್ಲೀಪರ್ ಕೋಚ್‌ನಲ್ಲಿ 40 ಕೆಜಿ ಮತ್ತು ಎರಡನೇ ದರ್ಜೆಯ ಬೋಗಿಯಲ್ಲಿ 35 ಕೆಜಿವರಗೆ ಮಾತ್ರವೇ ಲಗೇಜ್‌ ಇಟ್ಟಿರಬಹುದು

*ಒಂದು ವೇಳೆ ನೀವು ರೈಲನ್ನು‌ ಮಿಸ್‌ ಮಾಡಿಕೊಂಡರೆ ಮತ್ತು ನೀವು ಬೇರೆ ಯಾವುದಾದರೂ ನಿಲ್ದಾಣದಿಂದ ಆ ರೈಲನ್ನು ಚೇಸ್‌ ಮಾಡಲು ಇದ್ದರೆ ನಿಮ್ಮ ಸೀಟನ್ನು 2 ನಿಲ್ದಾಣಗಳವರೆಗೆ ಅಥವಾ 1 ಗಂಟೆಯವರೆಗೆ ಬೇರೆಯವರಿಗೆ ನೀಡಲಾಗುವುದಿಲ್ಲ

ಒಟ್ಟಿನಲ್ಲಿ ರೈಲ್ವೆ ನಿಯಮವನ್ನು ನೀವು ಪಾಲಿಸದಿದ್ದರೆ ನೀವು ದಂಡ ಪಾವತಿ ಮಾಡುವುದು ಪಕ್ಕಾ ,ಹಾಗಾಗಿ ಈ ಬಗ್ಗೆ ಜಾಗೃತರಾಗಿರಿ‌.ತಿಂದ ತಿಂಡಿ ಪ್ಯಾಕೆಟ್ ಗಳನ್ನು ರೈಲಿನಲ್ಲಿ ಎಸೆದರೆ ದಂಡದೊಂದಿಗೆ ಕಟ್ಟು ನಿಟ್ಟಿನ ‌ಕ್ರಮ ವನ್ನು ಕೈಗೊಳ್ಳಲಾಗಿದೆ.

 

LEAVE A REPLY

Please enter your comment!
Please enter your name here