Home ಆರೋಗ್ಯ ನಿಮಗೆ ಹೆಚ್ಚಾಗಿ ಓಡುವ ಅಭ್ಯಾಸ ಇದ್ದರೆ ಈ ಮಾಹಿತಿ ತಿಳಿದುಕೊಳ್ಳಿ..!

ನಿಮಗೆ ಹೆಚ್ಚಾಗಿ ಓಡುವ ಅಭ್ಯಾಸ ಇದ್ದರೆ ಈ ಮಾಹಿತಿ ತಿಳಿದುಕೊಳ್ಳಿ..!

0
ನಿಮಗೆ ಹೆಚ್ಚಾಗಿ ಓಡುವ ಅಭ್ಯಾಸ ಇದ್ದರೆ ಈ ಮಾಹಿತಿ ತಿಳಿದುಕೊಳ್ಳಿ..!

ಇತ್ತೀಚಿನ ದಿನಗಳಲ್ಲಿ ಮಾನವನಿಗೆ ದೈಹಿಕ ವ್ಯಾಯಾಮ ಕಡಿಮೆಯಾಗಿ ಬಿಟ್ಟಿದೆ. ಆಗಿನ ಕಾಲದಲ್ಲಿ ಮೈಕೈ ಮುರಿದು ಕೆಲಸ ಮಾಡುತ್ತಿದ್ದುದರಿಂದ ಅವರು ಆರೋಗ್ಯಕರವಾಗಿ, ಫಿಟ್ ಆಗಿ ಇರುತ್ತಿದ್ದರು. ಆದರೆ ಇಂದಿನ ದಿನಮಾನದವರು ಮೈ ಬಗ್ಗಿಸಿ ಕೆಲಸ ಮಾಡುವುದೇ ಇಲ್ಲ. ಕೇವಲ ಕುಳಿತುಕೊಂಡೇ ಕೆಲಸ ಮಾಡಿ ಅನವಶ್ಯಕ ಬೊಜ್ಜನ್ನು ದೇಹದಲ್ಲಿ ಬೆಳೆಸಿಕೊಂಡಿರುತ್ತಾರೆ. ಹೀಗಾಗಿ ಅವರು ದೇಹದ ಬೊಜ್ಜನ್ನು ಕರಗಿಸಲು ಬೆಳಿಗಿನ ಜಾವ ಎದ್ದು ಓಡುವುದು, ಜಾಗಿಂಗ್ ಮಾಡುವುದು ಮುಂತಾದ ಹವ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಅತಿಯಾಗಿ ಓಡುವುದರಿಂದ ಹಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹೆಚ್ಚು ಓಡುವುದು ನಿಮ್ಮ ಸ್ನಾಯುಗಳ ಮೇಲೆ ಪರಿಣಾಮ ಬೀರಬಹುದು. ಅವು ದುರ್ಬಲಗೊಂಡು ಗಾಯಗೊಳ್ಳುತ್ತವೆ.

ಇದಲ್ಲದೇ ದಿನನಿತ್ಯ ಹೆಚ್ಚು ಓಡುವವರಲ್ಲಿ ದೈಹಿಕ ಬಳಲಿಕೆಯೂ ಹೆಚ್ಚಾಗಿರುತ್ತದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ ಅವರು ಪ್ಲಾಂಟರ್ ಫ್ಯಾಸಿಟಿಸ್, ಸ್ನಾಯುಗಳ ಉರಿಯೂತಕ್ಕೆ ಗುರಿಯಾಗಬಹುದು. ಜೊತೆಗೆ, ಇದರಿಂದ ಹಿಮ್ಮಡಿಯಲ್ಲಿ ಅತಿಯಾದ ನೋವು ಉಂಟಾಗಬಹುದು.

ಓಡುವ ಮೊದಲು ದೇಹ ಬೇಗನೇ ಬೆಚ್ಚಗಾದರೆ ಜನರು ಆಯಾಸಗೊಳ್ಳುತ್ತಾರೆ. ಅಂಗಾಂಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. 10-15 ನಿಮಿಷ ಜಾಗಿಂಗ್ ಮಾಡಿ ಇಲ್ಲವೆ ನಡೆಯಿರಿ. ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.

ಓಡುವಾಗ ಹೃದಯ ಬಡಿತ ಹೆಚ್ಚಾದಾಗ ಉಸಿರಾಟದ ಪ್ರಮಾಣವೂ ಹೆಚ್ಚುತ್ತದೆ. ಉಸಿರಾಟ ವೇಗವಾದಾಗ ದೇಹವು ಹೆಚ್ಚಿನ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಅನ್ನು ಹೊರಸೂಸುತ್ತದೆ. ಇದರಿಂದ ಆಮ್ಲಜನಕವನ್ನು ಸರಿಯಾಗಿ ತೆಗೆದುಕೊಳ್ಳಲು ಕಷ್ಟವಾಗುತ್ತದೆ.

 

LEAVE A REPLY

Please enter your comment!
Please enter your name here