Home ಸುದ್ದಿಗಳು ರಾಜ್ಯ ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ, ಇಲ್ಲದಿದ್ದಲ್ಲಿ ಈ ಯೋಜನೆಯ ಸೌಲಭ್ಯ ಇಲ್ಲ

ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ, ಇಲ್ಲದಿದ್ದಲ್ಲಿ ಈ ಯೋಜನೆಯ ಸೌಲಭ್ಯ ಇಲ್ಲ

0
ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ, ಇಲ್ಲದಿದ್ದಲ್ಲಿ ಈ ಯೋಜನೆಯ ಸೌಲಭ್ಯ ಇಲ್ಲ

ಈಗಾಗಲೇ ಆಸ್ತಿ ಅಕ್ರಮ ನೋಂದಣಿ ತಡೆಗೆ ರಾಜ್ಯ ಸರ್ಕಾರ ‘ನನ್ನ ಆಧಾರ್‌ದೊಂದಿಗೆ ನನ್ನ ಆಸ್ತಿ ಅಭಿಯಾನ ಆರಂಭ ಮಾಡಿದ್ದು ಈ ಬಗ್ಗೆ ರೈತರಿಗೆ ಅರಿವನ್ನು ಮುಡಿಸಲು ಹೆಚ್ಚಿನ ಪ್ರಯತ್ನ ಮಾಡುತ್ತಿದೆ.. ರಾಜ್ಯದ 4.03 ಕೋಟಿ ಆಸ್ತಿಗಳ ಪೈಕಿ 1.09 ಕೋಟಿ ಆಸ್ತಿ ಪಹಣಿಗೆ ಮಾತ್ರ ಆಧಾರ್ ಜೋಡಣೆ ಆಗಿದೆ. ಇನ್ನು ಹೆಚ್ಚಿನ‌ ರೈತರು ಪಹಣಿಗೆ ಆಧಾರ್ ಗೆ ಲಿಂಕ್ ಮಾಡಲು ಬಾಕಿ ಇದ್ದಾರೆ.

ಈಗಾಗಲೇ ರಾಜ್ಯಾದ್ಯಂತ ಒಟ್ಟು 4.03 ಕೋಟಿ ಪಹಣಿಗಳಿದ್ದು, ಆ ಪೈಕಿ ಇದುವರೆಗೆ 1.16 ಕೋಟಿ ಪಹಣಿಗಳಿಗೆ ಮಾತ್ರ ಆಧಾರ್‌ ಲಿಂಕ್‌ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ಹಾಗಾಗಿ ಪಹಣಿ ‌ಜೊತೆ ಆಧಾರ್ ಲಿಂಕ್ ಮಾಡದೇ ಇದ್ದವರು ಈ ಕೆಲಸ ಮೊದಲು ಮಾಡಿ.

ಇಂದು ಸುಳ್ಳು ಪಹಣಿ ಮುಂದಿಟ್ಟುಕೊಂಡು ಯಾರದ್ದೋ ಆಸ್ತಿ, ಬೇರೆ ಯಾರೋ ನೋಂದಣಿ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ, ಪಹಣಿಗೆ ಆಧಾರ್ ಜೋಡಿಸಲಾಗುತ್ತಿದೆ. ರೈತರಿಗೂ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ತಮ್ಮ ಜಮೀನಿನ ದಾಖಲೆಗಳೊಂದಿಗೆ ಆಧಾರ್ ಜೋಡಣೆ ಮಾಡಿಕೊಳ್ಳುವುದು ಅವಶ್ಯವಾಗಿದೆ. ಇದರಿಂದ ‌ನಿಖರವಾದ ಮಾಹಿತಿ ಕೂಡ ದೊರೆಯಲಿದೆ.

ಕಿಸಾನ್ ಹಣ ಬರಲ್ಲ
ಈಗಾಗಲೇ ಕೇಂದ್ರ ಸರ್ಕಾರ ಹದಿನೇಳನೆಯ ಕಂತಿನ ಕಿಸಾನ್ ಹಣ ಬಿಡುಗಡೆ ಮಾಡಿದ್ದು, ಈ ಹಣ ಜಮೆ ಯಾಗಬೇಕಿದ್ರೆ ರೈತರ ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ ಎನ್ನುವ ಸೂಚನೆ ನೀಡಿದೆ‌. ಹಾಗಾಗಿ ರೈತರಿಗೆ ಈ ಹಣ ಖಾತೆಗೆ ಬರಬೇಕಿದ್ದಲ್ಲಿ ಈ ಕೆಲಸ ಮೊದಲು ಮಾಡಿ.

ಹೀಗೆ ಲಿಂಕ್ ಮಾಡಿ
ಮೊದಲಿಗೆ RTC aadhar link ಇದರಲ್ಲಿ ಭೂಮಿ ವೆಬ್ಸೈಟ್ ಅನ್ನು ಕ್ಲಿಕ್ ಮಾಡಿ. ನಂತರ ಮೊಬೈಲ್ ನಂಬರ್ ಅನ್ನು ನಮೂದಿಸಿ ಕೆಳಗಿನ ಕ್ಯಾಪ್ಚ್ ಕೋಡ್ ಎಂಟರ್ ಮಾಡಿ “SEND OTP” ಬಟನ್ ಮೇಲೆ ಕ್ಲಿಕ್ ಮಾಡಿ. ಬಳಿಕ 6 ಅಂಕಿಯ OTP ಅನ್ನು ಹಾಕಿ “Login” ಮಾಡಿ. ಬಳಿಕ ಜಮೀನು ಇರುವ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ಮತ್ತು ಅಧಾರ್ ನಲ್ಲಿರುವಂತೆಯೇ ಹೆಸರನ್ನು ಹಾಕಿ “Verify” ಬಟನ್ ಮೇಲೆ ಕ್ಲಿಕ್ ಮಾಡಿ “Ok” ಎಂದು ಕ್ಲಿಕ್ ಮಾಡಬೇಕು. ಬಳಿಕ ಆಧಾರ್ ಪರಿಶೀಲನೆಯನ್ನು ಮಾಡಿ ಅಲ್ಲಿ ‌ಕೇಳಲಾದ ವಿವರಗಳನ್ನು ಭರ್ತಿ ಮಾಡಿ ಎಡಬದಿಯಲ್ಲಿ ಕಾಣುವ ಲಿಂಕ್ ಆಧಾರ್/Link Aadhar ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಸರ್ವೆ ನಂಬರ್ ಒಂದೊಂದನ್ನು ಟಿಕ್ ಮಾಡಿಕೊಂಡು “Link” ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಮತ್ತೆ ನಿಮ್ಮ ಮೊಬೈಲ್ ಗೆ ಬರುವ OTP ಅನ್ನು ನಮೂದಿಸಿ “Verify OTP” ಬಟನ್ ಮೇಲೆ ಕ್ಲಿಕ್ ಮಾಡಿದರೆ ಆಯಿತು. ಪಹಣಿಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಲು ನೀವು ಬಯಸುವಿರಾ?/ Do you want to link your Aadhaar with the RTC?” ಎಂದು ಬರಲಿದ್ದು, ಅದಕ್ಕೆ ಹೌದು/Yes ಎಂದು ಕ್ಲಿಕ್ ಮಾಡಿದರೆ ನಿಮ್ಮ ಪಹಣಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ ಎನ್ನುವ ಸಂದೇಶ ಬರಲಿದೆ.

 

LEAVE A REPLY

Please enter your comment!
Please enter your name here