Home ಕರ್ನಾಟಕ ನಿಮ್ಮ ವಾಹನದಲ್ಲಿ ಕಣ್ಣುಕುಕ್ಕುವ ಎಲ್​ಇಡಿ ಲೈಟ್ ಇದೆಯಾ? ನಿಮಗೆ ಬೀಳಲಿದೆ ದಂಡ

ನಿಮ್ಮ ವಾಹನದಲ್ಲಿ ಕಣ್ಣುಕುಕ್ಕುವ ಎಲ್​ಇಡಿ ಲೈಟ್ ಇದೆಯಾ? ನಿಮಗೆ ಬೀಳಲಿದೆ ದಂಡ

0
ನಿಮ್ಮ ವಾಹನದಲ್ಲಿ ಕಣ್ಣುಕುಕ್ಕುವ ಎಲ್​ಇಡಿ ಲೈಟ್ ಇದೆಯಾ? ನಿಮಗೆ ಬೀಳಲಿದೆ ದಂಡ

ಇಂದು ಸಾರಿಗೆ ಇಲಾಖೆಯು ಟ್ರಾಫಿಕ್ ರೂಲ್ಸ್ ಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಮಾಡುತ್ತಲೇ ಇದೆ. ಹೌದು ಸಾರಿಗೆ ನಿಯಮವನ್ನು ಎಷ್ಟೇ ಕಟ್ಟು ನಿಟ್ಟಾಗಿ ತಂದರೂ ಉಲ್ಲಂಘನೆ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಹಾಗಾಗಿ ವಾಹನ ಚಲಾಯಿಸುವಾಗ ಎಚ್ಚರದಿಂದ ಇರುವಂತೆ ಸರ್ಕಾರ ಅನೇಕ ಸಲ ಸೂಚನೆ ನೀಡಿದರೂ ನಿರ್ಲಕ್ಷ್ಯ ವಹಿಸುತ್ತಲೇ ಬಂದಿದ್ದಾರೆ. ಇಂದು ಫುಟ್ ಬಾತ್ ನಲ್ಲಿ ಚಲಿಸುತ್ತಿರುವವರ ಪ್ರಾಣ ಕೂಡ ಹೋಗಿದೆ.‌ ವಾಹನ ಸವಾರರು ಮಾಡುವ ಕೆಲವು ನಿರ್ಲಕ್ಷ್ಯದಿಂದಲೇ ಹಲವು ಅಪಘಾತ ಸಂಖ್ಯೆ ಕೂಡ ಹೆಚ್ಷಿದೆ.‌ ಈ ಹಿನ್ನೆಲೆ ಇದೀಗ ವಾಹನ ಸವಾರರಿಗೆ ಹೊಸ ನಿಯಮ ಜಾರಿ ಮಾಡಲಾಗಿದೆ.

ಇಂದು ವಾಹನದಲ್ಲಿ ಬಳಕೆ ಮಾಡುವ ಎಲ್‌ಇಡಿ ಬಲ್ಬ್ ನಿಂದಾಗಿ ಅಪಘಾತ ಸಂಖ್ಯೆ ಹೆಚ್ಚಳವಾಗಿದ್ದು ತಿಳಿದು ಬಂದಿದೆ. ಹಾಗಾಗಿ ನಿಮ್ಮ ವಾಹನದಲ್ಲಿ ಹೆಚ್ಚು ಪ್ರಕಾಶಿಸುವ ಬೆಳಕಿನ ಬಲ್ಬ್ ಬಳಕೆ ಮಾಡಬಾರದು, ಇದರಿಂದ ಇತರ ವಾಹನ ಸವಾರರಿಗೆ ತೊಂದರೆಯಾಗಲಿದೆ ಎನ್ನುವ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲಾಗಿದೆ‌. ಎಲ್‌ಇಡಿ ಬಲ್ಬ್ ನ ಪ್ರಕಾಶ ಕಣ್ಣು ಕುಕ್ಕಲಿದ್ದು ಅಡ್ಡಾದಿಡ್ಡಿ ವಾಹನ ಚಲಾಯಿಸುವುದು ಇದೆ. ಹಾಗಾಗಿಯೇ ಅಪಘಾತ ಆಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಇದೀಗ ಕಾರು, ಬೈಕ್ ಹಾಗೂ ಇತರ ವಾಹನಗಳಲ್ಲಿ ಕಣ್ಣುಕುಕ್ಕುವಂತಹ ಎಲ್​ಇಡಿ ಲೈಟ್​ಗಳನ್ನು‌ ಅಳವಡಿಸಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮಕ್ಕೆ ಸಂಚಾರ ಪೊಲೀಸರು ಮುಂದಾಗಿದ್ದಾರೆ. ಕೇಂದ್ರ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಲೈಟ್​ಗಳನ್ನು ಮಾತ್ರ ವಾಹನಗಳಲ್ಲಿ ಅಳವಡಿಸಬೇಕು ಎಂದು ಸರ್ಕಾರ ಆದೇಶ ಕೂಡ ಹೊರಡಿಸಿದೆ.

ಹಾಗಾಗಿ ತಮ್ಮ ತಮ್ಮ ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ನಮೂದಿಸಿರುವ ನಿಯಮದಂತೆ ಹೆಡ್‌ಲೈಟ್‌ಗಳನ್ನೇ ಅಳವಡಿಸಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ವಾಹನ ಸವಾರರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಕಲಂ 177 ರಡಿ ಪ್ರಕರಣಗಳನ್ನು ದಾಖಲಿಸಬಹುದಾಗಿರುತ್ತದೆ.

 

LEAVE A REPLY

Please enter your comment!
Please enter your name here