Home ಕರ್ನಾಟಕ ಕರಾವಳಿ ಉಪ್ಪಿನಂಗಡಿ ಮಹಿಳೆ ಸಾವು ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್:‌ ಚಿಕ್ಕಮ್ಮನನ್ನೇ ಕತ್ತು ಹಿಸುಕಿ ಕೊಲೆಗೈದ ಬಾಲಕ

ಉಪ್ಪಿನಂಗಡಿ ಮಹಿಳೆ ಸಾವು ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್:‌ ಚಿಕ್ಕಮ್ಮನನ್ನೇ ಕತ್ತು ಹಿಸುಕಿ ಕೊಲೆಗೈದ ಬಾಲಕ

0
ಉಪ್ಪಿನಂಗಡಿ ಮಹಿಳೆ ಸಾವು ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್:‌ ಚಿಕ್ಕಮ್ಮನನ್ನೇ ಕತ್ತು ಹಿಸುಕಿ ಕೊಲೆಗೈದ ಬಾಲಕ

ಉಪ್ಪಿನಂಗಡಿ: ಇಲ್ಲಿನ ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸಿನಲ್ಲಿ ನಡೆದಿದ್ದ ಮಹಿಳೆ ಸಾವು ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಪ್ರಕರಣದ ತನಿಖೆಯ ವೇಳೆ ಮಹಿಳೆಯ ಅಕ್ಕನ ಮಗನೇ ಆಕೆಯನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮೃತ ಮಹಿಳೆ ಹೇಮಾವತಿಯ ಅಕ್ಕನ ಮಗ ತಾನೇ ಚಿಕ್ಕಮ್ಮನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಆತ ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾನೆ ಎನ್ನುವ ವಿಚಾರ ಕೇಳಿ ಎಲ್ಲರೂ ಕೂಡ ದಂಗಾಗಿದ್ದಾರೆ.

ಹೌದು, ಹೇಮಾವತಿ ಅವರ ಸಾವಿನ ಬಳಿಕ ಮೃತದೇಹದ ಮೇಲೆ ಇರುವ ಗಾಯಗಳನ್ನು ನೋಡಿ ಅನುಮಾನ ವ್ಯಕ್ತಪಡಿಸಿದ ಆಕೆಯ ಪತಿ ವಿಠಲ ಪೈ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕೊಲೆಯಾದ ದಿನ ಹೇಮಾವತಿ ಅವರ ಮನೆಯಲ್ಲಿದ್ದ ಅವರ ಅಕ್ಕನ ಮಗನನ್ನು ವಶಕ್ಕೆ ಪಡೆದುಕೊಂಡು, ಆತನನ್ನು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ತಾನು ಚಿಕ್ಕಮ್ಮನ ಜೊತೆ ಅನುಚಿತವಾಗಿ ವರ್ತಿಸಿದ್ದು, ಆಗ ಆಕೆ ಪ್ರತಿರೋಧ ಒಡ್ಡಿದ್ದಕ್ಕೆ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

 

LEAVE A REPLY

Please enter your comment!
Please enter your name here