
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರು ಜೈಲಿನಲ್ಲಿದ್ದಾರೆ. ವಿಚಾರಣಾಧೀನ ಖೈದಿಯಾಗಿರುವ ಅವರಿಗೆ ಖೈದಿ ನಂಬರ್ ೬೧೦೬ ನೀಡಲಾಗಿದೆ. ಇದೀಗ ಈ ನಂಬರ್ ಭಾರೀ ಟ್ರೆಂಡ್ ಆಗಿದ್ದು, ಇಲ್ಲೊಬ್ಬರು ದರ್ಶನ್ ಅಭಿಮಾನಿ ತನ್ನ ಒಂದು ವರ್ಷದ ಮಗುವಿಗೆ ಖೈದಿ ಡ್ರೆಸ್ ಹಾಕಿ ಫೋಟೋಶೂಟ್ ಮಾಡಿಸಿದ್ದಾಳೆ.
ಕೆಲವು ಅಂಧಾಭಿಮಾನಿಗಳು ತಮ್ಮ ನಟನಿಗೋಸ್ಕರ ಏನೂ ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಇದೀ ಅಪರಾಧಿಯಾಗಿರುವ ದರ್ಶನ್ ಅವರು ಜೈಲಿನಲ್ಲಿದ್ದರೂ ಕೂಡ ಅವರ ಅಭಿಮಾನಿಗಳಿಗೆ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ನಟನಿಗೆ ನೀಡಿರುವ ಖೈದಿ ನಂಬರ್ ಅನ್ನೇ ತಮ್ಮ ಲಕ್ಕಿ ನಂಬರ್ ಎಂದು ಭಾವಿಸಿರುವ ಅಭಿಮಾನಿಗಳು ಈ ರೀತಿಯ ಹುಚ್ಚಾಟಕ್ಕೆ ಮುಂದಾಗುತ್ತಿದ್ದಾರೆ.
ಆಗಿನ ಕಾಲದಲ್ಲಿ ಜನರು ಕೃಷ್ಣನ ವೇಷ, ರಾಮನ ವೇಷ ಎಲ್ಲಾ ಹಾಕಿ ಸಂತಸ ಪಡುತ್ತಿದ್ದಾರು. ಆದರೆ ಈಗಿನ ಕಾಲದ ಜನ ಟ್ರೆಂಡ್ ಟ್ರೆಂಡ್ ಎಂದು ಟ್ರೆಂಡ್‌ನ ಹಿಂದೆ ಹೋಗಿ ಅಂದಾಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಮಗುವಿಗೆ ಈ ರೀತಿ ಖೈದಿ ಡ್ರೆಸ್ ಹಾಕಿ ೬೧೦೬ ನಂಬರ್ ಹಾಕಿ ಪಕ್ಕದಲ್ಲಿ ಕೋಳ ಇರುವಂತೆ ಫೋಟೋಶೂಟ್ ಮಾಡಿಸಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ನೆಟ್ಟಿಗರ ಕಂಗೆಣ್ಣಿಗೆ ಗುರಿಯಾಗಿದೆ.
