Home ಆರೋಗ್ಯ ಮಲಬದ್ಧತೆ ನಿವಾರಣೆಗೆ ನಿಂಬೆ ಪಾನಕ ಉತ್ತಮ ಮನೆಮದ್ದು..!

ಮಲಬದ್ಧತೆ ನಿವಾರಣೆಗೆ ನಿಂಬೆ ಪಾನಕ ಉತ್ತಮ ಮನೆಮದ್ದು..!

0
ಮಲಬದ್ಧತೆ ನಿವಾರಣೆಗೆ ನಿಂಬೆ ಪಾನಕ ಉತ್ತಮ ಮನೆಮದ್ದು..!

ಮಲಬದ್ಧತೆ ಇತ್ತೀಚಿನ ಆಹಾರ ಕ್ರಮಗಳಿಂದ ಹೆಚ್ಚಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಮಲಬದ್ಧತೆ ಸಮಸ್ಯೆ ಕಾಣಿಸಿಕೊಂಡರೆ ಜೀವದ ಮೇಲೆ ಜಿಗುಪ್ಸೆ ಬರುತ್ತದೆ. ಸಾಮಾನ್ಯವಾಗಿ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೆ ಅಥವಾ ಅವರ ದೇಹ ಪ್ರಕೃತಿಯ ಆಧಾರದ ಮೇಲೆ ಮಲಬದ್ಧತೆ ಸಮಸ್ಯೆ ನಮ್ಮನ್ನು ಕಾಡುತ್ತಿರುತ್ತದೆ. ಮಲಬದ್ಧತೆ ಸಮಸ್ಯೆ ಕಾಣಿಸಿಕೊಂಡಾಗ ನಮಗೆ ಮೊದಲು ನೆನಪಾಗುವುದು ಇಂಗ್ಲಿಷ್ ಮಡಿಸಿನ್ಸ್ಗಳು. ಇವುಗಳ ಸೇವನೆಯಿಂದ ಸೈಡ್ ಎಫೆಕ್ಟ್ ಕಾಣಿಸಿಕೋಳ್ಳಬಹುದು. ಆದರೆ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಮನೆಯಲ್ಲೇ ಸುಲಭ ಪರಿಹಾರ ಕಂಡುಕೊಳ್ಳಬಹುದು. ಕೇವಲ ಈ ಜ್ಯೂಸ್ ಗಳನ್ನು ಸೇವಿಸಿದರೆ ಸಾಕು ಮಲಬದ್ಧತೆ ಮಂಗಮಾಯ. ಹಾಗಾದ್ರೆ ಯಾವುದು ಆ ಜ್ಯೂಸ್ ಅಂತ ನೀವೂ ತಿಳಿಯಿರಿ.

ಮೂಸಂಬಿ ಜ್ಯೂಸ್: ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಕರುಳಿನಲ್ಲಿರುವ ವಿಷಕಾರಿ ಅಂಶ ನಾಶವಾಗುತ್ತದೆ. ಮೂಸಂಬಿ ಜ್ಯೂಸ್‌ಗೆ ಒಂದು ಚಿಟಿಕಿ ಉಪ್ಪು ಸೇರಿಸಿ ಕುಡಿದರೆ ಉತ್ತಮ.

ಪೈನಾಪಲ್ ಜ್ಯೂಸ್: ಪೈನಾಪಲ್ ದೇಹಕ್ಕೆ ಸಾಕಷ್ಟು ನೀರಿನಂಶ ಒದಗಿಸುತ್ತದೆ. ಇದರಿಂದಾಗಿ ಮಲ ವಿಸರ್ಜನೆ ಸುಗಮವಾಗುತ್ತದೆ.

ಕಲ್ಲಂಗಡಿ ಹಣ್ಣಿನ ಜ್ಯೂಸ್: ಕಲ್ಲಂಗಡಿ ಹಣ್ಣಿನ ಜ್ಯೂಸ್ ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಹೀಗಾಗಿ ಕರುಳು ಸಂಬಂಧಿ ಸಮಸ್ಯೆಗಳಿಗೆ ಕಲ್ಲಂಗಡಿ ಹಣ್ಣು ಉತ್ತಮ.

ನಿಂಬೆ ಪಾನಕ: ನಿಂಬೆಯಲ್ಲಿರುವ ವಿಟಮಿನ್ ಸಿ ಅಂಶ ಅಜೀರ್ಣ ಹೋಗಲಾಡಿಸುತ್ತದೆ. ಮಲ ವಿಸರ್ಜಿಸಲು ಕಷ್ಟವಾಗುತ್ತಿದ್ದರೆ, ಪ್ರತಿ ನಿತ್ಯ ಎರಡು ಲೋಟ ನಿಂಬೆ ಪಾನಕ ಸೇವಿಸಿದರೆ ಸಾಕು.

 

LEAVE A REPLY

Please enter your comment!
Please enter your name here