Home ಕರ್ನಾಟಕ ಬಕ್ರೀದ್‌ ವೇಳೆ ಅನಧೀಕೃತ ಜಾನುವಾರು ಸಾಗಾಟ ಮಾಡಿದ್ರೆ ಸೂಕ್ತ ಕ್ರಮ: ಡಿ.ಸಿ ಡಾ.ಕೆ.ವಿದ್ಯಾಕುಮಾರಿ

ಬಕ್ರೀದ್‌ ವೇಳೆ ಅನಧೀಕೃತ ಜಾನುವಾರು ಸಾಗಾಟ ಮಾಡಿದ್ರೆ ಸೂಕ್ತ ಕ್ರಮ: ಡಿ.ಸಿ ಡಾ.ಕೆ.ವಿದ್ಯಾಕುಮಾರಿ

0
ಬಕ್ರೀದ್‌ ವೇಳೆ ಅನಧೀಕೃತ ಜಾನುವಾರು ಸಾಗಾಟ ಮಾಡಿದ್ರೆ ಸೂಕ್ತ ಕ್ರಮ: ಡಿ.ಸಿ ಡಾ.ಕೆ.ವಿದ್ಯಾಕುಮಾರಿ

ಉಡುಪಿ: ಬಕ್ರೀದ್ ಹಬ್ಬದ ಹಿನ್ನೆಲೆ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಟ ಮಾಡಿದರೆ ಅಂಹವರ ವಿರುದ್ಧ ಸೂಕ್ತ ಕ್ರಮ ಕೈಗೊಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೂಚನೆ ನೀಡಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಕ್ರೀದ್‌ ಹಬ್ಬದ ವೇಳೆ ಅನಧಿಕೃತವಾಗಿ ಜಾನಯವಾರುಗಳ ವಧೆ ಹಾಗೂ ಸಾಗಾಣಿಕೆಯನ್ನು ಮಾಡುವುದು ಕಂಡುಬಂದರೆ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಾರಿಯ ಬಕ್ರೀದ್ ಹಬ್ಬವು ಶಾಂತಿ ಮತ್ತು ಸೌಹಾರ್ಧಯುತವಾಗಿ ನಡೆಯಬೇಕು ಎಂದರು. ಈ ವಿಚಾರವಾಗಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ಗಳು ಶಾಂತಿ ಸಭೆಗಳನ್ನು ನಡೆಸಬೇಕು. ಜೊತೆಗೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವನ್ನು ವಹಿಸಬೇಕು ಎಂದಿದ್ದಾರೆ.
ಇನ್ನು, ಅಧಿಕೃತ ಜಾನುವಾರುಗಳನ್ನು ಸಾಗಾಟ ಮಾಡುವ ವೇಳೆಯಲ್ಲಿ ಪಶುಸಂಗೋಪನೆ ಇಲಾಖೆ ನಿಗದಿಪಡಿಸಿದ ನಮೂನೆಯಲ್ಲಿ ಅನುಮತಿ ಹಾಗೂ ಪೊಲೀಸ್‌ ಅನುಮತಿ ಕಡ್ಡಾಯ ಎಂದು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here