
ಕಾಪು: ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಮುಂಜಾನೆ ಮಲ್ಲಾರು ಚುಕ್ಕು ತೋಟ ಎಂಬಲ್ಲಿ ನಡೆದಿದೆ. ಮಹಿಳೆ ಕೆಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.
ಆತ್ಮಹತ್ಯೆಗೆ ಮಾಡಿಕೊಂಡ ಮಹಿಳೆಯನ್ನು ಚುಕ್ಕು ತೋಟ ನಿವಾಸಿ ಮೊಹಿಸಿನಾ (34) ಎಂದು ಗುರುತಿಸಲಾಗಿದೆ.
ಮೃತ ಮಹಿಳೆ ಮೊಹಿಸಿನಾ ಅವರಿಗೆ 7 ವರ್ಷ ಹಾಗೂ 1 ವರ್ಷ 9 ತಿಂಗಳ ಮಗು ಇದೆ ಎನ್ನಲಾಗಿದ್ದು, ಪತಿಯ ಮನೆಯಲ್ಲಿಯೇ ವಾಸವಾಗಿದ್ದ ಈಕೆ ತಂದೆಯ ನಿಧನದ ನಂತರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
