Home ಸಿನೆಮಾ ನಟ ದರ್ಶನ್‌ ಪರ ವಾದ ಮಂಡಿಸಲಿದ್ದಾರೆ ಈ ಖ್ಯಾತ ವಕೀಲ…

ನಟ ದರ್ಶನ್‌ ಪರ ವಾದ ಮಂಡಿಸಲಿದ್ದಾರೆ ಈ ಖ್ಯಾತ ವಕೀಲ…

0
ನಟ ದರ್ಶನ್‌ ಪರ ವಾದ ಮಂಡಿಸಲಿದ್ದಾರೆ ಈ ಖ್ಯಾತ ವಕೀಲ…

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ವಿಚಾರಕ್ಕೆ ಸಮಬಂಧಿಸಿದಂತೆ 9 ದಿನಗಳ ಕಾಲ ಪೊಲೀಸ್‌ ಕಸ್ಟಡಿಯಲ್ಲಿದ್ದ ದರ್ಶನ್‌ ಅವರನ್ನು ಗುರುವಾರ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.  ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದಲ್ಲಿ ಭಾಗಿಯಾದ 9 ಜನರಿಗೆ ಕೋರ್ಟ್‌ ನ್ಯಾಯಾಂಗ ಬಂಧನವಿಧಿಸಿದ್ದು, ದರ್ಶನ್‌ ಸೇರಿ ಉಳಿದ ನಾಲ್ವರನ್ನು ಮತ್ತೆ ಪೊಲೀಸ್‌ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶ ನೀಡಿತ್ತು.

ಇದೀಗ ಮತ್ತೆ ಎರಡು ದಿನಗಳ ಕಾಲ ಪೊಲೀಸ್‌ ಕಸ್ಟಡಿಯಲ್ಲಿ ದರ್ಶನ್‌ ಇರಲಿದ್ದು, ಪೊಲೀಸರ ಪ್ರಶ್ನೆಗಳಿಗೆ ಬಹಳ ಶಾಂತ ರೀತಿಯಲ್ಲಿ ಉತ್ತರಿಸುತ್ತಿದ್ದಾರೆ ಎನ್ನಲಾಗಿದೆ. ಶನಿವಾರ ಪೊಲೀಸ್ ಕಸ್ಟಡಿ ಮಗಿಯುವ ಹಿನ್ನೆಲೆ ದರ್ಶನ್‌ ಪರ ವಾದ ಮಂಡಿಸಲು ಪತ್ನಿ ವಿಜಯಲಕ್ಷ್ಮೀ ವಕೀಲರನ್ನು ನೇಮಕ ಮಾಡಿದ್ದು, ನುರಿತ ಕ್ರಿಮಿನಲ್‌ ಹಿರಿಯ ವಕೀಲ ಸಿ.ವಿ.ನಾಗೇಶ್‌ ವಾದ ಮಂಡಿಸಲಿದ್ದಾರೆ ಎನ್ನಲಾಗಿದೆ.

ಇನ್ನು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಿಂದ ಪಾರಾಗಲು ದರ್ಶನ್‌ 40 ಲಕ್ಷ ಸಾಲ ಮಾಡಿದ್ದರು ಎನ್ನುವ ವಿಚಾರ ಪೊಲೀಸ್‌ ತನಿಖೆ ವೇಳೆ ಹೊರಬಂದಿದೆ. ಅಲ್ಲದೇ ಕೊಲೆಗೆ ಪವಿತ್ರಾ ಗೌಡ ಅವರದ್ದೇ ಮಾಸ್ಟರ್‌ ಮೈಂಡ್‌ ಎನ್ನುವುದು ಕೂಡ ಈ ವೇಳೆ ತಿಳಿದುಬಂದಿದೆ ಎಂದು ಹೇಳಲಾಗಿದೆ.

 

LEAVE A REPLY

Please enter your comment!
Please enter your name here