
ಇಂದು ಪಡಿತರ ಧಾನ್ಯ ಪಡೆಯುವ ಉದ್ದೇಶಕ್ಕಿಂತ ಹೆಚ್ಚಾಗಿ ಸರ್ಕಾರಿ ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ದುರ್ಬಳಕೆ ಮಾಡಿಕೊಂಡವರ ಸಂಖ್ಯೆ ಹೆಚ್ಚಾಗಿದೆ. ಹೌದು ಇಂದು ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಮಾಡಿಸಿಕೊಡಂತಹ ಹಲವಾರು ಮಂದಿ ಇದ್ದಾರೆ. ಇಂತಹ ಕಾರ್ಡ್ ದಾರರಿಗೆ ಆಹಾರ ಇಲಾಖೆ ಹಲವಾರು ಭಾರೀ ಸೂಚನೆ ನೀಡಿದೆ. ಇದೀಗ ರೇಷನ್ ಕಾರ್ಡ್ ದುರ್ಬಳಕೆ ಮಾಡಿದರವರ ಪಟ್ಟಿ ಬಿಡುಗಡೆಯಾಗಿದ್ದು ನಿಮ್ಮ ಹೆಸರು ಇದೆಯಾ ಎಂದು ನೀವು ಚೆಕ್ ಮಾಡಬಹುದಾಗಿದೆ.
ಹೌದು ಇಂದು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೂ ಈ ರೇಷನ್ ಕಾರ್ಡ್ ಅಗತ್ಯ ಇದೆ. ಅದೇ ರೀತಿ ಕೇಂದ್ರದಿಂದ ಸಿಗುವ ಎಲ್ಲ ಸೌಲಭ್ಯಗಳಿಗೂ ಈ ಕಾರ್ಡ್ ಬೇಕಿದ್ದು ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಮಾಡಿಸಿದ್ದಾರೆ.
ಇಂದು ಎಪಿಎಲ್ ಕಾರ್ಡ್ ಗಿಂತ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡವರೇ ಹೆಚ್ಚು. ಅದರಲ್ಲೂ, ಎಪಿಎಲ್ ಕಾರ್ಡ್ ದಾರರು ಬಿಪಿಎಲ್ ಕಾರ್ಡ್ ಮಾಡಿಸಲು ತಿದ್ದುಪಡಿಗಾಗಿ ಅರ್ಜಿ ಕೂಡ ಹಾಕಿದ್ದಾರೆ. ಇದನ್ನು ಆಹಾರ ಇಲಾಖೆ ಸೂಕ್ಷ್ಮ ವಾಗಿ ಪರಿಶೀಲನೆ ಮಾಡಿದ್ದು ಇಂತಹ ಕಾರ್ಡ್ ಅನ್ನು ಅನರ್ಹರ ಲಿಸ್ಟ್ ಗೆ ಸೇರಿಸಿದೆ.
ಇಂತವರ ಕಾರ್ಡ್ ರದ್ದು
*ರೇಷನ್ ಕಾರ್ಡ್ ಇದ್ದರೂ 6 ತಿಂಗಳಿಂದ ರೇಷನ್ ಪಡೆಯದವರ ಕಾರ್ಡ್ ಅನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿದೆ.
*ಹೆಚ್ಚು ಭೂಮಿ ಹೊಂದಿರುವ ಜನರಿಗೆ ಪಡಿತರ ಚೀಟಿಯ ಸೌಲಭ್ಯ ಇಲ್ಲ.
*ಸ್ವಂತ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಆಗಲಿದೆ ಎಂದು ಸುದ್ದಿಯಾಗಿದೆ. ವೈಟ್ ಬೋರ್ಡ್ ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ಇಲ್ಲ.
*ತೆರಿಗೆ ಪಾವತಿ ಮಾಡವವರು ಬಿಪಿಎಲ್ ಕಾರ್ಡ್ ಹೊಂದಿದ್ದು ಈ ಕಾರ್ಡ್ ರದ್ದು ಆಗಲಿದೆ
*ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ರದ್ದು
*ನಿಗದಿಪಡಿಸಿಗಿಂತ ಹೆಚ್ಚಿನ ಆದಾಯ ಹೊಂದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು ಆಗಲಿದೆ.
ಚೆಕ್ ಮಾಡಿ
ಮೊದಲಿಗೆ ನೀವು https://ahara.kar.nic.in ಇದರಲ್ಲಿ E-Ration card ಆಯ್ಕೆ ಇರಲಿದ್ದು, ಇಲ್ಲಿ Show cancelled/ Suspended list ಎನ್ನುವ ಆಪ್ಚನ್ ಮೇಲೆ ಕ್ಕಿಕ್ ಮಾಡಿ. ಬಳಿಕ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು, ವರ್ಷ ವನ್ನು ಆಯ್ಕೆ ಮಾಡಿಕೊಂಡು GO ಬಟನ್ ಮೇಲೆ ಕ್ಲಿಕ್ ಮಾಡಿದರೆ ಅನರ್ಹ ಗೊಳಿಸಿದ ಲಿಸ್ಟ್ ಸಿಗಲಿದೆ.
