
ಗ್ಯಾಸ್ಟ್ರಿಕ್ ಸಮಸ್ಯೆ ಇತ್ತೀಚೆಗೆ ಕಾಡುವ ಬಹುದೊಡ್ಡ ಸಮಸ್ಯೆ. ಒತ್ತಡದ ಜೀವನದಲ್ಲಿ ಸರಿಯಾದ ಸಮಯದಲ್ಲಿ ಉಟ ತಿಂಡಿಯನ್ನು ಮಾಡದೇ ಇರುವುದರಿಂದ ಈ ಗ್ಯಾಸ್ಟ್ರಿಕ್ ಸಮಸ್ಯೆ ಉದ್ಭವಿಸುತ್ತದೆ. ಗ್ಯಾಸ್ಟಿಕ್ ಸಮಸ್ಯೆ ಒಮ್ಮೆ ನಮ್ಮನ್ನ ಒಕ್ಕರಿಸಿದರೆ ಅದು ಸದ್ಯ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಇದರ ನಿವಾರಣೆಗೆ ಕೇವಲ ಇಂಗ್ಲಿಷ್ ಮಡಿಸಿನ್ಸ್ ಮೊರೆ ಹೋಗುವುದು ಸರಿಯಲ್ಲ. ಬದಲಾಗಿ ಕೆಲವೊಂದು ಸಿಂಪಲ್ ಟಿಪ್ಸ್ ಉಯೋಗಿಸಿ ಬಹಳ ಸುಲಭವಾಗಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನ ನಿವಾರಿಸಿಕೊಳ್ಳಬಹುದಾಗಿದೆ. ಹಾಗಿದ್ರೆ ಅದು ಯಾವುದು ಅಂತಾ ಹೇಳ್ತೀವಿ ನೋಡಿ..
ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ವೇಳೆ ಬೆಚ್ಚಗಿನ ನೀರು ಕುಡಿಯಬೇಕು. ಊಟವಾದ ತಕ್ಷಣ ನೀರು ಸೇವನೆ ಒಳ್ಳೆಯದಲ್ಲ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯುಳ್ಳವರು ತುಳಸಿ ಎಲೆ ಸೇವನೆ ಮಾಡುವುದು ಉತ್ತಮ. 4-5 ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿ.
ಹಾಲಿಗೆ ಸ್ವಲ್ಪ ಕಾಳು ಮೆಣಸಿನ ಪುಡಿ ಸೇರಿಸಿ ಕುಡಿಯುವುದರಿಂದಲೂ ಗ್ಯಾಸ್ ಕಡಿಮೆಯಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬು ರಸಕ್ಕೆ ಅಡುಗೆ ಸೋಡಾ ಸೇರಿಸಿ ಕುಡಿಯುತ್ತ ಬನ್ನಿ. ಗ್ಯಾಸಿನ ಸಮಸ್ಯೆ ಜಾಸ್ತಿ ಇರುವವರು ಬಿಸಿ ನೀರಿಗೆ ಇಂಗು ಸೇರಿಸಿ ಕುಡಿಯಿರಿ. ದಿನಕ್ಕೆ ಮೂರು ಬಾರಿ ಹೀಗೆ ಮಾಡುತ್ತ ಬಂದರೆ ಗ್ಯಾಸ್ ನಿಯಂತ್ರಣಕ್ಕೆ ಬರುತ್ತದೆ.
ದಾಲ್ಚಿನಿ ಕೂಡ ಗ್ಯಾಸ್‌ಗೆ ಒಳ್ಳೆಯ ಮನೆ ಮದ್ದು. ನೀರಿಗೆ ದಾಲ್ಚಿನಿ ಪುಡಿ ಸೇರಿಸಿ ಕುದಿಸಿ ತಣ್ಣಗಾದ ಮೇಲೆ ದಿನಕ್ಕೆ ಎರಡು ಬಾರಿ ಕುಡಿಯಿರಿ. ಬೆಳ್ಳುಳ್ಳಿ, ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನು ನೀರಿಗೆ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ.
