
ಸದ್ಯ ರಾಜ್ಯದಲ್ಲಿ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವ ಸುದ್ದಿ ಸಾಕಷ್ಟು ಕಡೆ ಹರಿದಾಡುತ್ತಿದೆ. 2019ರ ಏಪ್ರಿಲ್ 1ಕ್ಕಿಂತ ಮುನ್ನ ನೋಂದಣಿಯಾದ ಎಲ್ಲ ವಾಹನ ಗಳಿಗೆ ಹೆಚ್ಎಸ್ಆರ್ಪಿ ಅಳವಡಿಸಿ ಕೊಳ್ಳಲು ರಾಜ್ಯ ಸರ್ಕಾರ 2023ರ ಆಗಸ್ಟ್ 17ರಂದು ಅಧಿಸೂಚನೆ ಹೊರಡಿಸಿತ್ತು. ಬಳಿಕ ಹಲವಾರು ಭಾರೀ ಅವಕಾಶ ನೀಡಿದರೂ ಇನ್ನು ಪೂರ್ಣ ಪ್ರಮಾಣದ ನೋಂದಣಿಯಾಗಿಲ್ಲ.
ಇದೀಗ ನಂಬರ್ ಪ್ಲೇಟ್ ಅಳವಡಿಸದ ವಾಹನ ಮಾಲೀಕರಿಗೆ ಗುಡ್ ನ್ಯೂಸ್ ಒಂದು ಬಂದಿದ್ದು, ಹೈಕೋರ್ಟ್ ಮೇ 21ರಂದು ಹೊರಡಿಸಿದ್ದ ಆದೇಶ ಜುಲೈ 4ರವರೆಗೆ ವಿಸ್ತರಣೆ ಮಾಡಿರುವ ಬಗ್ಗೆ ಮಾಹಿತಿ ನೀಡಿದೆ. ವಾಹನಗಳ ಸಂಖ್ಯೆ ಸುಮಾರು 2 ಕೋಟಿಯಷ್ಟಿದ್ದು, ಸಮಯ ವಿಸ್ತರಣೆ ಮಾಡಿದರೂ ಈವರೆಗೆ ಸುಮಾರು 12 ಲಕ್ಷ ವಾಹನಗಳಿಗೆ ಮಾತ್ರ ಹೆಚ್ಎಸ್ಆರ್ಪಿ ಅಳವಡಿಸಲಾಗಿದೆ. ಇನ್ನೂ 1.88 ಕೋಟಿ ವಾಹನಗಳಿಗೆ ಹೆಚ್ಎಸ್ಆರ್ಪಿ ಅಳವಡಿಸುವುದು ಬಾಕಿ ಇರಲಿದ್ದು, ಈ ಬಗ್ಗೆ ಸಾರಿಗೆ ಇಲಾಖೆ ಪದೇ ಪದೇ ವಾಹನ ಸವಾರರಿಗೆ ಸೂಚನೆ ನೀಡುತ್ತಲೇ ಬಂದಿದೆ. ಆದರೂ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಇರಲಿದ್ದು, ಇದೀಗ ಜುಲೈ ನಾಲ್ಕರವರೆಗೆ ಸಮಯ ಸಿಕ್ಕಂತೆ ಆಗಿದೆ. ಒಂದು ವೇಳೆ ನಂಬರ್ ಪ್ಲೇಟ್ ಬದಲಿಸದೇ ಇದ್ದರೆ ಭಾರೀ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರಿಗೆ ಮೊದಲ ಬಾರಿಗೆ 1,000 ರೂ ದಂಡ. ಎರಡನೇ ಬಾರಿ ಸಿಕ್ಕಿಬಿದ್ದರೆ 2,000 ರೂ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಇಂತಿಷ್ಟು ಮೊತ್ತ ಮಾತ್ರ ನೀಡಿ
ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಇಂತಿಷ್ಟು ಮೊತ್ತ ಎಂದು ನಿಗದಿ ಕೂಡ ಮಾಡಿದ್ದು, ದ್ವಿಚಕ್ರವಾಹನ ಸವಾರರಿಗೆ ಸರ್ಕಾರ 450 ರೂಪಾಯಿ 550 ರೂಪಾಯಿ, ಆಟೋ ಸೇರಿದಂತೆ ತ್ರಿಚಕ್ರ ವಾಹನಗಳಿಗೆ 450 ರೂಪಾಯಿ 550 ರೂಪಾಯಿಗಳವರೆಗೆ ಹಣ ನಿಗದಿ ಮಾಡಿದ್ದು, 4 ಚಕ್ರದ ವಾಹನಗಳಿಗೆ ರೂಪಾಯಿ 650 ರಿಂದ 780 ರೂ. ಟ್ರಕ್‌ಗಳು ಬಸ್‌ಗಳು ಸೇರಿದಂತೆ 10 ಚಕ್ರದ ವಾಹನಗಳಿಗೆ ಸರ್ಕಾರ 650 ರೂಪಾಯಿಯಿಂದ 800 ರೂಪಾಯಿ ಹಣ ನಿಗದಿ ಮಾಡಿದೆ.
ಇದರಿಂದ ಲಾಭ ಏನು?
ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವುದರಿಂದ ಹಲವು ರೀತಿಯ ಲಾಭ ಪಡೆಯಬಹುದು. ನಿಮ್ಮ ವಾಹನ ದ ಸಂಪೂರ್ಣ ಮಾಹಿತಿ ಇದರಲ್ಲಿ ಅಡಕವಾಗಿ ಇರಲಿದ್ದು, ನಿಮ್ಮ ವಾಹನದ ಎಂಜಿನ್ ಸಂಖ್ಯೆ, ಚಾಸ್ಸಿ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳು ಇರುತ್ತವೆ. ಒಂದು ವೇಳೆ ನಿಮ್ಮ ವಾಹನ ಕಳ್ಳತನವಾದ್ರೆ ಈ ಮಾಹಿತಿಯ ಮೇರೆಗೆ ಪತ್ತೆ ಹಚ್ಚಬಹುದು.ವಾಹನವನ್ನ ಕಳ್ಳತನ ಮಾಡಿ ಅದರ ನಂಬರ್ ಪ್ಲೇಟ್ ತೆಗೆದು ಹಾಕಿ ಭಯೋತ್ಪಾದನೆ ಸೇರಿದಂತೆ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳುವುದನ್ನೂ ಹೆಚ್ಎಸ್ಆರ್ಪಿ ಪ್ಲೇಟ್ ಮೂಲಕ ತಡೆಗಟ್ಟಬಹುದಾಗಿದೆ.
ಹಾಗಾಗಿ ಹೆಚ್ಎಸ್ಆರ್ಪಿ ಅಳವಡಿಕೆ ಮಾಡದೇ ಇದ್ದವರು ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ
